ಏಳು ಸೀಟರ್‌ನ ಯಶಸ್ವಿ ಆಫ್ ರೋಡರ್ ವಾಹನವಾಗಿ ಟೊಯೊಟಾ ಫಾರ್ಚುನರ್ ದೇಶದಲ್ಲಿ ತನ್ನ ಪಾರುಪತ್ಯವನ್ನು ಸ್ಥಾಪಿಸಿದೆ. ತನ್ನ ಪ್ರತಿಸ್ಪರ್ಧಿ ಫೋರ್ಡ್ ಎಂಡೀವರ್‌ನ ಅನುಪಸ್ಥಿತಿಯಲ್ಲಿ ಹೆಚ್ಚಿನ ಖರೀದಿದಾರರು ಫಾರ್ಚುನರ್ ಖರೀದಿಸುವ ಆಯ್ಕೆಯನ್ನೆ ಬಯಸುತ್ತಿದ್ದಾರೆ. ಈ ಮೂಲಕ ಹೆಚ್ಚಿನ ಜನಪ್ರಿಯತೆಯನ್ನು ಪಡೆದು ಮಾರುಕಟ್ಟೆಯಲ್ಲಿ ತನ್ನ ಸ್ಥಾನವನ್ನು ಭದ್ರಪಡಿಸುತ್ತಿದೆ.
ಇನ್ನು 2024 ಟೊಯೋಟಾ ಫಾರ್ಚುನರ್ ವರ್ಸನ್‌ನ ಚಿತ್ರ ಸೋರಿಕೆಯಾಗಿದ್ದು ಹಲವು ಬದಲಾಣೆಗಳು ಇದರಲ್ಲಿ ಕಂಡು ಬಂದಿದೆ. ಸೈಡ್ ಆ್ಯಂಗಲ್ ಪ್ರಸ್ತುತ ಇರುವ ಮಾದರಿಗೆ ಸ್ವಲ್ಪಮಟ್ಟಿಗೆ ಹೋಲಿಕೆಯಾಗುತ್ತಿದೆ. ಆದರೆ ಮುಂಭಾಗ ಮತ್ತು ಹಿಂಭಾಗGಳಲ್ಲಿ ಹೆಚ್ಚಿನ ಬದಲಾವಣೆ ಮಾಡಿರೋದು ಸ್ಪಷ್ಟವಾಗಿ ಕಂಡುಬರುತ್ತದೆ. ಪರಿಷ್ಕರಿಸಿದ ಎಲ್.ಇ.ಡಿ ಹೆಡ್‌ಲ್ಯಾಂಪ್ ಕ್ಲಸ್ಟರ್ ಮತ್ತು ಹೆಚ್ಚು ದುಂಡಗಿನ ಟೈಲ್ ಲ್ಯಾಂಪ್ ಯುನಿಟ್ ಕಣ್ಮನ ಸೆಳೆಯುತ್ತಿದೆ. ಇನ್ನು ಉಳಿದಂತೆ ಸೈಡ್ ಪ್ರೊಫೈಲ್‌ನ ಇತರ ಅಂಶಗಳು ಪ್ರಸ್ತುತ ಇರುವ ಫಾರ್ಚೂನರ್ ಮಾದರಿಯಂತೆ ಇದೆ.
ಪ್ರಸ್ತುತ ಇರುವ ಟೊಯೊಟಾ ಫಾರ್ಚುನರ್ ಎರಡು ಎಂಜಿನ್ ಆಯ್ಕೆಗಳನ್ನು ಒಳಗೊಂಡಿದೆ. 2.7 ಲೀಟರ್ ಪೆಟ್ರೋಲ್ ಎಂಜಿನ್ ಮತ್ತು 2.8-ಲೀಟರ್ ಟರ್ಬೊ-ಡೀಸೆಲ್ ಎಂಜಿನ್‌ನ ಫಾರ್ಚನರ್ ಮಾರುಕಟ್ಟೆಯಲ್ಲಿದೆ. ಇದರಲ್ಲಿ ಸಿಕ್ಸ್ ಗೇರ್ ವಾಹನ ಅಥವಾ ಅಟೋಮ್ಯಾಟಿಕ್ ಗೇರ್ ವಾಹನವು ಇದೆ. ಡೀಸೆಲ್ ಇಂಧನದ ವಾಹನದಲ್ಲಿ ಫೂರ್ ವೀಲರ್ ಸೌಲಭ್ಯದ ಮೂಲಕ ಎಲ್ಲಾ ನಾಲ್ಕು ಚಕ್ರಗಳಿಗೆ ಶಕ್ತಿಯನ್ನು ನೀಡಲಾಗಿದೆ. ಸದ್ಯ ಫಾರ್ಚುನರ್ ಎಕ್ಸ್ ಶೋ ರೂಂ ಬೆಲೆ 32.99 ಲಕ್ಷದಿಂದ 50.74 ಲಕ್ಷದವರೆಗೂ ಇದೆ.
ಸದ್ಯ ತಿಳಿದು ಬಂದಿರುವ ಮಾಹಿತಿಯ ಪ್ರಕಾರ ಮುಂಬರುವ HiLux ಮತ್ತು Fortuner ಸೌಮ್ಯವಾದ ಹೈಬ್ರಿಡ್ ವ್ಯವಸ್ಥೆಯನ್ನು ಹೊಂದಿರುವ ಹೊಸ ಎಂಜಿನ್ ಅನ್ನು ಹೊಂದಿರಬಹುದು ಎಂದು ಹೇಳಲಾಗುತ್ತಿದೆ. ಇದು ಇನ್ನೋವಾ ಹೈಕ್ರಾಸ್ ಮತ್ತು ಅರ್ಬನ್ ಕ್ರೂಸರ್ ಹೈರೈಡರ್‌ಗೆ ಹೋಲುವಂತಿರದೆ, ಸೌಮ್ಯವಾದ ಹೈಬ್ರಿಡ್ ವರ್ಶನ್ ಮೂಲಕ ಇಂಧನ ಉಳಿತಾಯ ಮತ್ತು ಹೆಚ್ಚುವರಿ ಕಾರ್ಯಕ್ಷಮತೆಯನ್ನು ನೀಡಬಹುದು. ಸದ್ಯಕ್ಕೆ ಈ ಬಗ್ಗೆ ಹೆಚ್ಚಿನ ವಿವರಗಳು ಲಭ್ಯವಾಗದೆ ಇದ್ದರು ಸಹ ವಾಹನ ಉತ್ಸಾಹಿಗಳು ಹೆಚ್ಚಿನ ಮಾಹಿತಿಗಾಗಿ ಕುತೂಹಲದಿಂದ ಕಾಯುತ್ತಿದ್ದಾರೆ.