ಕಡಲತೀರದ ಹಿಮ್ಮೆಟ್ಟುವಿಕೆಯ ಬಗ್ಗೆ ಜಾಗೃತಿ ಮೂಡಿಸಲು 200 ಜನರು ಡೆಡ್ ಸೀ ಮೂಲಕ ನಗ್ನವಾಗಿ ಸಾಗಿದ್ದಾರೆ.
ಲೈವ್ ಇನ್‌ಸ್ಟಾಲೇಶನ್‌ನ ಭಾಗವಾಗಿ, ಇಸ್ರೇಲ್‌ನಲ್ಲಿ 200 ಜನರನ್ನು ನಗ್ನವಾಗಿ ಸಮುದ್ರ ತೀರದ ಕಡೆಗೆ ಕಳುಹಿಸುವ ಪರಿಕಲ್ಪನೆಯನ್ನು ಕಲಾವಿದ ಸ್ಪೆನ್ಸರ್ ಟ್ಯೂನಿಕ್ ಅವರು ಮಾಡಿದ್ದಾರೆ.
ಸ್ಪೆನ್ಸರ್ ಟ್ಯೂನಿಕ್ ಅವರು, ಪರಿಸರ ಹಾನಿಯನ್ನು ಎತ್ತಿ ತೋರಿಸಲು ನಗ್ನ ಫೋಟೋ ಶೂಟ್‌ಗಳನ್ನು ಆಯೋಜಿಸುತ್ತಾರೆ. ಸಮುದ್ರ ತೀರದುದ್ದಕ್ಕೂ ದೈತ್ಯ ಸಿಂಕ್ ಹೋಲ್ ಗಳು ಕಾಣಿಸಿಕೊಳ್ಳಲು ಪ್ರಾರಂಭಿಸಿದ ನಂತರ, ಬೀಚ್ ಸಂದರ್ಶಕರಿಗೆ ಮುಚ್ಚಲ್ಪಟ್ಟಿದೆ.
ಕಲಾವಿದನ ಈ ನಿರ್ಧಾರಕ್ಕೆ ಕೆಲವು ಸಮುದಾಯಗಳು ಆಕ್ಷೇಪಿಸಿವೆ. ಅಂದಹಾಗೆ ಟ್ಯೂನಿಕ್ ಗೆ ವಿವಾದಗಳೇನು ಹೊಸತಲ್ಲ. ಈ ಮೊದಲು, ಇಸ್ರೇಲಿ ಶಾಸಕರು ಸಾರ್ವಜನಿಕವಾಗಿ ವಸ್ತ್ರಾಪಹರಣವನ್ನು ನಿಷೇಧಿಸಲು ‘ಸ್ಪೆನ್ಸರ್ ಟ್ಯೂನಿಕ್’ ಮಸೂದೆಗೆ ಒತ್ತಾಯಿಸಿದ್ದರು.
“ನನ್ನನ್ನು ತಡೆಯಲು ನನ್ನ ಹೆಸರಿನ ಬಿಲ್ ಹೊಂದಿದ್ದಕ್ಕೆ ನಾನು ಅದೃಷ್ಟಶಾಲಿ ಎಂದು ಭಾವಿಸುತ್ತೇನೆ. ಇದು ಒಂದು ಗೌರವ. ಧನ್ಯವಾದ. ಆದರೆ ನನ್ನ ಒಂದು ಕೆಲಸಕ್ಕಾಗಿ ನಿಮ್ಮ ಜೀವನದಲ್ಲಿ ಒಮ್ಮೆಯಾದರೂ ಬೆತ್ತಲೆಯಾಗಿರಬೇಕು ಎಂಬ ಬಿಲ್ ಇರಬೇಕು ಎಂದು ನಾನು ಭಾವಿಸುತ್ತೇನೆ” ಎಂದು ಟ್ಯೂನಿಕ್ ಪ್ರತಿಕ್ರಿಯಿಸಿದ್ದರು.
ಟ್ಯೂನಿಕ್ 1992 ರಿಂದ ಫೋಟೋಗ್ರಫಿ ಮತ್ತು ವಿಡಿಯೋದೊಂದಿಗೆ ಲೈವ್ ನ್ಯೂಡ್ ಫಿಗರ್ ಅನ್ನು ಸಾರ್ವಜನಿಕವಾಗಿ ಮಾಡುತ್ತಿದ್ದಾರೆ ಎಂದು ವೆಬ್‌ಸೈಟ್ ಮಾಹಿತಿ ಪ್ರಕಾರ ತಿಳಿದು ಬಂದಿದೆ.
ವಿಶ್ವ ಆರ್ಥಿಕ ವೇದಿಕೆ ಹೇಳುವಂತೆ ಕಳೆದ ಎರಡು ದಶಕಗಳಲ್ಲಿ ‘ಡೆಡ್ ಸಿ’ಯು ಶೇಕಡಾ 30 ರಷ್ಟು ಬತ್ತಿ ಹೋಗುತ್ತಿದೆ. ಆ ನಿರ್ಜಲೀಕರಣವು ಜೋರ್ಡಾನಿಯನ್ನರು, ಇಸ್ರೇಲಿಗಳು ಮತ್ತು ಪ್ಯಾಲೆಸ್ಟೇನಿಯನ್ನರಿಗೆ ನೀರಿನ ಸರಬರಾಜನ್ನು ಅಪಾಯಕ್ಕೆ ತಳ್ಳುವ ಮುನ್ಸೂಚನೆ ಮತ್ತು ವೇಗವನ್ನು ಕೂಡ ನೀಡುತ್ತದೆ. ಈ ಪ್ರದೇಶದಲ್ಲಿ ನೀರು ಮತ್ತು ಇತರ ಸಂಪನ್ಮೂಲಗಳ ವಿತರಣೆಯು ನಡೆಯುತ್ತಿರುವ ಇಸ್ರೇಲಿ-ಪ್ಯಾಲೆಸ್ತೀನ್ ಉದ್ವಿಗ್ನತೆಯ ಹಿನ್ನೆಲೆಯಲ್ಲಿ ವಿವಾದಾತ್ಮಕ ವಿಷಯವಾಗಿದೆ