ನವದೆಹಲಿ : ದೆಹಲಿಯಲ್ಲಿ ನಡೆಯುತ್ತಿರುವ ಜಿ-20 ಶೃಂಗಸಭೆ ಇಂದಿಗೆ ಮುಕ್ತಾಯವಾಗುತ್ತಿದ್ದು, ಸಭೆಯಲ್ಲಿ ಪ್ರಧಾನಿ ಮೋದಿ ‘ಎಕನಾಮಿಕ್ ಕಾರಿಡಾರ್’ ಪ್ರಾಜೆಕ್ಟ್ ಘೋಷಿಸಿದ್ದಾರೆ.
ಜಗತ್ತಿನ 65 ದೇಶಗಳನ್ನು ಸಂಪರ್ಕಿಸುವ ಚೀನಾದ ಒನ್ ಬೆಲ್ಟ್ ಒನ್ ರೋಡ್ ಪ್ರಾಜೆಕ್ಟ್ ನ್ನು ಜಿ20 ಸಭೆಯಲ್ಲಿ ಪರೋಕ್ಷವಾಗಿ ತರಾಟೆಗೆ ತೆಗೆದುಕೊಂಡಿರುವ ಭಾರತ, ಅದಕ್ಕೆ ಪರ್ಯಾಯವಾದ ಎಕನಾಮಿಕ್ ಕಾರಿಡಾರ್ ಪ್ರಾಜೆಕ್ಟ್ ಅನ್ನು ಘೋಷಿಸಿದೆ.
ಹೌದು. ಪಶ್ಚಿಮ ಏಷ್ಯಾ ಮೂಲಕ ಭಾರತ ಮತ್ತು ಯೂರೋಪ್ ನಡುವೆ ಆರ್ಥಿಕ ಕಾರಿಡಾರ್ ನಿರ್ಮಿಸುವ ಯೋಜನೆಯನ್ನು ಅಮೆರಿಕ ಅಧ್ಯಕ್ಷ ಜೋ ಬೈಡನ್ ಮತ್ತು ಪ್ರಧಾನಿ ನರೇಂದ್ರ ಮೋದಿ ಪ್ರಸ್ತಾಪ ಮಾಡಿದ್ದಾರೆ.ಇಂದು ನಾವೆಲ್ಲರೂ ಒಂದು ಪ್ರಮುಖ ಮತ್ತು ಐತಿಹಾಸಿಕ ಪಾಲುದಾರಿಕೆಯನ್ನು ತಲುಪಿದ್ದೇವೆ. ಮುಂಬರುವ ದಿನಗಳಲ್ಲಿ, ಇದು ಭಾರತ, ಪಶ್ಚಿಮ ಏಷ್ಯಾ ಮತ್ತು ಯುರೋಪ್ ನಡುವಿನ ಆರ್ಥಿಕ ಏಕೀಕರಣದ ಪ್ರಮುಖ ಮಾಧ್ಯಮವಾಗಲಿದೆ” ಎಂದು ಅವರು ಹೇಳಿದರು. ಈ ಕಾರಿಡಾರ್ ಸಂಪರ್ಕ ಮತ್ತು ಇಡೀ ವಿಶ್ವದ ಸುಸ್ಥಿರ ಅಭಿವೃದ್ಧಿಗೆ ಹೊಸ ದಿಕ್ಕನ್ನು ನೀಡುತ್ತದೆ ಎಂದು ಪ್ರಧಾನಿ ಮೋದಿ ಹೇಳಿದರು
ಚೀನಾದ ಒನ್ ಬೆಲ್ಟ್ ಒನ್ ರೋಡ್ ಪ್ರಾಜೆಕ್ಟ್ ಪೂರ್ವ ಏಷ್ಯಾದಿ, ಪೂರ್ವ ಆಫ್ರಿಕಾ ಮತ್ತು ಮಧ್ಯ ಯೂರೋಪ್ನ 65 ದೇಶಗಳನ್ನು ಬೆಸೆಯುತ್ತದೆ. ಇದು 2049ರಲ್ಲಿ ಪೂರ್ಣಗೊಳ್ಳುವ ನಿರೀಕ್ಷೆ ಇದೆ. ಇದರ ಅಂದಾಜು ವೆಚ್ಚ 4ರಿಂದ 5 ಟ್ರಿಲಿಯನ್ ಡಾಲರ್ ಎನ್ನಲಾಗಿದೆ.
ದೆಹಲಿಯಲ್ಲಿ ನಡೆಯುತ್ತಿರುವ ಜಿ-20 ಶೃಂಗಸಭೆ ಇಂದಿಗೆ ಮುಕ್ತಾಯವಾಗುತ್ತಿದ್ದು, ಮುಂದಿನ G20 ಶೃಂಗಸಭೆ ಬ್ರೆಜಿಲ್ ನಲ್ಲಿ ನಡೆಯಲಿದ್ದು, ಪ್ರಧಾನಮಂತ್ರಿ ನರೇಂದ್ರ ಮೋದಿ ಅವರು ಬ್ರೆಜಿಲ್ ಅಧ್ಯಕ್ಷರಿಗೆ ಜಿ20 ಅಧ್ಯಕ್ಷ ಸ್ಥಾನದ ಜವಾಬ್ದಾರಿ ಹಸ್ತಾಂತರ ಮಾಡಿದ್ದಾರೆ.