ಬೆಂಗಳೂರು: ಪ್ರಸಕ್ತ ಶೈಕ್ಷಣಿಕ ವರ್ಷದ ವೇಳಾಪಟ್ಟಿಯನ್ನು ಶಿಕ್ಷಣ ಇಲಾಖೆ ಬಿಡುಗಡೆ ಮಾಡಿದ್ದು, ಈ ವರ್ಷ ಪೂರ್ಣ ಪ್ರಮಾಣದಲ್ಲಿ ತರಗತಿಗಳು ನಡೆಯಲಿವೆ.
ಕೋವಿಡ್ ಕಾರಣದಿಂದಾಗಿ ಎರಡು ವರ್ಷಗಳಿಂದ ಸಂಪೂರ್ಣ ತರಗತಿಗಳು ನಡೆದಿರಲಿಲ್ಲ. ಆದರೆ ಈ ವರ್ಷ ಪೂರ್ಣ ಪ್ರಮಾಣದಲ್ಲಿ ತರಗತಿಗಳು ನಡೆಯಲಿವೆ. 270 ದಿನಗಳನ್ನು ಶೈಕ್ಷಣಿಕ ಚಟುವಟಿಕೆಗಳಿಗೆ ಮೀಸಲಿಡಲಾಗಿದ್ದು, ದಸರಾಗೆ 14 ದಿನ ರಜೆ ಘೋಷಿಸಲಾಗಿದೆ.
ವಿದ್ಯಾರ್ಥಿಗಳಿಗೆ ಆಪ್ತ ಸಮಾಲೋಚನೆ ಕಾರ್ಯಕ್ರಮವನ್ನು ಇಲಾಖೆ ಈ ಬಾರಿ ಹಮ್ಮಿಕೊಂಡಿದೆ. ವಿಶ್ವೇಶ್ವರಯ್ಯ ದಿನಾಚರಣೆ, ಮಹಾತ್ಮಾ ಗಾಂಧಿ, ಲಾಲ್ ಬಹದ್ದೂರ್ ಶಾಸ್ತ್ರಿ ಜಯಂತಿ, ಕನಕದಾಸರ ಜಯಂತಿ, ಸಂವಿಧಾನ ದಿನಾಚರಣೆ, ವಿವೇಕಾನಂದ ಜಯಂತಿ ದಾರ್ಶನಿಕರ ಜಯಂತಿ ಆಚರಣೆಗೆ ಸೂಚನೆ ನೀಡಲಾಗಿದೆ.
ಮೇ 16ರಿಂದ ಶಾಲೆಗಳು ಆರಂಭ- ಮೇ16ರಿಂದ 20ರವರೆಗೆ ದಾಖಲಾತಿ ಪ್ರಕ್ರಿಯೆ
ಮೇ 17ರಿಂದ 31ವರೆಗೆ ಕಲಿಕಾ ಚೇತರಿಕೆ ಕಾರ್ಯಕ್ರಮ
ಮೇ 28 ಪೋಷಕರ ಸಭೆ
ಜೂನ್ 1ರಿಂದ ಪ್ರಸಕ್ತ ಸಾಲಿನ ಪಠ್ಯ ಬೋಧನೆಗೆ ಚಾಲನೆ
ಅಕ್ಟೋಬರ್ 3ರಿಂದ 16 ದಸರಾ ರಜೆ
ಅಕ್ಟೋಬರ್ 17ರಿಂದ 25 ಅರ್ಧ ವಾರ್ಷಿಕ ಪರೀಕ್ಷೆ
ಫೆ.23-2023ರಿಂದ 25ರವರೆಗೆ ಪೂರ್ವ ಸಿದ್ಧತಾ ಪರೀಕ್ಷೆ
ಮಾರ್ಚ್ 23-2023ರಿಂದ 31ವರೆಗೆ ವಾರ್ಷಿಕ ಪರೀಕ್ಷೆ