ಬೆಂಗಳೂರು: 2023ಕ್ಕೆ ರಾಜ್ಯದಲ್ಲಿ ಜೆಡಿಎಸ್ ಇರಲ್ಲ ಎಂದು ಲಘುವಾಗಿ ಮಾತನಾಡುತ್ತಿದ್ದಾರೆ ಆದರೆ ಎರಡೂ ಪಕ್ಷಗಳು ಜೆಡಿಎಸ್ ಮನೆ ಬಾಗಿಲಿಗೆ ಬರುವ ಸ್ಥಿತಿ ಬರಲಿದೆ ಎಂದು ಮಾಜಿ ಪ್ರಧಾನಿ ಹೆಚ್.ಡಿ.ದೇವೇಗೌಡ ವಾಗ್ದಾಳಿ ನಡೆಸಿದ್ದಾರೆ.
ಬೆಂಗಳೂರಿನಲ್ಲಿ ಮಾತನಾಡಿದ ಅವರು, 2023ಕ್ಕೆ ಜೆಡಿಎಸ್ ಪಕ್ಷವೇ ಇಲ್ಲದಾಗುತ್ತದೆ ಎಂದು ವ್ಯಂಗ್ಯವಾಡುತ್ತಿದ್ದಾರೆ. ಆದರೆ 2023ಕ್ಕೆ ಎರಡೂ ಪಕ್ಷಗಳು ಜೆಡಿಎಸ್ ಮನೆ ಬಾಗಿಲಿಗೆ ಬಂದು ನಿಲ್ಲುವ ಸಂದರ್ಭ ಬರಲಿದೆ ಎಂದು ಹೇಳಿದರು.
Big News: ಓಲಾದಿಂದ ಒಂದೇ ದಿನ 600 ಕೋಟಿ ರೂ. ಮೌಲ್ಯದ S1 ಸ್ಕೂಟರ್ ಮಾರಾಟ…!
ಜೆಡಿಎಸ್ ಎಂಬುದು ಒಂದು ರಾಜಕೀಯ ಪಕ್ಷವೇ ಅಲ್ಲ, ನಾವು 150 ಸ್ಥಾನಗಳನ್ನು ಗೆಲ್ಲುತ್ತೇವೆ ಎಂದು ಕಾಂಗ್ರೆಸ್ ನಾಯಕರು ಬೀಗುತ್ತಿದ್ದಾರೆ. ಆದರೆ ಇಂದು ದೇಶದಲ್ಲಿ ಕಾಂಗ್ರೆಸ್ ಸ್ಥಿತಿ ಏನಾಗಿದೆ? ದೆಹಲಿಯಲ್ಲಿ ಒಂದು ಸ್ಥಾನ ಇದೆ, ಓಡಿಶಾದಲ್ಲಿ ಒಂದು ಸ್ಥಾನವಿದೆ. ಇನ್ನು ತಮಿಳುನಾಡಿನಲ್ಲಿ ಏನಾಯ್ತು? ಕಾಂಗ್ರೆಸ್ ಎಲ್ಲಿಗೆ ಹೋಯ್ತು? ಮುಂಬರುವ ದಿನಗಳಲ್ಲಿ ಕಾಂಗ್ರೆಸ್ ಜೆಡಿಎಸ್ ಮನೆ ಬಾಗಿಲಿಗೆ ಬರಲಿದೆ ಎಂದು ಗುಡುಗಿದರು.
ನನ್ನ ಮೈಯಲ್ಲಿರುವ ರಕ್ತದ ಕಣಕಣ ಕೂಡ ಜೆಡಿಎಸ್. ನಾನು ರಾಜ್ಯಾದ್ಯಂತ ಪ್ರವಾಸ ಮಾಡಿ ಪಕ್ಷವನ್ನು ಕಟ್ಟುತ್ತೇನೆ. ನನಗೆ ಮಂಡಿ ನೋವು ಮಾತ್ರ ಇದೆ. ಅಂದಿನ ಸೋಲು ಮುಂದಿನ ಗೆಲುವಿಗೆ ನಮಗೆ ಹೆದ್ದಾರಿಯಾಗಲಿದೆ ಎಂದು ಹೇಳಿದರು.