ಹೈದರಾಬಾದ್: ಆರು ತಿಂಗಳ ಕಾಲ ತೀವ್ರ ನೋವಿನಿಂದ ಬಳಲುತ್ತಿದ್ದ 56 ವರ್ಷದ ವ್ಯಕ್ತಿಯೊಬ್ಬರಿಗೆ ಒಂದು ಗಂಟೆಯ ಶಸ್ತ್ರಚಿಕಿತ್ಸೆಯ ಮೂಲಕ ಸುಮಾರು 206 ಮೂತ್ರಪಿಂಡದ ಕಲ್ಲುಗಳನ್ನು ತೆಗೆದುಹಾಕಲಾಗಿದೆ. ಹೈದರಾಬಾದ್‌ನ ಅವೇರ್ ಗ್ಲೆನೆಗಲ್ಸ್ ಗ್ಲೋಬಲ್ ಆಸ್ಪತ್ರೆಯಲ್ಲಿ ರೋಗಿಯು ಒಂದು ಗಂಟೆ ಸುದೀರ್ಘ ಶಸ್ತ್ರಚಿಕಿತ್ಸೆಗೆ ಒಳಗಾದರು.
“ಕೀಹೋಲ್ ಶಸ್ತ್ರಚಿಕಿತ್ಸೆಗೆ ಪೂರ್ವಸಿದ್ಧತೆ ಮಾಡಲಾಯಿತು, ಇದು ಒಂದು ಗಂಟೆಯ ಕಾಲ ನಡೆಯಿತು, ಈ ಸಮಯದಲ್ಲಿ ಎಲ್ಲ ಕಿಡ್ನಿ ಕಲ್ಲುಗಳನ್ನು ತೆಗೆದುಹಾಕಲಾಗಿದೆ. ಇವುಗಳನ್ನು ಎಣಿಸಿದಾಗ 206 ಕಲ್ಲುಗಳಿದ್ದವು. ಸರ್ಜರಿ ನಂತರ, ರೋಗಿಯು ಚೇತರಿಸಿಕೊಂಡಿದ್ದು, ಎರಡನೇ ದಿನ ಆಸ್ಪತ್ರೆಯಿಂದ ಬಿಡುಗಡೆ ಮಾಡಲಾಯಿತು ಎಂದು ವೈದ್ಯರು ಹೇಳಿದರು.
ಬಟ್ಟೆ ಹಾಕಲು ಸೋಮಾರಿತನ, ಮೈತುಂಬಾ ಹಚ್ಚೆ ಹಾಕಿಸಿಕೊಂಡುಬಿಟ್ಲು ಮಹಿಳೆ….!
ನಲ್ಗೊಂಡದ ನಿವಾಸಿ ವೀರಮಲ್ಲ ರಾಮಲಕ್ಷ್ಮಯ್ಯ ಈ ರೀತಿ ಸರ್ಜರಿಗೆ ಒಳಗಾದವರು.ಇದಕ್ಕೂ ಮೊದಲು ಅವರು ಸ್ಥಳೀಯ ವೈದ್ಯರು ಸೂಚಿಸಿದ ಕೆಲವು ಔಷಧಿಗಳು ಅಲ್ಪಾವಧಿಯ ಪರಿಹಾರವನ್ನಷ್ಟೇ ನೀಡಿತ್ತು. ಆದರೆ ನೋವು ಅವನ ದಿನಚರಿಯ ಮೇಲೆ ಪರಿಣಾಮ ಬೀರಿತು ಮತ್ತು ಅವನು ತನ್ನ ಕಾರ್ಯಗಳನ್ನು ಸಮರ್ಥವಾಗಿ ನಿರ್ವಹಿಸಲು ಸಾಧ್ಯವಾಗಿರಲಿಲ್ಲ. ಹೀಗಾಗಿ ಅವರು ಏಪ್ರಿಲ್ 22 ರಂದು ಅವೇರ್ ಗ್ಲೆನೆಗಲ್ಸ್ ಗ್ಲೋಬಲ್ ಆಸ್ಪತ್ರೆಯ ವೈದ್ಯರನ್ನು ಸಂಪರ್ಕಿಸಿದ್ದರು.
ಅವೇರ್ ಗ್ಲೆನೆಗಲ್ಸ್ ಗ್ಲೋಬಲ್ ಆಸ್ಪತ್ರೆಯ ಹಿರಿಯ ಕನ್ಸಲ್ಟೆಂಟ್ ಮೂತ್ರಶಾಸ್ತ್ರಜ್ಞ ಡಾ.ಪೂಲಾ ನವೀನ್ ಕುಮಾರ್, ಆರಂಭಿಕ ಪರಿಶೀಲನೆಗಳು ಮತ್ತು ಅಲ್ಟ್ರಾಸೌಂಡ್ ಸ್ಕ್ಯಾನ್‌ಗಳ ಮೂಲಕ ಎಡ ಮೂತ್ರಪಿಂಡದಲ್ಲಿ ಕಿಡ್ನಿ ಸ್ಟೋನ್ ಇರುವಿಕೆಯನ್ನು ಬಹಿರಂಗಪಡಿಸಿದ್ದವು. ಇದನ್ನು CT KUB ಸ್ಕ್ಯಾನ್ ಮೂಲಕವೂ ದೃಢೀಕರಿಸಲಾಯಿತು ಎಂದು ಹೇಳಿದರು.
ಕೀಹೋಲ್ ಸರ್ಜರಿ ಯಶಸ್ವಿಯಾಗಿ ನಡೆಸುವಲ್ಲಿ, ಡಾ. ನವೀನ್ ಕುಮಾರ್ ಅವರ ಜತೆಗೆ ಮೂತ್ರಶಾಸ್ತ್ರಜ್ಞ ಡಾ. ವೇಣು ಮನ್ನೆ, ಮೋಹನ್, ಅರಿವಳಿಕೆ ತಜ್ಞ, ಮತ್ತು ಶುಶ್ರೂಷಾ ಮತ್ತು ಸಹಾಯಕ ಸಿಬ್ಬಂದಿ ಪ್ರಮುಖ ಪಾತ್ರವಹಿಸಿದರು.