ನವದೆಹಲಿ: ಸುಂದರವಾದ ವರ್ಣಚಿತ್ರಗಳನ್ನು ರಚನೆ ಹಾಗೂ ಸಾಮಾಜಿಕ ಕಳಕಳಿ ಹೊಂದಿರುವ ಬೆಂಗಳೂರು ಮೂಲದ 20 ವರ್ಷದ ವಿದ್ಯಾರ್ಥಿಯನ್ನು ಪ್ರಧಾನಿ ನರೇಂದ್ರ ಮೋದಿ ಪ್ರಶಂಸಿದ್ದಾರೆ.
ಸೃಜನಶೀಲ ಕ್ಷೇತ್ರಗಳಲ್ಲಿ ಚಿತ್ರಕಲಾವಿದ ಸ್ಟೀವನ್ ಹ್ಯಾರಿಸ್ ಅವರ ಆಸಕ್ತಿಗೆ ಪ್ರಧಾನಿ ಮೋದಿ ಮೆಚ್ಚುಗೆ ವ್ಯಕ್ತಪಡಿಸಿದ್ದಾರೆ. ಪ್ರಧಾನಿ ಮೋದಿಯವರ ಭಾವಚಿತ್ರ ರಚನೆ ಹಾಗೂ ತನ್ನ ಸಾಮಾಜಿಕ ಬದ್ಧತೆ ಹಾಗೂ ಕಳಕಳಿ ಕುರಿತ ಪತ್ರವೊಂದನ್ನು ಪ್ರಧಾನಿ ಮೋದಿಗೆ ಕಳುಹಿಸಿದ್ದರು. ಇದಕ್ಕೆ ಮೆಚ್ಚುಗೆ ವ್ಯಕ್ತಪಡಿಸಿದ ಪ್ರಧಾನಿ, “ನಿಮ್ಮ ಚಿತ್ರಗಳು ಪ್ರತಿಭೆ ಹಾಗೂ ಆಳವಾದ ಅನುಭವವನ್ನು ಬಿಂಬಿಸುತ್ತದೆ. ಸೂಕ್ಷ್ಮತೆಯೊಂದಿಗೆ ಕಾರ್ಯಗತಗೊಳಿಸುವ ಕೌಶಲ್ಯ, ಸೃಜನಶೀಲ ಕ್ಷೇತ್ರಗಳಲ್ಲಿ ಯುವಜನರ ಆಸಕ್ತಿ ಹಾಗೂ ಶ್ರದ್ಧೆಯನ್ನು ನೋಡುವುದು ಬಹಳ ಖುಷಿಯ ವಿಚಾರ” ಎಂದು ಮೋದಿ ಬರೆದಿದ್ದಾರೆ.
ಭಾರೀ ದುರಂತ….! ವಾಹನಗಳು ಚಲಿಸುತ್ತಿರುವಾಗ್ಲೇ ಕುಸಿದು ಬಿದ್ದ ಸೇತುವೆ
“ಸ್ಟೀವನ್ ಅವರ ಸಾಮಾಜಿಕ ಕಳಕಳಿಯು 130 ಕೋಟಿ ಭಾರತೀಯರ ಲಸಿಕೆ ಅಭಿಯಾನ, ಶಿಸ್ತು, ಹಾಗೂ ಕೋವಿಡ್-19 ವಿರುದ್ಧದ ಹೋರಾಟಕ್ಕೆ ಶಕ್ತಿ ತುಂಬುತ್ತದೆ. ಸಕರಾತ್ಮತೆಯನ್ನು ಹರಡುವ ಸ್ಟೀವನ್ ನ ಪ್ರಯತ್ನದಿಂದ ಜನರು ಸ್ಪೂರ್ತಿ ಪಡೆಯುತ್ತಾರೆ” ಎಂದು ಪ್ರಧಾನಿ ಮೋದಿ ಅಭಿಪ್ರಾಯ ವ್ಯಕ್ತಪಡಿಸಿರುವುದಾಗಿ ಪಿಎಂಒ ಹೇಳಿದೆ.
ಪ್ರಧಾನಿ ಮೋದಿಗೆ ಬರೆದ ಪತ್ರದಲ್ಲಿ ಸ್ಟೀವನ್ ಹ್ಯಾರಿಸ್, ತಾನು ಕಳೆದ 15 ವರ್ಷದಿಂದ ಚಿತ್ರಕಲೆಯಲ್ಲಿ ತೊಡಗಿದ್ದು, 100ಕ್ಕೂ ಹೆಚ್ಚು ಪ್ರಶಸ್ತಿಗಳನ್ನು ಪಡೆದಿರುವುದಾಗಿ ಹೇಳಿಕೊಂಡಿದ್ದರು. ಅಲ್ಲದೆ ಮೋದಿ ನನ್ನ ಸ್ಪೂರ್ತಿ, ಮೋದಿ ಕೈಗೊಂಡ ಲಸಿಕಾ ಅಭಿಯಾನ ಕಾರ್ಯಕ್ರಮವನ್ನು ಪತ್ರದಲ್ಲಿ ಶ್ಲಾಘಿಸಿದ್ದರು.