ಪೆರುವಿಯನ್ ಯೋಧನೊಬ್ಬನ 2000 ವರ್ಷದಷ್ಟು ಹಳೆಯ ತಲೆಬರುಡೆ ಸಿಕ್ಕಿದ್ದು, ಈ ಬುರುಡೆಯನ್ನು ಲೋಹದಿಂದ ಬೆಸೆದು ಇಡಲಾಗಿದೆ. ಅಮೆರಿಕದ ಸಂಗ್ರಹಾಲಯದಲ್ಲಿರುವ ತಜ್ಞರು, ಈ ಬುರುಡೆಯು ಆ ಕಾಲದಲ್ಲೇ ಸುಧಾರಿತ ಶಸ್ತ್ರಚಿಕಿತ್ಸಾ ಕ್ರಿಯೆಗಳು ಇದ್ದಿದ್ದಕ್ಕೆ ಸಾಕ್ಷಿ ಎನ್ನುತ್ತಾರೆ.
ಕದನ ಭೂಮಿಯಲ್ಲಿ ಗಾಯಗೊಂಡ ಬಳಿಕ ತಲೆಯ ಮೂಳೆ ಮುರಿದ ಸೈನಿಕನೊಬ್ಬನ ತಲೆಯನ್ನು ಸರಿಪಡಿಸಲು ಆತನಿಗೆ ಟ್ರೆಫಿನೇಷನ್ ಎಂಬ ಶಸ್ತ್ರಚಿಕಿತ್ಸೆಮಾಡಲಾಗಿದೆ ಎಂದು ನಂಬಲಾಗಿದೆ.
ಮುಮ್ಮಲಮರುಗಿಸುತ್ತೆ ವಿಮಾನದಿಂದ ಬಿದ್ದು ಸಾವನ್ನಪ್ಪಿದ ನತದೃಷ್ಟರ ಕಥೆ
“ಈ ವ್ಯಕ್ತಿ ಮೂಳೆಗಳ ಮರುರಚನೆಯ ಸಾಕ್ಷ್ಯದ ಮೇಲೆ ಟ್ರೆಫಿನೇಷನ್ ಎಂಬ ಶಸ್ತ್ರಚಿಕಿತ್ಸೆಗೆ ಒಳಗಾಗಿದ್ದಾನೆ. ಬಹುತೇಕ ಎಲ್ಲ ಪ್ರಾಚೀನ ನಾಗರಿಕತೆಗಳಲ್ಲೂ ಟ್ರೆಫಿನೇಷನ್‌ನ ಅಭ್ಯಾಸವಿದ್ದು, ಬೇರೆ ಬೇರೆ ವಿಧಗಳಲ್ಲಿ, ಬೇರೆ ಬೇರೆ ಕಾರಣಗಳಿಗೆ ಈ ಕ್ರಿಯೆ ನಡೆಸಲಾಗುತ್ತಿತ್ತು,” ಎಂದು ತಿಳಿಸಿರುವ ಮ್ಯೂಸಿಯಮ್ ಆಫ್ ಆಸ್ಟಾಲಜಿ ಈ ವಿಷಯವನ್ನು ಫೇಸ್ಬುಕ್‌ನಲ್ಲಿರುವ ತನ್ನ ಖಾತೆಯಲ್ಲಿ ಹಂಚಿಕೊಂಡಿದೆ.
ಈ ಶಸ್ತ್ರಚಿಕಿತ್ಸಗೆ ಬಳಸಲಾದ ಲೋಹದಲ್ಲಿ ಯಾವೆಲ್ಲಾ ಧಾತುಗಳಿವೆ ಎಂದು ನಿಖರವಾಗಿ ತಿಳಿದು ಬಂದಿಲ್ಲ. ಈ ಲೋಹದ ಪ್ಲೇಟ್ ಅನ್ನು ಮುರಿದ ಮೂಳೆಗಳನ್ನು ಜೋಡಿಸಲು ಬಳಸಲಾಗುತ್ತಿತ್ತು.