ಹೆಬ್ಬಾವುಗಳು ಮನುಷ್ಯನನ್ನೇ ಗುಳುಂ ಎಂದು ನುಂಗಿದ ವಿಡಿಯೊಗಳು, ಸುದ್ದಿಗಳನ್ನು ಗಮನಿಸಿರುತ್ತೀರಿ. ಆದರೆ, ತನ್ನ ಮೊಟ್ಟೆಗಳನ್ನು ತೆಗದು ಬೇರೆಡೆ ಇರಿಸಿದ ಮೃಗಾಲಯದ ಸಿಬ್ಬಂದಿಗೆ 20 ಅಡಿಗಳ ದೈತ್ಯ ಹೆಬ್ಬಾವು ಕಚ್ಚಿರುವ ಅಪರೂಪದ ವಿಡಿಯೋ ಈಗ ಸಾಮಾಜಿಕ ಜಾಲತಾಣಗಳಲ್ಲಿ ಭಾರಿ ವೈರಲ್ ಆಗಿದೆ.
ಕ್ಯಾಲಿಫೋರ್ನಿಯಾದ ಸರಿಸೃಪಗಳ ಮೃಗಾಲಯ (ರೆಪ್ಟೈಲ್ ಝೂ)ನಲ್ಲಿ ಈ ಘಟನೆ ನಡೆದಿದೆ. ಅಲ್ಲದೆ, ಹೆಬ್ಬಾವು ಕಚ್ಚಿರುವುದು ಇದೇ ಮೃಗಾಲಯದ ಸ್ಥಾಪಕ ಜೇ ಬ್ರೀವರ್ನನ್ನು !
ಆರು ನಿಮಿಷಗಳ ಈ ವಿಡಿಯೊ ಕಂಡವರ ಎದೆಬಡಿತ ಹೆಚ್ಚುವುದು ಗ್ಯಾರಂಟಿ. ಯಾವಾಗಲೂ ತನ್ನ ಮೃಗಾಲಯದಲ್ಲಿನ ಹಾವುಗಳ ಚಟುವಟಿಕೆಗಳ ತರಹೇವಾರಿ ವಿಡಿಯೊಗಳನ್ನು ಮಾಡಿ ಪೋಸ್ಟ್ ಮಾಡುವ ಬ್ರೀವರ್ ಈ ಬಾರಿ ಇನ್ಸ್ಟಾಗ್ರಾಮ್ನಲ್ಲಿ ಹಾಕಿರುವ ಈ ವಿಡಿಯೊಗೆ 10 ಲಕ್ಷಕ್ಕೂ ಹೆಚ್ಚು ವೀಕ್ಷಕರು ಮೆಚ್ಚುಗೆ ವ್ಯಕ್ತಪಡಿಸಿ, ಹುಷಾರು ಎಂದು ಎಚ್ಚರಿಸಿದ್ದಾರೆ ಕೂಡ.
ಇಲ್ನೋಡಿ…! ಇಡೀ ವಿಶ್ವದ ಗಮನಸೆಳೆದಿದೆ ಈ ಅಧ್ಯಯನ ವರದಿ: ಕೊರೋನಾ ವೈರಸ್ ಕೊಲ್ಲಲು ಹಾವಿನ ವಿಷ ಪರಿಣಾಮಕಾರಿಯಂತೆ…!!
ವಿಡಿಯೊದಲ್ಲಿ ಹೆಬ್ಬಾವು ಕಡಿತದ ಬಳಿಕ ಬ್ರೀವರ್ ಕೈನಲ್ಲಿ ರಕ್ತ ಸೋರುತ್ತಿರುವುದನ್ನು ಕೂಡ ಕಾಣಬಹುದು. ಸುರಕ್ಷಿತ ಸ್ಥಳಕ್ಕೆ ಹಾವನ್ನು ಬಿಟ್ಟ ಬಳಿಕ ಅವರು, ತಮ್ಮ ಕೈಗಾದ ಗಾಯವನ್ನು ಒರೆಸಿಕೊಂಡು ಚಿಕಿತ್ಸೆ ಮಾಡಿಕೊಳ್ಳುತ್ತಾರೆ.
https://www.instagram.com/tv/CTZr9oEnB6N/?utm_source=ig_web_copy_link