
ಹಲವು ಸಿಹಿ ಕಹಿ ಘಟನೆಗಳೊಂದಿಗೆ 2022 ಪೂರ್ಣಗೊಳ್ಳುತ್ತಾ ಬಂದಿದ್ದು 2023 ಕ್ಕೆ ಕಾಲಿಡಲು ಇನ್ನು ಕೆಲವೇ ದಿನಗಳಷ್ಟು ಬಾಕಿ ಇದೆ. 2023 ಎಲ್ಲರ ಪಾಲಿಗೆ ಉತ್ತಮವಾಗಿರಲೆಂದು ಎಲ್ಲರೂ ಹಾರೈಸುತ್ತಿದ್ದಾರೆ.
ಇದರ ಮಧ್ಯೆ 2023ರ ಫೆಬ್ರವರಿ ತಿಂಗಳಿನ ವಿಶೇಷತೆ ಒಂದರ ಕುರಿತು ಬಹುತೇಕರು ಸಾಮಾಜಿಕ ಜಾಲತಾಣಗಳಲ್ಲಿ ಹಂಚಿಕೊಳ್ಳುತ್ತಿದ್ದಾರೆ.
2023ರ ಫೆಬ್ರವರಿ ತಿಂಗಳಿನಲ್ಲಿ 4 ಭಾನುವಾರ, 4 ಸೋಮವಾರ, 4 ಮಂಗಳವಾರ, 4 ಬುಧವಾರ, 4 ಗುರುವಾರ, 4 ಶುಕ್ರವಾರ ಹಾಗೂ 4 ಶನಿವಾರಗಳಿವೆ. ಈ ರೀತಿ ಬರುವುದು ಬಲು ಅಪರೂಪ ಎಂದು ಹೇಳಲಾಗುತ್ತಿದೆ.