ಈಶಾನ್ಯ ಭಾರತದ ಮೊದಲ ಚಹಾ ವಸ್ತು ಸಂಗ್ರಹಾಲಯವು ಅಸ್ಸಾಂನ ದಿಬ್ರುಗಢದಲ್ಲಿ ಉದ್ಘಾಟನೆಗೊಳ್ಳಲಿದೆ. ಅಸ್ಸಾಂ ಸರ್ಕಾರವು 2023ರ ವೇಳೆಗೆ ಚಹಾ ವಸ್ತು ಸಂಗ್ರಹಾಲಯವನ್ನು ಉದ್ಘಾಟಿಸುವ ಗುರಿಯನ್ನು ಹೊಂದಿದೆ.
ಮುಖ್ಯ ಕಟ್ಟಡದ ನಿರ್ಮಾಣ ಕಾಮಗಾರಿ ಶೇ.90ರಷ್ಟು ಪೂರ್ಣಗೊಂಡಿದೆ. 2023 ರ ವೇಳೆಗೆ ಚಹಾ ವಸ್ತು ಸಂಗ್ರಹಾಲಯವನ್ನು ಸಾರ್ವಜನಿಕರಿಗೆ ತೆರೆಯಲಾಗುವುದು ಎಂದು ಅಸ್ಸಾಂ ಪ್ರವಾಸೋದ್ಯಮ ಅಭಿವೃದ್ಧಿ ನಿಗಮ ಲಿಮಿಟೆಡ್ ಅಧ್ಯಕ್ಷ ರಿತುಪರ್ಣ ಬರುವಾ ಹೇಳಿದ್ದಾರೆ.
ಅಸ್ಸಾಂನಲ್ಲಿ ಚಹಾದ ಇತಿಹಾಸವನ್ನು ದಿಬ್ರುಗಢದಿಂದ ಪ್ರಾರಂಭಿಸಲಾಗಿದೆ. ಹೀಗಾಗಿ ರಾಜ್ಯದ ಚಹಾ ಇತಿಹಾಸವನ್ನು ಸಂರಕ್ಷಿಸಲು ಮತ್ತು ಚಹಾ ಪರಂಪರೆಯನ್ನು ಉತ್ತೇಜಿಸಲು ಇಲ್ಲಿ ಚಹಾ ವಸ್ತುಸಂಗ್ರಹಾಲಯವನ್ನು ನಿರ್ಮಿಸಬೇಕು ಎಂಬುದು ಹಲವು ವರ್ಷಗಳಿಂದ ಜನರು ಒತ್ತಾಯಿಸುತ್ತಿದ್ದರು. ನಂತರ 2016 ರಲ್ಲಿ, ಅಸ್ಸಾಂ ಸರ್ಕಾರವು ದಿಬ್ರುಘರ್‌ನಲ್ಲಿ ಚಹಾ ವಸ್ತು ಸಂಗ್ರಹಾಲಯವನ್ನು ಸ್ಥಾಪಿಸಲು ನಿರ್ಧಾರವನ್ನು ತೆಗೆದುಕೊಂಡಿತ್ತು. 2018 ರಲ್ಲಿ ನಿರ್ಮಾಣ ಕಾರ್ಯ ಪ್ರಾರಂಭವಾಯಿತು.
ಅಸ್ಸಾಂ ಸರ್ಕಾರ ಮತ್ತು ಈಶಾನ್ಯ ಕೌನ್ಸಿಲ್‌ನ ಜಂಟಿ ಆರ್ಥಿಕ ಬೆಂಬಲದೊಂದಿಗೆ ಚಹಾ ವಸ್ತುಸಂಗ್ರಹಾಲಯದ ನಿರ್ಮಾಣ ಕಾರ್ಯವನ್ನು ಪ್ರಾರಂಭಿಸಲಾಯಿತು. ಯೋಜನೆಯ ಮೊದಲ ಹಂತಕ್ಕೆ ಎನ್‌ಇಸಿ 3.14 ಕೋಟಿ ರೂ.ಗಳನ್ನು ಮಂಜೂರು ಮಾಡಿದೆ ಎಂದು ರಿತುಪರ್ಣ ಬರುವಾ ಹೇಳಿದ್ದಾರೆ.
20 ಕೋಟಿ ರೂ. ವೆಚ್ಚದಲ್ಲಿ ಒಂದು ಸಭಾಂಗಣ ನಿರ್ಮಿಸಲಾಗುವುದು. ಇದಲ್ಲದೇ, ಟೀ ಮ್ಯೂಸಿಯಂ ಯೋಜನೆಯಡಿ ಒಂದು ಮಾದರಿ ಟೀ ಗಾರ್ಡನ್ ಕಾರ್ಖಾನೆಯನ್ನು ಸಹ ನಿರ್ಮಿಸಲಾಗುವುದು. ಅಸ್ಸಾಂನ ಸಂಪೂರ್ಣ ಚಹಾ ಪ್ರಯಾಣವು ಈ ವಸ್ತುಸಂಗ್ರಹಾಲಯದಲ್ಲಿ ಪ್ರತಿಫಲಿಸಲಿದೆ.
ಅಸ್ಸಾಂನಲ್ಲಿ ಸುಮಾರು 820 ಚಹಾ ಕೈಗಾರಿಕೆಗಳು, 783 ದೊಡ್ಡ ಚಹಾ ತೋಟಗಳು, 1.18 ಲಕ್ಷ ಸಣ್ಣ ಚಹಾ ತೋಟಗಳು, 508 ಚಹಾ ಕಾರ್ಖಾನೆಗಳಿವೆ. 7.33 ಲಕ್ಷ ಕಾರ್ಮಿಕರು ದೊಡ್ಡ ಚಹಾ ತೋಟಗಳಲ್ಲಿ ತೊಡಗಿಸಿಕೊಂಡಿದ್ದರೆ, ಸುಮಾರು 3 ಲಕ್ಷ ಕಾರ್ಮಿಕರು ರಾಜ್ಯದ ಸಣ್ಣ ಚಹಾ ತೋಟಗಳಲ್ಲಿ ಕೆಲಸ ಮಾಡುತ್ತಿದ್ದಾರೆ. ರಾಜ್ಯದ ಒಟ್ಟು ಉತ್ಪಾದನೆಯಲ್ಲಿ, 93.49 ಪ್ರತಿಶತ ಚಹಾವನ್ನು ಅಸ್ಸಾಂನಲ್ಲಿ ಉತ್ಪಾದಿಸಲಾಗುತ್ತದೆ.