ಕಳೆದ ವರ್ಷ ಅಂದರೆ 2022ರಲ್ಲಿ ಎಲೆಕ್ಟ್ರಿಕ್ ಸ್ಕೂಟರ್‌ಗಳ ಭರಾಟೆ ಜೋರಾಗಿತ್ತು. ಲಕ್ಷಗಟ್ಟಲೆ ಸ್ಕೂಟರ್‌ಗಳು ಬಿಕರಿಯಾಗಿವೆ. ಅಂಕಿ-ಅಂಶಗಳನ್ನು ಗಮನಿಸಿದ್ರೆ ಎಲೆಕ್ಟ್ರಿಕ್ ದ್ವಿಚಕ್ರ ವಾಹನಗಳ ಮಾರಾಟದಲ್ಲಿ 305 ಪ್ರತಿಶತಕ್ಕಿಂತ ಹೆಚ್ಚು ಬೆಳವಣಿಗೆ ಕಂಡುಬಂದಿದೆ. 2022ರಲ್ಲಿ ಒಟ್ಟು 6,15,365 ಎಲೆಕ್ಟ್ರಿಕ್ ದ್ವಿಚಕ್ರ ವಾಹನಗಳನ್ನು ಮಾರಾಟ ಮಾಡಲಾಗಿದೆ. 2019ರಲ್ಲಿ ಕೇವಲ 28,280 ಯುನಿಟ್‌ಗಳು ಮಾರಾಟವಾಗಿದ್ದವು.
2021ರಲ್ಲಿ 1.51 ಲಕ್ಷ ಎಲೆಕ್ಟ್ರಿಕ್ ದ್ವಿಚಕ್ರ ವಾಹನಗಳು ಬಿಕರಿಯಾಗಿದ್ದವು. ಎಲೆಕ್ಟ್ರಿಕ್ ದ್ವಿಚಕ್ರ ವಾಹನಗಳ ಕ್ರೇತ್ರದಲ್ಲಿನ ಅದ್ಭುತ ಬೆಳವಣಿಗೆಗೆ ದೊಡ್ಡ ಕೊಡುಗೆ ಕೊಟ್ಟಿರೋದು ಪ್ರಮುಖವಾಗಿ ಮೂರು ಕಂಪನಿಗಳು. 2022ರಲ್ಲಿ ಈ ಕಂಪನಿಗಳು ತಲಾ 1 ಲಕ್ಷ ಯುನಿಟ್‌ಗಳನ್ನು ಮಾರಾಟ ಮಾಡಿವೆ. 2022ರಲ್ಲಿ ಅತಿ ಹೆಚ್ಚು ಎಲೆಕ್ಟ್ರಿಕ್ ಸ್ಕೂಟರ್‌ಗಳನ್ನು ಮಾರಾಟ ಮಾಡಿರುವ ಟಾಪ್ 3 ಕಂಪನಿಗಳು ಯಾವುವು ಅನ್ನೋದನ್ನು ನೋಡೋಣ.
ಓಲಾ ಎಲೆಕ್ಟ್ರಿಕ್ – 1,08,130 ಯೂನಿಟ್ ಓಲಾ ಎಲೆಕ್ಟ್ರಿಕ್ 2022ರಲ್ಲಿ ಅತಿ ಹೆಚ್ಚು ಎಲೆಕ್ಟ್ರಿಕ್ ಸ್ಕೂಟರ್‌ಗಳನ್ನು ಮಾರಾಟ ಮಾಡಿದೆ. ಓಲಾದ ಒಟ್ಟು 1,08,130 ಯುನಿಟ್‌ಗಳು ಸೇಲ್ ಆಗಿವೆ. ಇದು ಸತತವಾಗಿ ಸೆಪ್ಟೆಂಬರ್‌ನಿಂದ ಡಿಸೆಂಬರ್‌ವರೆಗೆ ಅತಿ ಹೆಚ್ಚು ಸ್ಕೂಟರ್ ಮಾರಾಟ ಮಾಡಿದೆ. ಕಂಪನಿಯು Ola S1, Ola S1 Pro, Ola S1 Air ನಂತಹ ಉತ್ತಮ ಸ್ಕೂಟರ್‌ಗಳನ್ನು ಹೊಂದಿದೆ. Ola S1 Pro ಅವುಗಳಲ್ಲಿ ಹೆಚ್ಚಿನ ಶ್ರೇಣಿಯನ್ನು ನೀಡುತ್ತದೆ. ಇದು ಸಂಪೂರ್ಣ ಚಾರ್ಜ್‌ನಲ್ಲಿ 181 ಕಿಮೀ ಓಡಬಲ್ಲದು. ಇದರ ಆರಂಭಿಕ ಬೆಲೆ 1.40 ಲಕ್ಷ ರೂಪಾಯಿ.
ಓಕಿನಾವಾ ಆಟೋಟೆಕ್ – 1,01,366 ಯೂನಿಟ್
ಒಕಿನಾವಾ ಆಟೋಟೆಕ್, ಈ ಪಟ್ಟಿಯಲ್ಲಿ ಎರಡನೇ ಸ್ಥಾನದಲ್ಲಿದೆ. ಓಕಿನಾವಾದ iPraise+ ಮತ್ತು Praise Pro ನಂತಹ ಸ್ಕೂಟರ್‌ಗಳಿಗೆ ಹೆಚ್ಚಿನ ಬೇಡಿಕೆಯಿದೆ. ಪ್ರಸ್ತುತ ಕಂಪನಿಯು ಪ್ರಮುಖ ಮೆಟ್ರೋ ನಗರಗಳಲ್ಲಿ 350ಕ್ಕೂ ಹೆಚ್ಚು ವಿತರಕರ ಜಾಲವನ್ನು ಹೊಂದಿದೆ. 2022ರಲ್ಲಿ ಓಕಿನಾವಾ ಆಟೋಟೆಕ್ 1,01,366 ಎಲೆಕ್ಟ್ರಿಕ್ ಸ್ಕೂಟರ್‌ಗಳನ್ನು ಮಾರಾಟ ಮಾಡಿ ಸೈ ಎನಿಸಿಕೊಂಡಿದೆ.
ಹೀರೋ ಎಲೆಕ್ಟ್ರಿಕ್ – 96,906 ಯೂನಿಟ್
ಹೀರೋ ಎಲೆಕ್ಟ್ರಿಕ್ ಮೂರನೇ ಸ್ಥಾನದಲ್ಲಿದೆ. ಇದು 2022 ರಲ್ಲಿ ಒಟ್ಟು 96,906 ಯುನಿಟ್‌ಗಳನ್ನು ಮಾರಾಟ ಮಾಡಿದೆ. ಮಾರ್ಚ್ 2022 ರಲ್ಲಿ ಹೀರೋ, 10,000 ಎಲೆಕ್ಟ್ರಿಕ್ ಸ್ಕೂಟರ್‌ಗಳನ್ನು ಮಾರಾಟ ಮಾಡಿದ ಮೊದಲ ಕಂಪನಿ ಎನಿಸಿಕೊಂಡಿತ್ತು. ಹೀರೋ ಎಲೆಕ್ಟ್ರಿಕ್ನಲ್ಲಿ ಸಾಕಷ್ಟು ವೆರೈಟಿ ಸ್ಕೂಟರ್‌ಗಳು ಲಭ್ಯವಿವೆ.