ವಾಹನ ತಯಾರಕ ಕಂಪನಿ ಮಹೀಂದ್ರಾ & ಮಹೀಂದ್ರಾ ಇತ್ತೀಚೆಗೆ ಜನಪ್ರಿಯ SUV ರಾಕ್ಸೋರ್ ನ ಹೊಸ ಆವೃತ್ತಿಯನ್ನು ಬಿಡುಗಡೆ ಮಾಡಿದೆ. ಹೊಸ ಮಹೀಂದ್ರಾ ರಾಕ್ಸೋರ್ ಆಕರ್ಷಕವಾಗಿದೆ. ಮಹೀಂದ್ರಾ ರಾಕ್ಸೋರ್, ಭಾರತದ ರಸ್ತೆಗಳಲ್ಲಿ ಇಳಿಯುವುದಿಲ್ಲ.
ಉತ್ತರ ಅಮೆರಿಕಾದ ರಸ್ತೆಗಳಲ್ಲಿ ಓಡಾಡುವ SUV ರಾಕ್ಸೋರ್ ನ ಹೊಸ ಆವೃತ್ತಿಯಲ್ಲಿ ಸಾಕಷ್ಟು ವಿಶೇಷತೆಗಳಿವೆ. ಮಹೀಂದ್ರಾ ರಾಕ್ಸೋರ್ ನ ಆರಂಭಿಕ ಬೆಲೆ 18,899 ಯುಎಸ್ ಡಾಲರ್. ಅಂದರೆ ಸುಮಾರು 14.04 ಲಕ್ಷ ರೂಪಾಯಿ. ಉನ್ನತ ಮಾದರಿಯ ಬೆಲೆ 26,299 ಯುಎಸ್ ಡಾಲರ್ ಅಂದರೆ ಸುಮಾರು 19.54 ಲಕ್ಷ ರೂಪಾಯಿಯಿದೆ.
ಮಹೀಂದ್ರಾ SUV ರಾಕ್ಸೋರ್, 2.5 ಲೀಟರ್ ಟರ್ಬೊ ಎಂಜಿನ್ ಹೊಂದಿದೆ. 144ಎನ್ ಪಿ ಪೀಕ್ ಟಾರ್ಕ್ ಉತ್ಪಾದಿಸುತ್ತದೆ. ಇದರ ಎಂಜಿನ್ 62 ಅಶ್ವಶಕ್ತಿಯ ಸಾಮರ್ಥ್ಯ ಹೊಂದಿದೆ. 45.43 ಲೀಟರ್ ಇಂಧನ ಟ್ಯಾಂಕ್ ಸಾಮರ್ಥ್ಯವನ್ನು ಇದು ಹೊಂದಿದೆ. ಈ SUVಯ ಗರಿಷ್ಠ ವೇಗ ಗಂಟೆಗೆ 88 ಕಿಲೋಮೀಟರ್. ಮಹೀಂದ್ರಾ ಕಂಪನಿ, ಇದಕ್ಕೆ 2 ವರ್ಷಗಳ ಗ್ಯಾರಂಟಿ ನೀಡುತ್ತದೆ.
ಇದರಲ್ಲಿ ಹೈಡ್ರಾಲಿಕ್ ಪವರ್ ಸ್ಟೀರಿಂಗ್, ಹ್ಯಾಲೊಜೆನ್ ಹೆಡ್‌ಲ್ಯಾಂಪ್ ಇದೆ. ಇದು ಮುಂಭಾಗದಲ್ಲಿ 11-ಇಂಚಿನ ಡಿಸ್ಕ್ ಬ್ರೇಕ್ ಮತ್ತು ಹಿಂಭಾಗದಲ್ಲಿ 11-ಇಂಚಿನ ಡ್ರಮ್ ಬ್ರೇಕ್ ಗಳನ್ನು ಹೊಂದಿದೆ. ಕೆಂಪು ಮತ್ತು ಕಪ್ಪು ಬಣ್ಣದಲ್ಲಿ ಲಭ್ಯವಿದೆ.