2021 ಜೀವನ್ಮರಣ ಹೋರಾಟದ ವರ್ಷವಾಗಿದೆ. ದೇಶವಾಸಿಗಳ ದೊಡ್ಡ ವಿಜಯದ ವರ್ಷ ಕೂಡ ಆಗಿದೆ ಎಂದು ಉತ್ತರ ಕೊರಿಯಾದ ನಾಯಕ ಕಿಮ್ ಜಾಂಗ್ ಉನ್ ಹೇಳಿದ್ದಾರೆ.
ಶನಿವಾರ ತಮ್ಮ ಭಾಷಣದಲ್ಲಿ 2022 ಜೀವನದ ಮತ್ತು ಸಾವಿನ ಹೋರಾಟದ ವರ್ಷವಾಗಿದೆ ಎಂದು ಹೇಳಿದ್ದಾರೆ. ಕೊರಿಯನ್ ಕೇಂದ್ರ ಸುದ್ದಿ ಸಂಸ್ಥೆ(KSNA) ಈ ಬಗ್ಗೆ ವರದಿ ಮಾಡಿದೆ. ವರ್ಕರ್ಸ್ ಪಾರ್ಟಿ ಆಫ್ ನಾರ್ತ್ ಕೊರಿಯಾದ(WPK) ಕೇಂದ್ರ ಸಮಿತಿಯ ನಾಲ್ಕನೇ ಸಮಗ್ರ ಅಧಿವೇಶನವು ಡಿಸೆಂಬರ್ 27 ರಿಂದ 31 ರವರೆಗೆ ನಡೆಯಿತು.
WPK 2022 ರ ದೇಶದ ಬಜೆಟ್, 2021 ರ ಫಲಿತಾಂಶಗಳು ಮತ್ತು ಮುಂಬರುವ ವರ್ಷದ ಯೋಜನೆಗಳು, ಕೃಷಿ ಮತ್ತು WPK ಚಾರ್ಟರ್‌ನಲ್ಲಿನ ಬದಲಾವಣೆಗಳ ಬಗ್ಗೆ ಚರ್ಚಿಸಿದೆ. ತಮ್ಮ ಭಾಷಣದಲ್ಲಿ ಕಿಮ್ ಜಾನ್ ಉಂಗ್, ಉತ್ತರ ಕೊರಿಯಾದ ಜನರ ಯಶಸ್ಸನ್ನು ಖಚಿತಪಡಿಸಿಕೊಳ್ಳಲು 2022 ರ ಮಹಾನ್ ಹೋರಾಟವನ್ನು ಗೆಲ್ಲಬೇಕು ಎಂದು ಹೇಳಿದ್ದಾರೆ.
ಪಕ್ಷ ಮತ್ತು ಸ್ಥಳೀಯ ಅಧಿಕಾರಿಗಳ ರಚನೆ ಬಲಪಡಿಸುವುದು, ಕೃಷಿ, ನಿರ್ಮಾಣ, ಆರ್ಥಿಕತೆ, ಉದ್ಯಮ, ವಿಜ್ಞಾನ ಮತ್ತು ಆರೋಗ್ಯವನ್ನು ಅಭಿವೃದ್ಧಿಪಡಿಸುವುದರ ಮೇಲೆ ಗಮನ ಕೇಂದ್ರೀಕರಿಸುವ ಮಾತನ್ನಾಡಿದ್ದಾರೆ. ಯುನೈಟೆಡ್ ಸ್ಟೇಟ್ಸ್ ಮತ್ತು ದಕ್ಷಿಣ ಕೊರಿಯಾದೊಂದಿಗಿನ ಸಂಬಂಧಗಳನ್ನು ಅವರು ಉಲ್ಲೇಖಿಸಲಿಲ್ಲ,