
ಬಳ್ಳಾರಿ: ಹೊಲದಲ್ಲಿ ಚಿರತೆ ದಾಳಿಗೆ 21 ಕುರಿಗಳು ಸಾವನ್ನಪ್ಪಿದ ಘಟನೆ ಸಂಜೀವತಾಯನ ಕೋಟೆ ಗ್ರಾಮದ ಬಳಿ ನಡೆದಿದೆ.
ಬಳ್ಳಾರಿ ತಾಲೂಕಿನ ಸಂಜೀವತಾಯನಕೋಟೆ ಗ್ರಾಮದ ಬಳಿ ಹೊಲದಲ್ಲಿದ್ದ 21 ಕುರಿಗಳನ್ನು ಸಾಯಿಸಿದ ಚಿರತೆ ಎರಡು ಕುರಿಗಳನ್ನು ಎಳೆದುಕೊಂಡು ಹೋಗಿದೆ. ರೈತ ಸಣ್ಣ ತಿಮ್ಮಪ್ಪ ಎಂಬುವರಿಗೆ ಸೇರಿದ 21 ಕುರಿಗಳು ಮೃತಪಟ್ಟಿವೆ. ಬಳ್ಳಾರಿ ಗ್ರಾಮಾಂತರ ಠಾಣಾ ವ್ಯಾಪ್ತಿಯಲ್ಲಿ ಪ್ರಕರಣ ನಡೆದಿದೆ.