ನವದೆಹಲಿ: ಭಾರತೀಯ ವೈದ್ಯಕೀಯ ಸಂಶೋಧನಾ ಮಂಡಳಿ(ಐಸಿಎಂಆರ್) ಹೆಸರಿನಲ್ಲಿ ಸಾಮಾಜಿಕ ಜಾಲತಾಣಗಳಲ್ಲಿ ನಕಲಿ ಸಲಹೆಗಳು ಹರಿದಾಡುತ್ತಿರುವ ಬಗ್ಗೆ ಎಚ್ಚರಿಕೆ ನೀಡಿದೆ.
ಕೊರೊನಾ ಸಾಂಕ್ರಾಮಿಕ ರೋಗದ ಸಂದರ್ಭದಲ್ಲಿ ಕೆಲವು ಸಲಹೆಗಳನ್ನು ಅನುಸರಿಸಬೇಕು ಮತ್ತು ಕೆಲವು ಸಲಹೆಗಳನ್ನು ಅನುಸರಿಸಬಾರದು ಎಂಬುದರ ಬಗ್ಗೆ ಐಸಿಎಂಆರ್ ತಿಳಿಸಿರುವಂತೆಯೇ ನಕಲಿ ಮಾಹಿತಿ ಹರಿದಾಡುತ್ತಿದೆ. ಈ ಬಗ್ಗೆ ಸ್ಪಷ್ಟನೆ ನೀಡಿರುವ ಐಸಿಎಂಆರ್, ಅಂತಹ ಯಾವುದೇ ಸಲಹೆಗಳನ್ನು ಬಿಡುಗಡೆ ಮಾಡಿಲ್ಲ ಎಂದು ಸ್ಪಷ್ಟಪಡಿಸಿದೆ. ಹರಿದಾಡುತ್ತಿರುವ ಮಾಹಿತಿ ನಕಲಿಯಾಗಿದೆ ಎಂದು ತಿಳಿಸಿದೆ.
ಐಸಿಎಂಆರ್ ಸಲಹೆ ನೀಡಿರುವ ಸಲಹೆಗಳೆಂದು ಸಾಮಾಜಿಕ ಮಾಧ್ಯಮದ ಪ್ಲಾಟ್ ಫಾರ್ಮ್ ಗಳಲ್ಲಿ ನಕಲಿ 21 ಸಲಹೆಗಳು ಹರಿದಾಡುತ್ತಿವೆ. ಅಂತಹ ಯಾವುದೇ ಮಾರ್ಗಸೂಚಿ ಅಥವಾ ಸಲಹೆಗಳನ್ನು ನೀಡಿಲ್ಲ. ಅದು ನಕಲಿಯಾಗಿದೆ ಎಂದು ಹೇಳಲಾಗಿದೆ.
ನಕಲಿ ಪಟ್ಟಿಯು ಎರಡು ವರ್ಷ ವಿದೇಶ ಪ್ರವಾಸ ಮುಂದೂಡುವುದು, ಒಂದು ವರ್ಷ ಹೊರಗೆ ಊಟ ಮಾಡಬಾರದು, ಕೆಮ್ಮು ಇರುವ ವ್ಯಕ್ತಿಯಿಂದ ದೂರವಿರಿ, ಕನಿಷ್ಠ ಒಂದು ವರ್ಷ ಜನದಟ್ಟಣೆಯ ಸ್ಥಳಕ್ಕೆ ಹೋಗಬೇಡಿ, ಬೂಟುಗಳನ್ನು ಮನೆಯೊಳಗೆ ತರಬೇಡಿ, ಹೊರಗೆ ಹೋಗುವಾಗ ಉಂಗುರ, ಬೆಲ್ಟ್, ವಾಚ್ ಧರಿಸಬೇಡಿ ಎಂದು ಸಲಹೆ ನೀಡಿದೆ. ಕೋವಿಡ್ ಶೀಘ್ರವೇ ಕೊನೆಯಾಗುವುದಿಲ್ಲ. ಲಾಕ್ಡೌನ್ ಪರಿಗಣಿಸದೇ ಮುಂದಿನ 6 ರಿಂದ 12 ತಿಂಗಳವರೆಗೆ ಮುನ್ನೆಚ್ಚರಿಕೆ ಅನುಸರಿಸಿ ಎಂದು ಐಸಿಎಂಆರ್ ಹೇಳಿರುವುದಾಗಿ ಜಾಲತಾಣಗಳಲ್ಲಿ ಹರಿದಾಡುತ್ತಿದೆ.
ಈ ಬಗ್ಗೆ ಸ್ಪಷ್ಟನೆ ನೀಡಿದ ಐಸಿಎಂಆರ್, ಅಂತಹ ಯಾವುದೇ ಮಾರ್ಗಸೂಚಿ ಅಥವಾ ಸಲಹೆಯನ್ನು ನೀಡಿಲ್ಲ. ಅದು ನಕಲಿ ಆಗಿದೆ ಎಂದು ಸ್ಪಷ್ಟಪಡಿಸಿದೆ.