ಈ ಅಂದಾಜುಗಳು ಹೆಚ್ಚಾಗಿ ವಿಮೆ ಮಾಡಲಾದ ನಷ್ಟಗಳನ್ನು ಆಧರಿಸಿವೆ. ಆದ್ದರಿಂದ ನಿಜವಾದ ಆರ್ಥಿಕ ನಷ್ಟಗಳು ಇನ್ನೂ ಹೆಚ್ಚಾಗಿರಬಹುದು ಎನ್ನಲಾಗಿದೆ.
ವರದಿಯಲ್ಲಿ ಕೇರಳದ ವಯನಾಡಿನಲ್ಲಿನ ಭೂಕುಸಿತದಿಂದಾದ ಉಂಟಾದ ಹಾನಿಯನ್ನು ವಿಪತ್ತುಗಳ ಪಟ್ಟಿಯಲ್ಲಿ ಸೇರಿಸಿಲ್ಲ. ಕಾರಣ: ಈ ಅಂದಾಜುಗಳು ಮುಖ್ಯವಾಗಿ ವಿಮೆ ಮಾಡಲಾದ ನಷ್ಟಗಳನ್ನು ಆಧರಿಸಿವೆ. ಜುಲೈನಲ್ಲಿ ಭಾರೀ ಮಳೆಯಿಂದಾಗಿ ಸಂಭವಿಸಿದ ಈ ಭೂಕುಸಿತಗಳಲ್ಲಿ 200ಕ್ಕೂ ಹೆಚ್ಚು ಜನರು ಸಾವನ್ನಪ್ಪಿದ್ದರು.
ಅತಿ ಹೆಚ್ಚು ಆರ್ಥಿಕ ನಷ್ಟಕ್ಕೆ ಕಾರಣವಾದ ಘಟನೆಗಳು:
ಅಕ್ಟೋಬರ್‌ನಲ್ಲಿ ಅಮೆರಿಕದಲ್ಲಿ ಸಂಭವಿಸಿದ ಹರಿಕೇನ್ ಮಿಲ್ಟನ್ 60 ಬಿಲಿಯನ್ ಡಾಲರ್‌ಗಳ ಹಾನಿಯನ್ನುಂಟುಮಾಡಿ 25 ಜನರನ್ನು ಬಲಿ ಪಡೆದಿತ್ತು.
ಸೆಪ್ಟೆಂಬರ್‌ನಲ್ಲಿ ಅಮೆರಿಕ, ಕ್ಯೂಬಾ ಮತ್ತು ಮೆಕ್ಸಿಕೋವನ್ನು ಚಂಡಮಾರುತ ಹರಿಕೇನ್ ಹೆಲೆನ್ 55 ಬಿಲಿಯನ್ ಡಾಲರ್‌ಗಳ ಹಾನಿಯನ್ನುಂಟುಮಾಡಿ 232 ಜನರನ್ನು ಬಲಿ ಪಡೆದಿತ್ತು.
ಸೆಪ್ಟೆಂಬರ್‌ನಲ್ಲಿ ಟೈಫೂನ್ ಆಗ್ನೇಯ ಏಷ್ಯಾದಲ್ಲಿ 800 ಕ್ಕೂ ಹೆಚ್ಚು ಜನರನ್ನು ಬಲಿ ಪಡೆದಿದೆ.
ಜೂನ್-ಜುಲೈ ತಿಂಗಳಿನಲ್ಲಿ ಚೀನಾದಲ್ಲಿನ ಪ್ರವಾಹಗಳು 15.6 ಬಿಲಿಯನ್ ಡಾಲರ್‌ಗಳನ್ನು ನಷ್ಟ ಮಾಡಿ 315 ಜನರನ್ನು ಬಲಿ ಪಡೆದಿದೆ.
ಮಧ್ಯ ಯುರೋಪಿನಲ್ಲಿ ಬೋರಿಸ್ ಚಂಡಮಾರುತ ಮತ್ತು ಸ್ಪೇನ್ ಮತ್ತು ಜರ್ಮನಿಯಲ್ಲಿನ ಪ್ರವಾಹಗಳು ಒಟ್ಟು 13.87 ಬಿಲಿಯನ್ ಡಾಲರ್‌ಗಳ ನಷ್ಟ ಮಾಡಿ 258 ಜನರನ್ನು ಬಲಿ ಪಡೆದಿದೆ.
2024ರಲ್ಲಿ ಹವಾಮಾನ ವೈಪರೀತ್ಯಗಳು ವಿಶ್ವವ್ಯಾಪಿ ದೊಡ್ಡ ಪ್ರಮಾಣದಲ್ಲಿ ಹಾನಿ ಮತ್ತು ನಷ್ಟವನ್ನುಂಟು ಮಾಡಿವೆ. ಇದು ಹವಾಮಾನ ಬದಲಾವಣೆಯ ತೀವ್ರತೆಯನ್ನು ತೋರಿಸುತ್ತದೆ ಮತ್ತು ತುರ್ತಾಗಿ ಕ್ರಮ ಕೈಗೊಳ್ಳುವ ಅಗತ್ಯವನ್ನು ಎತ್ತಿ ತೋರಿಸುತ್ತದೆ.