
ಬೈಕ್ ಪ್ರಿಯರಿಗೆ ಗುಡ್ ನ್ಯೂಸ್ ಒಂದು ಇಲ್ಲಿದೆ. ಭಾರತದಲ್ಲಿ ತನ್ನ ಜನಪ್ರಿಯತೆಯನ್ನು ಹೆಚ್ಚಿಸಿಕೊಳ್ಳುತ್ತಿರುವ ಪ್ರೀಮಿಯಂ ಯುರೋಪಿಯನ್ ಬ್ರಾಂಡ್ ಕೆಟಿಎಂ, ಈಗ ಮತ್ತೊಂದು ಮಾಡೆಲ್ ಅನ್ನು ಭಾರತದ ಮಾರುಕಟ್ಟೆಗೆ ಬಿಡುಗಡೆ ಮಾಡಿದ್ದು, ಇದರ ವಿವರ ಇಂತಿದೆ.
2023 ಕೆಟಿಎಂ 390 ಅಡ್ವೆಂಚರ್ ಈಗ ಬಿಡುಗಡೆ ಮಾಡಲಾಗಿದ್ದು, ದೆಹಲಿಯಲ್ಲಿ ಇದರ ಬೆಲೆ 3.60 ಲಕ್ಷ ರೂಪಾಯಿಗಳಾಗಿದೆ (ಎಕ್ಸ್ ಶೋರೂಮ್). ಮೂರು ವರ್ಷಗಳ ಹಿಂದೆ ಕೆಟಿಎಂ 390 ಅಡ್ವೆಂಚರ್ ಬಿಡುಗಡೆಯಾಗಿದ್ದು, ಇದೀಗ ಮತ್ತಷ್ಟು ಸುಧಾರಿತ ಫೀಚರ್ ಗಳೊಂದಿಗೆ ಹೊಸ ಬೈಕ್ ಬಿಡುಗಡೆಯಾಗಿದೆ.
ಕೆಟಿಎಂ ಬೈಕುಗಳು ರ್ಯಾಲಿಗಳಿಗೆ ಹೇಳಿ ಮಾಡಿಸಿದಂತಿದ್ದು, ಇದೀಗ ಬಿಡುಗಡೆಯಾಗಿರುವ 2023ರ ಆವೃತ್ತಿ ಮತ್ತಷ್ಟು ಜನಪ್ರಿಯತೆ ಪಡೆಯಬಹುದು ಎಂಬ ನಿರೀಕ್ಷೆ ಕಂಪನಿಯದ್ದಾಗಿದೆ. ‘ರೆಡಿ ಟು ರೇಸ್’ ತತ್ವವನ್ನು ಕೆಟಿಎಂ ಇಂಡಿಯಾ ಕಂಪನಿ ಹೊಂದಿದ್ದು, ಇದಕ್ಕೆ ಪೂರಕವಾಗಿ ಬೈಕುಗಳನ್ನು ಬಿಡುಗಡೆ ಮಾಡುತ್ತ ಬಂದಿದೆ.