alex Certify 21 ದಿನಗಳ ಪುಟ್ಟ ಮಗುವಿನ ಹೊಟ್ಟೆಯಲ್ಲಿತ್ತು 8 ಭ್ರೂಣ…! ಶಸ್ತ್ರಚಿಕಿತ್ಸೆ ವೇಳೆ ವೈದ್ಯರಿಗೇ ಶಾಕ್‌ | Kannada Dunia | Kannada News | Karnataka News | India News
ಕನ್ನಡ ದುನಿಯಾ
    Dailyhunt JioNews

Kannada Duniya

21 ದಿನಗಳ ಪುಟ್ಟ ಮಗುವಿನ ಹೊಟ್ಟೆಯಲ್ಲಿತ್ತು 8 ಭ್ರೂಣ…! ಶಸ್ತ್ರಚಿಕಿತ್ಸೆ ವೇಳೆ ವೈದ್ಯರಿಗೇ ಶಾಕ್‌

ರಾಂಚಿಯಲ್ಲಿ ಅಪರೂಪದ ಪ್ರಕರಣವೊಂದು ಬೆಳಕಿಗೆ ಬಂದಿದೆ. 21 ದಿನಗಳ ಹಸುಗೂಸಿನ ಹೊಟ್ಟೆಯಲ್ಲಿ 8 ಭ್ರೂಣಗಳು ಪತ್ತೆಯಾಗಿವೆ. ಶಸ್ತ್ರಚಿಕಿತ್ಸೆ ಮೂಲಕ ಅವುಗಳನ್ನು ಹೊರತೆಗೆಯಲಾಗಿದೆ. ಭ್ರೂಣಗಳ ಗಾತ್ರವು ಮೂರು ಸೆಂಟಿ ಮೀಟರ್‌ಗಳಿಂದ ಐದು ಸೆಂಟಿಮೀಟರ್‌ಗಳವರೆಗೆ ಇತ್ತು. ಹೊಟ್ಟೆಯಲ್ಲಿನ ಚೀಲದೊಳಗೆ ಭ್ರೂಣಗಳಿದ್ದವು ಅಂತಾ ಶಸ್ತ್ರಚಿಕಿತ್ಸೆ ನಡೆಸಿದ ಡಾ.ಎಂ.ಡಿ.ಇಮ್ರಾನ್ ತಿಳಿಸಿದ್ದಾರೆ.

ವೈದ್ಯಕೀಯ ಪರಿಭಾಷೆಯಲ್ಲಿ, ಇದನ್ನು ಫೋಯೆಟಸ್‌-ಇನ್-ಫೆಟು (ಎಫ್‌ಐಎಫ್) ಎಂದು ಕರೆಯಲಾಗುತ್ತದೆ. ಇದು ಅಪರೂಪದ ಘಟಕವಾಗಿದ್ದು, ಅದರಲ್ಲಿ ಒಂದು ದೋಷಪೂರಿತ ಕಶೇರುಕ ಭ್ರೂಣವು ಅವಳಿ ದೇಹದೊಳಗೆ ಸುತ್ತುವರಿಯಲ್ಪಟ್ಟಿದೆ.

ಇದುವರೆಗೆ ಬೆಳಕಿಗೆ ಬಂದ ಪ್ರಕರಣಗಳಲ್ಲಿ ಕೇವಲ ಒಂದು ಭ್ರೂಣವಿತ್ತು. ಆದರೆ ಶಿಶುವಿನ ಹೊಟ್ಟೆಯಲ್ಲಿ ಎಂಟು ಭ್ರೂಣ ಪತ್ತೆಯಾಗಿರೋದು ಇದೇ ಮೊದಲು. ಐದು ಲಕ್ಷ ಮಂದಿಯ ಪೈಕಿ ಒಬ್ಬರಲ್ಲಿ ಮಾತ್ರ ಇಂತಹ ಪ್ರಕರಣ ಸಂಭವಿಸುತ್ತದೆ ಅಂತಾ ಡಾ. ಇಮ್ರಾನ್‌ ಮಾಹಿತಿ ನೀಡಿದ್ದಾರೆ.

ಅಕ್ಟೋಬರ್ 10 ರಂದು ಜಾರ್ಖಂಡ್‌ನ ರಾಮಗಢ ಜಿಲ್ಲೆಯ ಸರ್ಕಾರಿ ಆಸ್ಪತ್ರೆಯಲ್ಲಿ ಮಗು ಜನಿಸಿತ್ತು. ವೈದ್ಯರು ಹೊಟ್ಟೆಯಲ್ಲಿ ಗಡ್ಡೆಯಿರುವುದನ್ನು ಪತ್ತೆ ಮಾಡಿದ್ದಾರೆ. ಸಮಸ್ಯೆ ಆಗಬಹುದು ಎಂಬ ಕಾರಣಕ್ಕೆ ಆಪರೇಷನ್‌ ಮಾಡಿಸಲು ಪೋಷಕರಿಗೆ ಸೂಚಿಸಿದ್ದರು. ಮಗುವಿಗೆ 21 ದಿನ ತುಂಬಿದಾಗ ಆಸ್ಪತ್ರೆಗೆ ದಾಖಲಿಸಲಾಯಿತು. ಆರಂಭದಲ್ಲಿ ಚೀಲ ಅಥವಾ ಗಡ್ಡೆಯಂತಹ ವಸ್ತುವು ಕಂಡುಬಂದಿದೆ.

ಇದು ಡಯಾಫ್ರಾಮ್ ಕೆಳಗೆ ಇತ್ತು. ನವೆಂಬರ್ 1ರಂದು ಶಿಶುವನ್ನು ಪರೀಕ್ಷಿಸಿದಾಗ ಒಂದರ ನಂತರ ಒಂದರಂತೆ ಎಂಟು ಭ್ರೂಣಗಳು ಪತ್ತೆಯಾಗಿವೆ. ಶಸ್ತ್ರ ಚಿಕಿತ್ಸೆ ಯಶಸ್ವಿಯಾಗಿದ್ದು, ಸದ್ಯ ಮಗು ಆರೋಗ್ಯವಾಗಿದೆ. ಮಗು ಸದ್ಯ ತೀವ್ರ ನಿಗಾ ಘಟಕದಲ್ಲಿದ್ದು, ಇನ್ನೊಂದು ವಾರದಲ್ಲಿ ಡಿಸ್ಚಾರ್ಜ್‌ ಆಗಲಿದೆ.

Opinion Poll

  • ʼಮುಡಾʼ ಹಗರಣದಲ್ಲಿ ರಾಜೀನಾಮೆ ನೀಡ್ತಾರಾ ಸಿಎಂ ಸಿದ್ದರಾಮಯ್ಯ ?

    View Results

    Loading ... Loading ...