alex Certify ದೇಶದ ಜನತೆಗೆ ಗುಡ್ ನ್ಯೂಸ್: 2,000 ಪ್ರಾಥಮಿಕ ಸಹಕಾರ ಸಂಘಗಳಲ್ಲಿ ಜನೌಷಧಿ ಕೇಂದ್ರ ಆರಂಭ: ದೇಶಾದ್ಯಂತ 25 ಸಾವಿರ ಜನೌಷಧಿ ಕೇಂದ್ರ ತೆರೆಯುವ ಗುರಿ | Kannada Dunia | Kannada News | Karnataka News | India News
ಕನ್ನಡ ದುನಿಯಾ
    Dailyhunt JioNews

Kannada Duniya

ದೇಶದ ಜನತೆಗೆ ಗುಡ್ ನ್ಯೂಸ್: 2,000 ಪ್ರಾಥಮಿಕ ಸಹಕಾರ ಸಂಘಗಳಲ್ಲಿ ಜನೌಷಧಿ ಕೇಂದ್ರ ಆರಂಭ: ದೇಶಾದ್ಯಂತ 25 ಸಾವಿರ ಜನೌಷಧಿ ಕೇಂದ್ರ ತೆರೆಯುವ ಗುರಿ

ನವದೆಹಲಿ: ಮುಂದಿನ ಎರಡರಿಂದ ಮೂರು ವರ್ಷಗಳಲ್ಲಿ ದೇಶಾದ್ಯಂತ 25,000 ಜನೌಷಧಿ ಕೇಂದ್ರಗಳನ್ನು ತೆರೆಯುವ ಗುರಿಯನ್ನು ಕೇಂದ್ರ ಸರ್ಕಾರ ಹೊಂದಿದ್ದು, 2,000 ಜನೌಷಧಿ ಕೇಂದ್ರಗಳನ್ನು ಪ್ರಾಥಮಿಕ ಕೃಷಿ ಸಾಲ ಸೊಸೈಟಿಗಳ ಮೂಲಕ ತೆರೆಯಲು ಯೋಜಿಸಲಾಗಿದೆ ಎಂದು ಕೇಂದ್ರ ರಾಸಾಯನಿಕ ಮತ್ತು ರಸಗೊಬ್ಬರ ಖಾತೆ ಸಚಿವ ಮನ್ಸುಖ್ ಮಾಂಡವಿಯಾ ಘೋಷಿಸಿದ್ದಾರೆ.

ಸೋಮವಾರ ‘ಪಿಎಸಿಎಸ್ ಪ್ರಧಾನ ಮಂತ್ರಿ ಜನೌಷಧಿ ಕೇಂದ್ರಗಳು’ ರಾಷ್ಟ್ರೀಯ ಸಮಾವೇಶದಲ್ಲಿ ಮಾತನಾಡಿದ ಅವರು, ದೇಶದಲ್ಲಿ ಜನೌಷಧಿ ಕೇಂದ್ರಗಳನ್ನು ತೆರೆಯಲು PACS ನಿಂದ 2,300 ಕ್ಕೂ ಹೆಚ್ಚು ಅರ್ಜಿಗಳನ್ನು ಫಾರ್ಮಾಸ್ಯುಟಿಕಲ್ಸ್ ಇಲಾಖೆ ಈಗಾಗಲೇ ಅನುಮೋದಿಸಿದೆ, ಅವುಗಳಲ್ಲಿ 500 ಈಗಾಗಲೇ ಕಾರ್ಯನಿರ್ವಹಿಸುತ್ತಿವೆ ಎಂದು ಹೇಳಿದ್ದಾರೆ.

