ಹೈದರಾಬಾದ್: ಹೈದರಾಬಾದ್ ಹಬೀಬ್ ನಗರ ಪೊಲೀಸ್ ಠಾಣೆ ವ್ಯಾಪ್ತಿಯ ಲಾಡ್ಜ್ ನಲ್ಲಿ ಮಹಿಳೆ ಮೇಲೆ ಆಕೆಯ ಮಾವನೇ ಅತ್ಯಾಚಾರ ಎಸಗಿದ ಆರೋಪ ಕೇಳಿಬಂದಿದೆ.
21 ವರ್ಷದ ಮಹಿಳೆ ಮಾವನ ವಿರುದ್ಧ ಪೊಲೀಸರಿಗೆ ದೂರು ನೀಡಿದ್ದಾಳೆ. ಬಟ್ಟೆ ವ್ಯಾಪಾರ ಮಾಡಿಕೊಂಡಿರುವ ದೆಹಲಿಯ ಮಹಿಳೆ ಮಾವನೊಂದಿಗೆ ಬಟ್ಟೆ ಖರೀದಿಸಲು ಹೈದರಾಬಾದಿಗೆ ಬಂದಿದ್ದಳು. ಅವರು ಹೈದರಾಬಾದ್ ನಲ್ಲಿ ಬಟ್ಟೆ ಖರೀದಿಸಿ ದೆಹಲಿಯಲ್ಲಿ ಮಾರಾಟ ಮಾಡುತ್ತಿದ್ದರು. ಲಾಡ್ಜ್ ನಲ್ಲಿ ಉಳಿದುಕೊಂಡಿದ್ದ ವೇಳೆ ಒಂಟಿಯಾಗಿದ್ದ ಮಹಿಳೆ ಮೇಲೆ ಮಾವ ಲೈಂಗಿಕ ದೌರ್ಜನ್ಯ ಎಸಗಿದ್ದಾನೆ. ಹಬೀಬ್ ನಗರ ಠಾಣೆ ಪೊಲೀಸರು ಮುಂದಿನ ಕ್ರಮ ಕೈಗೊಂಡಿದ್ದಾರೆ ಎಂದು ಹೇಳಲಾಗಿದೆ.