ಬೆಂಗಳೂರು: ಐರಾವತ 2.0 ಮಾದರಿಯ 20 ಬಸ್‌ಗಳು ಅಕ್ಟೋಬರ್ ಕೊನೆಯೊಳಗೆ ಕೆಎಸ್‌ಆರ್‌ಟಿಸಿಗೆ ಸೇರ್ಪಡೆಗೊಳ್ಳಲಿದೆ.
ಬಸ್ ವಿಶೇಷತೆ: ಬಸ್ ಹಿಂಭಾಗದಲ್ಲಿ ಫಾಗ್ ಲೈಟ್ ಅಳವಡಿಸಿರುವುದರಿಂದ ರಾತ್ರಿ ವೇಳೆಯಲ್ಲಿ ಹೆಚ್ಚಿನ ಸುರಕ್ಷತೆ ಇರುತ್ತದೆ. ಚಾಲಕರಿಗೆ ಸುಲಭವಾಗಿ ಕೈಗೆಟಕುವ ಚಾಲಕ ನಿಯಂತ್ರಣಗಳು ಮತ್ತು ಸ್ವಿಚ್‌ಗಳನ್ನು ಹೊಂದಿದೆ. ಬಾಗಿಲಿನ ಮೂಲಕ ಪಾದಚಾರಿಗಳನ್ನು ಸುಲಭವಾಗಿ ಚಾಲಕರು ಗಮನಿಸುವ ವ್ಯವಸ್ಥೆ ಇದೆ.
ಕೆಎಸ್ಆರ್ಟಿಸಿಯ ಐರಾವತ ಕ್ಲಬ್ ಕ್ಲಾಸ್ 2.0 ಮಾದರಿಯ 20 ಬಸ್‌ಗಳು ಈ ತಿಂಗಳ ಕೊನೆಯಲ್ಲಿ ಸೇರ್ಪಡೆಯಾಗಲಿವೆ. 2.0 ಐರಾವತ ಕ್ಲಬ್ ಕ್ಲಾಸ್ ಬಸ್ ಗಳಲ್ಲಿ ಪ್ರಯಾಣಿಕರ ಸುರಕ್ಷತೆಗೆ ಹೆಚ್ಚಿನ ಒತ್ತು ನೀಡಲಾಗಿದೆ. ಶಕ್ತಿಶಾಲಿ ಹ್ಯಾಲೊಜಿನ್ ಹೆಡ್ಲೈಟ್ ಗಳು ಮತ್ತು ಡೇ ರನ್ನಿಂಗ್ ಲೈಟ್ ಗಳೊಂದಿಗೆ ಹೊಸ ಪ್ಲಶ್ ಇಂಟೀರಿಯರ್ಸ್ ವಿನ್ಯಾಸ ಹೊಂದಿರುವ ಐಷಾರಾಮಿ ಬಸ್ ಇದಾಗಿದೆ.
ಪ್ರಯಾಣಿಕರ ಆಸನಗಳ ನಡುವಿನ ಅಂತರ ಹೆಚ್ಚಾಗಿದೆ. ವಿಶಾಲ ಲಗೇಜ್ ಸ್ಥಳಾವಕಾಶವಿದ್ದು, ಹಿಂದಿನ ಬಸ್ ಗಳಿಗೆ ಹೋಲಿಸಿದ್ದಲ್ಲಿ ಶೇ.20ರಷ್ಟು ಹೆಚ್ಚಿನ ಲಗೇಜ್ ಇಡುವ ಸೌಲಭ್ಯವಿರುತ್ತದೆ.