ಬಹು ನಿರೀಕ್ಷಿತ ಮಹೀಂದ್ರ ಸ್ಕಾರ್ಪಿಯೊ- ಎನ್ ಮಾರುಕಟ್ಟೆಗೆ ಬಿಡುಗಡೆಯಾಗುತ್ತಿದ್ದು, ಇದೇ ಸೆಗ್ಮೆಂಟ್‌ನಲ್ಲಿ ಇರುವ ಪ್ರತಿಸ್ಪರ್ಧಿಗಳಿಗೆ ಖಂಡಿತವಾಗಿ ತಳಮಳ ಹುಟ್ಟಿಸಿರಬಹುದು.
ವಿವಿಧ ಮಾರ್ಪಡಿಸಿದ ಆಲೋಚನೆಗಳೊಂದಿಗೆ ಈ ವಾಹನ ಪ್ರವೇಶ ಪಡೆಯುತ್ತಿರುವಂತೆ ಕಾರು ಅಭಿಮಾನಿಗಳು ಕಾತರದಿಂದ ಕಾಯ್ದಿದ್ದು, ಇನ್‌ಸ್ಟಾಗ್ರಾಮ್‌ನಲ್ಲಿ ವಿಶೇಷ ವಿನ್ಯಾಸದ ಎಸ್‌ಯುವಿಯ ಮಹೀಂದ್ರಾ ಸ್ಕಾರ್ಪಿಯೊ ಎನ್ ಪಿಕ್ ಅಪ್ ಟ್ರಕ್ ಆವೃತ್ತಿಯು ನೆಟ್ಟಿಗರ ಕಣ್ಮನ ಸೆಳೆದಿದೆ.
ಎಂಎಸ್ಐಎಲ್ ನಿಂದ ಗುಡ್ ನ್ಯೂಸ್
ಹೊಸ ಮಹೀಂದ್ರಾ ಸ್ಕಾರ್ಪಿಯೊ ಎನ್ ಬಹುನಿರೀಕ್ಷಿತ ಎಸ್ ಯುವಿಯು ಇತ್ತೀಚಿನ ವೈಶಿಷ್ಟ್ಯಗಳು ಮತ್ತು ವಿನ್ಯಾಸ ನವೀಕರಣಗಳೊಂದಿಗೆ ಬರುತ್ತಿದೆ. ಒಟ್ಟು 5 ರೂಪಾಂತರಗಳಿದ್ದು- Z2, Z4, Z6, Z8, ಮತ್ತು Z8L ಎಂದು ಆವೃತಿಗಳನ್ನು ಪರಿಚಯಿಸಲಾಗುತ್ತಿದೆ.
ಬುಕ್ಕಿಂಗ್‌ಗಳು ಜುಲೈ 30ರಿಂದ ಆನ್‌ಲೈನ್ ಮತ್ತು ಆಫ್‌ಲೈನ್‌ನಲ್ಲಿ ಸಹ ಪ್ರಾರಂಭವಾಗಲಿದೆ.