ನೀವೇನಾದ್ರೂ ಹೊಸ ಲ್ಯಾಂಬೋರ್ಗಿನಿ ಕಾರನ್ನು ಖರೀದಿಸಬೇಕು ಎಂದುಕೊಂಡಿದ್ರೆ 18 ತಿಂಗಳು ಕಾಯಬೇಕು. ಯಾಕಂದ್ರೆ ಇಟಲಿ ಮೂಲದ ಈ ಕಾರುಗಳಿಗೆ ಅಷ್ಟೊಂದು ಡಿಮ್ಯಾಂಡ್ ಇದೆ. 2024ರ ವರೆಗೂ ಲ್ಯಾಂಬೋರ್ಗಿನಿ ಕಾರುಗಳಿಗೆ ಪ್ರಿ ಬುಕ್ಕಿಂಗ್ ಆಗ್ಬಿಟ್ಟಿದೆ.
ಲ್ಯಾಂಬೋರ್ಗಿನಿ ಕಾರುಗಳ ವಿನ್ಯಾಸ ಹಾಗೂ ಬ್ರ್ಯಾಂಡ್ ಗ್ರಾಹಕರನ್ನು ಸೆಳೆಯುತ್ತಿದೆ. ಕಾರು ತಯಾರಿಕಾ ಘಟಕಗಳು ಕಡಿಮೆ ಇರೋದ್ರಿಂದ ಉತ್ಪಾದನೆ ಕಡಿಮೆಯಿದ್ದು, ಕಾರು ಕೊಳ್ಳುವವರು ವರ್ಷಗಟ್ಟಲೆ ಕಾಯಬೇಕಾಗಿ ಬಂದಿದೆ.
ಭಾರತದಲ್ಲಿ ಲ್ಯಾಂಬೋರ್ಗಿನಿಯ 3 ಮಾಡೆಲ್‌ಗಳು ಲಭ್ಯವಿವೆ. ಲ್ಯಾಂಬೋರ್ಗಿನಿ ಉರಸ್, ಲ್ಯಾಂಬೋರ್ಗಿನಿ ಅವೆಂಟಡಾರ್ ಮತ್ತು ಲ್ಯಾಂಬೋರ್ಗಿನಿ ಹುರಾಕನ್ EVO. ಲ್ಯಾಂಬೋರ್ಗಿನಿ ಉರುಸ್ ಬೆಲೆ 3.15 ಕೋಟಿ ರೂಪಾಯಿಯಿಂದ ಆರಂಭವಾಗಿ 3.43 ಕೋಟಿ ರೂಪಾಯಿವರೆಗೂ ಇದೆ. ಲ್ಯಾಂಬೋರ್ಗಿನಿ ಹ್ಯುರಾಕನ್ ಬೆಲೆ 3.21 ಕೋಟಿಯಿಂದ ಆರಂಭ. ಲ್ಯಾಂಬೋರ್ಗಿನಿ ಅವೆಂಟಡೋರ್ ಬೆಲೆ 6.25 ಕೋಟಿ ರೂಪಾಯಿಂದ ಆರಂಭವಾಗಿ 9 ಕೋಟಿ ರೂಪಾಯಿವರೆಗೂ ಇದೆ.
ಇದಕ್ಕೂ ಮೊದಲು ಕೂಡ ಕಂಪನಿ ವಿಶ್ವದಾದ್ಯಂತ ದಾಖಲೆಯ ಮಾರಾಟವನ್ನು ಕಂಡಿತ್ತು. ಆಗಸ್ಟ್ ಆರಂಭದಲ್ಲಿ ದಾಖಲೆಯ ಮಾರಾಟ ಮತ್ತು ಲಾಭವನ್ನು ಗಳಿಸಿತ್ತು. ಕಂಪನಿಯ ಲಾಭವನ್ನು 425 ಮಿಲಿಯನ್ ಯುರೋಗಳಿಗೆ ಹೆಚ್ಚಳವಾಗಿತ್ತು. ಸುಮಾರು 5,090 ಲ್ಯಾಂಬೋರ್ಗಿನಿ ಕಾರುಗಳು ಮಾರಾಟವಾಗಿದ್ದವು. ಲ್ಯಾಂಬೋರ್ಗಿನಿ ತನ್ನ ಎಲ್ಲಾ ಮಾದರಿ ಕಾರುಗಳ ಹೈಬ್ರಿಡ್ ಆವೃತ್ತಿಗಳನ್ನು 2024ರ ವೇಳೆಗೆ ಬಿಡುಗಡೆ ಮಾಡಲು ಯೋಜಿಸುತ್ತಿದೆ.