ಸೋಶಿಯಲ್ ಮೀಡಿಯಾದಲ್ಲಿ ಸರ್ಕಾರವನ್ನು ಟೀಕೆ ಮಾಡಿದ್ದ ಯುವಕನನ್ನು 2019ರಲ್ಲಿ ಬರ್ಬರವಾಗಿ ಹತ್ಯೆಗೈದಿದ್ದ ವಿಶ್ವವಿದ್ಯಾಲಯದ 20 ವಿದ್ಯಾರ್ಥಿಗಳಿಗೆ ಬಾಂಗ್ಲಾದೇಶದಲ್ಲಿ ಮರಣದಂಡನೆ ಶಿಕ್ಷೆ ವಿಧಿಸಲಾಗಿದೆ.
ಭಾರತದೊಂದಿಗೆ ನೀರು ಹಂಚಿಕೆ ಒಪ್ಪಂದಕ್ಕಾಗಿ ಸಹಿ ಹಾಕಿದ ಪ್ರಧಾನಿ ಶೇಖ್ ಹಸೀನಾ ಅವರ ನಡೆಯನ್ನು ಟೀಕಿಸಿ ಫೇಸ್ಬುಕ್ ಪೋಸ್ಟ್ ಹಾಕಿದ ಕೆಲವೇ ಗಂಟೆಗಳಲ್ಲಿ 21 ವರ್ಷದ ಅಬ್ರಾರ್ ಫಹಾದ್ ಎಂಬಾತನ ಮೃತದೇಹವು ವಿಶ್ವವಿದ್ಯಾಲಯದ ವಸತಿ ನಿಲಯದಲ್ಲಿ ಪತ್ತೆಯಾಗಿತ್ತು.
ಆಡಳಿತರೂಢ ಅವಾಮಿ ಲೀಗ್ನ ವಿದ್ಯಾರ್ಥಿ ವಿಭಾಗವಾದ ಬಾಂಗ್ಲಾದೇಶ ಛಾತ್ರಾ ಕೀಗ್ನ ಸದಸ್ಯರಾಗಿದ್ದ 25 ವಿದ್ಯಾರ್ಥಿಗಳು ಬರೋಬ್ಬರಿ ಆರು ಗಂಟೆಗಳ ಕಾಲ ಕ್ರಿಕೆಟ್ ಬ್ಯಾಟ್ ಹಾಗೂ ಇತರೆ ಹರಿತವಾದ ವಸ್ತುಗಳಿಂದ ಅಬ್ರಾರ್ ಫಹಾದ್ನನ್ನು ಥಳಿಸಿದ್ದರು.
ಈ ಆದೇಶದಿಂದ ನಾನು ತೃಪ್ತನಾಗಿದ್ದೇನೆ ಎಂದು ಫಹಾದ್ ತಂದೆ ಬರ್ಕತ್ ಉಲ್ಲಾ ಮಾಧ್ಯಮಗಳ ಎದುರು ಹೇಳಿದ್ರು. ಶೀಘ್ರದಲ್ಲೇ ಅವರಿಗೆ ಶಿಕ್ಷೆ ವಿಧಿಸಲಾಗುತ್ತದೆ ಎಂದು ನಂಬಿದ್ದೇನೆ ಎಂದು ಹೇಳಿದ್ರು.
ಉಳಿದ ಐವರು ಅಪರಾಧಿಗಳಿಗೆ ಜೀವಾವಧಿ ಶಿಕ್ಷೆ ವಿಧಿಸಲಾಗಿದೆ ಎಂದು ಪ್ರಾಸಿಕ್ಯೂಟರ್ ಅಬ್ದುಲ್ಲಾ ಅಬು ಮಾಹಿತಿ ನೀಡಿದ್ರು.
ಮರಣದಂಡನೆಗೆ ಒಳಗಾದ ಎಲ್ಲರೂ 20 ರಿಂದ 22 ವರ್ಷದೊಳಗಿನವರು ಎಂದು ತಿಳಿದುಬಂದಿದೆ. ಇವರೆಲ್ಲ ಬಾಂಗ್ಲಾದೇಶದ ಇಂಜಿನಿಯರಿಂಗ್ ಹಾಗೂ ತಂತ್ರಜ್ಞಾನ ವಿಶ್ವವಿದ್ಯಾಲಯದಲ್ಲಿ ವ್ಯಾಸಂಗ ಮಾಡಿದ್ದರು ಎನ್ನಲಾಗಿದೆ.