ಛತ್ತೀಸ್‌ಗಢದಲ್ಲಿ ವ್ಯಕ್ತಿಯೊಬ್ಬ ವಿಶಿಷ್ಟ ಸಂಕಲ್ಪದೊಂದಿಗೆ ಕಳೆದ 21 ವರ್ಷಗಳಿಂದ ಗಡ್ಡ ಬೋಳಿಸಿಕೊಂಡಿರಲಿಲ್ಲ. ಮನೇಂದ್ರಗಢ-ಚಿರ್ಮಿರಿ-ಭಾರತ್‌ಪುರ (ಎಂಸಿಬಿ)ಯನ್ನು ಹೊಸ ಜಿಲ್ಲೆ ಮಾಡಬೇಕು ಎಂಬುದು ಆತನ ಉದ್ದೇಶವಾಗಿತ್ತು.
ಕೊನೆಗೂ ಛತ್ತೀಸ್‌ಗಢ ಸರ್ಕಾರ ಎಂವಿಸಿಯನ್ನು ರಾಜ್ಯದ 32ನೇ ಜಿಲ್ಲೆಯಾಗಿ ಕಾರ್ಯಾರಂಭಿಸಿದೆ. ಸಂಕಲ್ಪ ಈಡೇರಿದ ಬೆನ್ನಲ್ಲೇ ಆರ್‌ಟಿಐ ಕಾರ್ಯಕರ್ತ, ಮನೇಂದ್ರಗಢ ನಿವಾಸಿ ರಾಮಶಂಕರ್ ಗುಪ್ತಾ ಗಡ್ಡ ಬೋಳಿಸಿಕೊಂಡಿದ್ದಾರೆ.
ಕಳೆದ ವರ್ಷ ಆಗಸ್ಟ್‌ನಲ್ಲಿ ಮನೇಂದ್ರಗಢ-ಚಿರ್ಮಿರಿ-ಭಾರತ್‌ಪುರವನ್ನು ಹೊಸ ಜಿಲ್ಲೆಯಾಗಿ ಘೋಷಿಸಿದ ನಂತರ ಗುಪ್ತಾ 21 ವರ್ಷಗಳ ನಂತರ ಗಡ್ಡ ಬೋಳಿಸಿಕೊಂಡಿದ್ದರು. ಹೊಸದಾಗಿ ಘೋಷಣೆಯಾದ ಜಿಲ್ಲೆಯನ್ನು ಉದ್ಘಾಟಿಸಲು ಸುಮಾರು ಒಂದು ವರ್ಷ ಸಮಯ ತೆಗೆದುಕೊಂಡಿದ್ದರಿಂದ, ಗುಪ್ತಾ ಮತ್ತೆ ಒಂದು ವರ್ಷ ಗಡ್ಡವನ್ನು ಬೋಳಿಸಿಕೊಳ್ಳದೆ ತಮ್ಮ ನಿರ್ಣಯವನ್ನು ಮುಂದುವರೆಸಿದರು. ಅವರ ಸಂಕಲ್ಪವು ಅಂತಿಮವಾಗಿ ಶುಕ್ರವಾರ ನೆರವೇರಿದೆ.
ಕ್ಲೀನ್ ಶೇವ್ ಲುಕ್ ಅವರದ್ದಾಯಿತು. ಗುಪ್ತಾ ಈ ಸಂಬಂಧ MCB ಜಿಲ್ಲೆಯ ಕಲೆಕ್ಟರ್‌ಗೆ ಮೊದಲ ಮನವಿ ಸಲ್ಲಿಸಿದ್ದರು. ಮನೇಂದ್ರಗಢ-ಚಿರ್ಮಿರಿ-ಭರತ್‌ಪುರ ಜಿಲ್ಲೆಯಾಗುವವರೆಗೆ ನಾನು ನನ್ನ ಗಡ್ಡವನ್ನು ಬೋಳಿಸಿಕೊಳ್ಳುವುದಿಲ್ಲ ಎಂಬುದು ಅವರ ಅಚಲ ನಿರ್ಣಯವಾಗಿತ್ತು. ಮನೇಂದ್ರಗಢ-ಚಿರ್ಮಿರಿ-ಭರತ್‌ಪುರ ಎಂದಿಗೂ ಜಿಲ್ಲೆಯಾಗದಿದ್ದರೆ ನಾನು ಗಡ್ಡವನ್ನೇ ಬೋಳಿಸುತ್ತಿರಲಿಲ್ಲ. ಇದು 40 ವರ್ಷಗಳ ಹೋರಾಟ. ಜಿಲ್ಲೆಯ ಮಾನ್ಯತೆಗಾಗಿ ಹೋರಾಡಿದವರೆಲ್ಲ ಈಗಾಗ್ಲೇ ಮೃತಪಟ್ಟಿದ್ದಾರೆ. ಅವರ ಆತ್ಮಕ್ಕೂ ಶಾಂತಿ ಸಿಗಲಿದೆ ಅಂತ ಗುಪ್ತಾ ಹೇಳಿದ್ದಾರೆ. ಜಿಲ್ಲೆಯ ಮಾನ್ಯತೆ ನೀಡಿದ ಮುಖ್ಯಮಂತ್ರಿ ಭೂಪೇಶ್ ಬಘೇಲ್‌ಗೆ ಅವರು ಧನ್ಯವಾದ ಹೇಳಿದ್ದಾರೆ.
ಮನೇಂದ್ರಗಢ ಕೇವಲ ಛತ್ತೀಸ್‌ಗಢದಲ್ಲಿ ಮಾತ್ರವಲ್ಲದೆ ದೇಶದಲ್ಲೇ ಮಾದರಿ ಜಿಲ್ಲೆಯಾಗಲಿದೆ ಅಂತಾ ವಿಶ್ವಾಸ ವ್ಯಕ್ತಪಡಿಸಿದ್ದಾರೆ. ಶುಕ್ರವಾರ ಛತ್ತೀಸ್‌ಗಢ ಮುಖ್ಯಮಂತ್ರಿ ಭೂಪೇಶ್ ಬಘೇಲ್ ಅವರು 32ನೇ ಜಿಲ್ಲೆಯಾಗಿ ಮನೇಂದ್ರಗಢ-ಚಿರ್ಮಿರಿ-ಭರತ್‌ಪುರಕ್ಕೆ ಚಾಲನೆ ನೀಡಿದರು. ಜಿಲ್ಲಾ ಕೇಂದ್ರವು ಮನೇಂದ್ರಗಢದಲ್ಲಿದ್ದು, ಚಿರ್ಮಿರಿಯಲ್ಲಿರುವ 100 ಹಾಸಿಗೆಗಳ ಆಸ್ಪತ್ರೆಯನ್ನು ಜಿಲ್ಲಾ ಆಸ್ಪತ್ರೆಯಾಗಿ ಮೇಲ್ದರ್ಜೆಗೇರಿಸಲಾಗುವುದು ಎಂದರು. ಇದೇ ಸಂದರ್ಭದಲ್ಲಿ ನೂತನ ಜಿಲ್ಲೆಯ 200 ಕೋಟಿಗೂ ಅಧಿಕ ಮೊತ್ತದ ಅಭಿವೃದ್ಧಿ ಯೋಜನೆಗಳನ್ನು ಸಹ ಸಿಎಂ ಉದ್ಘಾಟಿಸಿದರು.