ದೇವಸ್ಥಾನಗಳ ಆಡಳಿತದಲ್ಲಿ ಬ್ರಾಹ್ಮಣೇತರರ ನೇಮಕ ಮಾಡಿಕೊಳ್ಳುವ ಸಂಬಂಧ 2006ರಲ್ಲಿ ಆದೇಶವೊಂದನ್ನು ಹೊರಡಿಸಿದ್ದ ತಮಿಳು ನಾಡಿನ ಡಿಎಂಕೆ ಸರ್ಕಾರ, ಈ ಸಂಬಂಧ 206 ಮಂದಿ ಬ್ರಾಹ್ಮಣೇತರರನ್ನು ತರಬೇತುಗೊಳಿಸಿತ್ತು.
ಆದರೆ ಈ 206 ಮಂದಿಯ ಪೈಕಿ ಕೇವಲ ಇಬ್ಬರನ್ನು ಮಾತ್ರವೇ ಪೂಜಾರಿಗಳಾಗಿ ನೇಮಕ ಮಾಡಿಕೊಳ್ಳಲಾಗಿದ್ದು, ಒಬ್ಬರು ಮೃತಪಟ್ಟಿದ್ದಾರೆ. ಮಿಕ್ಕ 203 ಮಂದಿಗೆ ಯಾವುದೇ ನೇಮಕಾತಿ ಆಗಿಲ್ಲವಾದ ಕಾರಣ ಅವರೆಲ್ಲರೂ ಜೀವನೋಪಾಯಕ್ಕಾಗಿ ಅನ್ಯ ಮಾರ್ಗಗಳನ್ನು ಕೊಂಡುಕೊಳ್ಳಬೇಕಾಗಿ ಬಂದಿದೆ.
ಕರ್ನಾಟಕ ಬ್ಯಾಂಕ್ ಗೆ RBI ಗುಡ್ ನ್ಯೂಸ್
ತಮಿಳು ನಾಡಿನಲ್ಲಿ 36,000ಕ್ಕೂ ಹೆಚ್ಚು ದೇವಸ್ಥಾನಗಳು ಸರ್ಕಾರದ ಅಧೀನದಲ್ಲಿವೆ. ಕಳೆದ ಮೇನಲ್ಲಿ ಅಧಿಕಾರ ಸ್ವೀಕರಿಸಿದ ಮುಖ್ಯಮಂತ್ರಿ ಎಂ.ಕೆ ಸ್ಟಾಲಿನ್ ತಮ್ಮ ತಂದೆ ಕರುಣಾನಿಧಿ ಅಧಿಕಾರದಲ್ಲಿದ್ದಾಗ ತೆಗೆದುಕೊಂಡಿದ್ದ ನಿರ್ಣಯಗಳನ್ನು ಅನುಷ್ಠಾನಕ್ಕೆ ತರಲು ಮುಂದಾಗಿದ್ದಾರೆ.
ಹಿಂದೂ ಧರ್ಮದ ಎಲ್ಲಾ ಜಾತಿಯ ಮಂದಿಯನ್ನೂ ದೇವಸ್ಥಾನಗಳ ಪೂಜಾರಿಗಳನ್ನಾಗಿ ನೇಮಕ ಮಾಡಿಕೊಳ್ಳುವುದಾಗಿ ಹಿಂದೂ ಧಾರ್ಮಿಕ ಹಾಗೂ ದತ್ತಿ ಇಲಾಖೆಯ ಸಚಿವರಾದ ಪಿ ಕೆ ಶೇಖರ್ ಬಾಬು ತಿಳಿಸಿದ್ದಾರೆ.