ಸಮಾವೇಶವನ್ನು ಉದ್ದೇಶಿಸಿ ಮಾತನಾಡಿದ ಕೇಂದ್ರ ಸಹಕಾರ ಸಚಿವ ಅಮಿತ್ ಶಾ, ಜನೌಷಧಿ ಕೇಂದ್ರಗಳನ್ನು ತೆರೆಯಲು ಸಹಕಾರಿ ಸಂಘಗಳಿಗೆ ಅವಕಾಶ ನೀಡುವುದರಿಂದ ಸಮುದಾಯದ ಕೆಳಸ್ತರದವರಿಗೂ ಅನುಕೂಲವಾಗುತ್ತದೆ. ಕಳೆದ ಒಂಬತ್ತು ವರ್ಷಗಳಲ್ಲಿ ಜನೌಷಧಿ ಕೇಂದ್ರಗಳ ಮೂಲಕ ಬಡವರ ಸುಮಾರು 26,000 ಕೋಟಿ ರೂಪಾಯಿ ಹಣವನ್ನು ಉಳಿಸಲಾಗಿದೆ. ಈ ಕೇಂದ್ರಗಳಲ್ಲಿ ಮಾರುಕಟ್ಟೆ ಬೆಲೆಯ ಶೇ 50 ರಿಂದ 90 ರಷ್ಟು ಜನರಿಕ್ ಔಷಧಿಗಳು ಲಭ್ಯವಿದ್ದು, ಕೈಗೆಟಕುವ ದರದಲ್ಲಿ ಆರೋಗ್ಯ ಸೇವೆಯನ್ನು ಖಾತ್ರಿಪಡಿಸುತ್ತದೆ ಎಂದು ಹೇಳಿದ್ದಾರೆ.

PACS ಗ್ರಾಮ ಮಟ್ಟದ ಸಹಕಾರ ಸಾಲ ಸಂಘಗಳಾಗಿದ್ದು, ರಾಜ್ಯ ಮಟ್ಟದಲ್ಲಿ ರಾಜ್ಯ ಸಹಕಾರಿ ಬ್ಯಾಂಕ್‌ಗಳ(SCB) ನೇತೃತ್ವದ ಮೂರು ಹಂತದ ಸಹಕಾರ ಸಾಲ ರಚನೆಯಲ್ಲಿ ಕೊನೆಯ ಕೊಂಡಿಯಾಗಿ ಕಾರ್ಯನಿರ್ವಹಿಸುತ್ತದೆ.

ಪ್ರಸ್ತುತ, ದೇಶಾದ್ಯಂತ ಸುಮಾರು 63,000 ಕ್ರಿಯಾತ್ಮಕ PACS ಇವೆ. ಪಿಎಸಿಎಸ್‌ನಲ್ಲಿ ಜನೌಷಧಿ ಕೇಂದ್ರಗಳನ್ನು ತೆರೆಯುವುದರಿಂದ ಅವುಗಳ ಗಣಕೀಕರಣ, ವ್ಯಾಪಾರ ಚಟುವಟಿಕೆಗಳನ್ನು ವೈವಿಧ್ಯಗೊಳಿಸಲಿದೆ. ಪಿಎಸಿಎಸ್ ಮೂಲಕ ಜನೌಷಧಿ ಕೇಂದ್ರಗಳನ್ನು ತೆರೆಯುವುದರಿಂದ ಪಿಎಸಿಎಸ್ ಅನ್ನು ಸಹಕಾರಿ ಸಂಸ್ಥೆಯಾಗಿ ಬಲಪಡಿಸುತ್ತದೆ. ದೇಶದಲ್ಲಿ ಗುಣಮಟ್ಟದ ಮತ್ತು ಕೈಗೆಟುಕುವ ಔಷಧಿಗಳ ವ್ಯಾಪ್ತಿಯನ್ನು ವಿಸ್ತರಿಸುತ್ತದೆ. ಇದು ಗ್ರಾಮೀಣ ಉದ್ಯೋಗಾವಕಾಶಗಳ ಹೆಚ್ಚಳಕ್ಕೆ ಕಾರಣವಾಗುತ್ತದೆ ಎಂದು ಹೇಳಲಾಗಿದೆ.

Opinion Poll

  • ʼಮುಡಾʼ ಹಗರಣದಲ್ಲಿ ರಾಜೀನಾಮೆ ನೀಡ್ತಾರಾ ಸಿಎಂ ಸಿದ್ದರಾಮಯ್ಯ ?

    View Results

    Loading ... Loading ...