alex Certify ಎಲ್ಲೋರಾ: ಪ್ರವಾಸಿಗರ ಅನುಕೂಲಕ್ಕೆ ಬ್ಯಾಟರಿ ಚಾಲಿತ ವಾಹನಗಳ ನಿಯೋಜನೆ | Kannada Dunia | Kannada News | Karnataka News | India News
ಕನ್ನಡ ದುನಿಯಾ
    Dailyhunt JioNews

Kannada Duniya

ಎಲ್ಲೋರಾ: ಪ್ರವಾಸಿಗರ ಅನುಕೂಲಕ್ಕೆ ಬ್ಯಾಟರಿ ಚಾಲಿತ ವಾಹನಗಳ ನಿಯೋಜನೆ

ವಿಶ್ವಖ್ಯಾತ ಎಲ್ಲೊರಾ ಗುಹಾಂತರ ರಚನೆಗಳನ್ನು ನೋಡಲು ಬರುವ ಮಂದಿಯನ್ನು ಬ್ಯಾಟರಿ ಚಾಲಿತ 20 ವಾಹನಗಳು ಕೊಂಡೊಯ್ಯಲಿವೆ ಎಂದು ಭಾರತೀಯ ಪ್ರಾಚ್ಯ ವಸ್ತು ಇಲಾಖೆ (ಎಎಸ್‌ಐ) ತಿಳಿಸಿದೆ. ಈ ಪ್ರದೇಶದಲ್ಲಿ ಕಾಣಸಿಕ್ಕಿರುವ ಗುಹಾ ರಚನೆಗಳು 2.2 ಕಿಮೀ ಉದ್ದಕ್ಕೆ ಹಬ್ಬಿದ್ದು, ಪ್ರವಾಸಿಗರು ನಡೆದುಕೊಂಡೇ ಇವೆಲ್ಲವನ್ನೂ ನೋಡಬೇಕಿದೆ.

ಈ ಸಂಬಂಧ ಆಸಕ್ತಿ ಇದ್ದವರನ್ನು ಆಹ್ವಾನಿಸಿ ಎಎಸ್‌ಐ ಸುತ್ತೋಲೆ ಹೊರಡಿಸಿದೆ. “ದಿನಪೂರ್ತಿ ಪ್ರವಾಸಿಗರನ್ನು ಎಲ್ಲೊರಾದ ಉದ್ದಗಲಕ್ಕೂ ಕೊಂಡೊಯ್ಯಲು ಬ್ಯಾಟರಿ ಚಾಲಿತ 20 ವಾಹನಗಳು ಇರಲಿವೆ. ಈ ವಾಹನಗಳಿಗೆ ನಿಲ್ದಾಣಗಳಾಗಿ ಕೆಲಸ ಮಾಡಲಿರುವ ಐದು ತಾತ್ಕಾಲಿಕ ಶೆಡ್‌ಗಳ ನಿರ್ಮಾಣಕ್ಕಾಗಿ ಸಹ ನಾವು ಕೋರಿದ್ದೇವೆ,” ಎಂದು ಎಎಸ್‌‌ಐನ ಔರಂಗಾಬಾದ್ ವೃತ್ತದ ಎಸ್‌ಐ ಮಿಲನ್ ಕುಮಾರ್‌ ಚೌಲೆ ತಿಳಿಸಿದ್ದಾರೆ.

ಈ ವಾಹನಗಳ ಪೈಕಿ 5 ಎಸಿ ಹಾಗೂ ಮಿಕ್ಕವು ಎಸಿಯೇತರ ಇರಲಿವೆ.ಈ ಸವಲತ್ತು ಪಡೆಯಲು ಪ್ರವಾಸಿಗರು ಪ್ರತ್ಯೇಕವಾದ ಟಿಕೆಟ್ ಪಡೆಯಬೇಕಾಗುತ್ತದೆ.

Opinion Poll

  • ಲೋಕಸಭಾ ಚುನಾವಣೆಯಲ್ಲಿ ಕಾಂಗ್ರೆಸ್‌ ಸರ್ಕಾರಕ್ಕೆ ಅನುಕೂಲಕರವಾಗಲಿದೆಯಾ ʼಗ್ಯಾರಂಟಿʼ ಯೋಜನೆಗಳು ?

    View Results

    Loading ... Loading ...