ಚಾಮರಾಜನಗರ : ಕಾಡಾನೆಯೊಂದಿಗೆ ‘ಸೆಲ್ಪಿ’ ಕ್ಲಿಕ್ಕಿಸಿಕೊಂಡ ಇಬ್ಬರು ಪ್ರವಾಸಿಗರಿಗೆ 20 ಸಾವಿರ ದಂಡ ವಿಧಿಸಲಾಗಿದೆ.
ಚಾಮರಾಜನಗರ ಗಡಿ ಭಾಗದ ತಮಿಳುನಾಡಿನ ಹಾಸನೂರು ಬಳಿ ಬೆಂಗಳೂರು-ದಿಂಡಿಗಲ್ ರಾಷ್ಟ್ರೀಯ ಹೆದ್ದಾರಿಯಲ್ಲಿ ಕಾಡಾನೆ ಜೊತೆ ಸೆಲ್ಪಿ ತೆಗೆದುಕೊಳ್ಳಲು ಹೋದ ಇಬ್ಬರು ಪ್ರವಾಸಿಗರಿಗೆ 20 ಸಾವಿರ ದಂಡ ವಿಧಿಸಲಾಗಿದೆ.
ಕಾರಿನಿಂದ ಇಳಿದು ಬಂದ ದಿಲೀಪ್ ಕುಮಾರ್, ಶ್ಯಾಂ ಪ್ರಸಾದ್ ಎಂಬ ಪ್ರವಾಸಿಗರು ಕಾಡಾನೆಯ ಸಮೀಪ ಹೋಗಿ ಸೆಲ್ಫಿ ಕ್ಲಿಕ್ಕಿಸಿಕೊಂಡಿದ್ದಾರೆ. ಇದನ್ನು ನೋಡಿದ ಅರಣ್ಯ ಇಲಾಖೆ ಸಿಬ್ಬಂದಿಗಳು ದಿಲೀಪ್ ಕುಮಾರ್, ಶ್ಯಾಂ ಪ್ರಸಾದ್ ಗೆ ಅರಣ್ಯ ಇಲಾಖೆ ಸಿಬ್ಬಂದಿ ತಲಾ 10 ಸಾವಿರ ರೂ ದಂಡ ವಿಧಿಸಿದೆ.