
ಹ್ಯೂಂಡಾಯ್ ಸಹೋದರ ಸಂಸ್ಥೆ ಕಿಯಾ ಕಳೆದ ಕೆಲ ವರ್ಷಗಳಿಂದ ಆಟೋಮೊಬೈಲ್ ಕ್ಷೇತ್ರದಲ್ಲಿ ತನ್ನದೇ ಆದ ಛಾಪು ಮೂಡಿಸಿದೆ. ಮಧ್ಯಮ ಗಾತ್ರದ ಎಸ್‌ಯುವಿಗಳು ಈ ವಿಚಾರವಾಗಿ ಕಿಯಾಗೆ ಗೇಮ್ ಚೇಂಜಿಂಗ್ ಕೆಲಸ ಮಾಡಿವೆ ಎನ್ನಬಹುದು.
ಇದೀಗ ತನ್ನ ಸೆಲ್ಟೋಸ್ ಎಸ್‌ಯುವಿಗೆ ಒಂದಷ್ಟು ಮಾರ್ಪಾಡು ಮಾಡಿ ಮಾರುಕಟ್ಟೆಗೆ ಬಿಡುಗಡೆ ಮಾಡಲು ಸಜ್ಜಾಗಿದೆ ಕಿಯಾ. ಜುಲೈನಲ್ಲಿ ಮಾರುಕಟ್ಟೆಗೆ ಬರಲಿರುವ ನ್ಯೂಲುಕ್ ಸೆಲ್ಟೋಸ್‌ನ ಪ್ರಯೋಗಾರ್ಥ ಸವಾರಿ ವೇಳೆಯ ಅನೇಕ ಚಿತ್ರಗಳು ಅದಾಗಲೇ ವೈರಲ್ ಆಗಿವೆ.
ಮರುವಿನ್ಯಾಸಗೊಂಡ ಹೆಡ್‌ಲೈಟ್‌ಗಳು, ಮ್ಯಾಟೆ ಬ್ಲಾಕ್ ಫಿನಿಶ್‌ನೊಂದಿಗೆ ಎಲ್‌ಇಡಿ ಡಿಆರ್‌ಎಲ್‌ಗಳು, ಮರುವಿನ್ಯಾಸಿತ ಅಲಾಯ್ ಚಕ್ರಗಳು ಸೆಲ್ಟೋಸ್‌ನ ಹೊಸ ಲುಕ್‌ನ ಭಾಗಗಳಾಗಿವೆ.
ಪ್ರಯಾಣಿಕರಿಗೆ ಹೆಚ್ಚಿನ ಸುರಕ್ಷತೆ ಕೊಡಲೆಂದು ಅಡಾಸ್ ತಂತ್ರಜ್ಞಾನವನ್ನು ಸೆಲ್ಟೋಸ್‌ನ ಹೊಸ ಅವತಾರದಲ್ಲಿ ಅಳವಡಿಸಲಾಗಿದೆ ಎನ್ನಲಾಗಿದೆ. ಇದರೊಂದಿಗೆ ಸ್ವಯಂಚಾಲಿತ ಸನ್‌ರೂಫ್, 360 ಡಿಗ್ರಿ ಕ್ಯಾಮೆರಾ ಹಾಗೂ ಹೆಡ್ಸ್‌ಅಪ್ ಡಿಸ್ಪ್ಲೇಗಳನ್ನೂ ಈ ಕಾರು ಹೊಂದಿದೆ.
ಇಂಜಿನ್ ವಿಚಾರದಲ್ಲಿ ಹಳೆ ಅಂಶಗಳನ್ನೇ ಮುಂದುವರೆಸಿಕೊಂಡಿದೆ ಸೆಲ್ಟೋಸ್. 1.5ಲೀ ಪೆಟ್ರೋಲ್ ಹಾಗೂ ಡೀಸೆಲ್ ಆಯ್ಕೆಗಳನ್ನು ಸೆಲ್ಟೋಸ್‌ನಲ್ಲಿ ಮುಂದುವರೆಸಲಾಗಿದೆ. ಇದರೊಂದಿಗೆ 1.5ಲೀ ಟರ್ಬೋ ಪೆಟ್ರೋಲ್ ಇಂಜಿನ್ ಮುಂದಿನ ದಿನಗಳಲ್ಲಿ ಬರುವ ಸಾಧ್ಯತೆ ಇದೆ.

