ಜಗತ್ತಿನಾದ್ಯಂತ ಅತ್ಯಂತ ಹೆಚ್ಚು ಬಳಸಲ್ಪಟ್ಟ ಅಪ್ಲಿಕೇಶನ್ಗಳಲ್ಲಿ ಒಂದಾದ ಗೂಗಲ್ ಮ್ಯಾಪ್ಸ್ ನೀವಿರುವ ಹಾಗೂ ತಲುಪಬೇಕಾದ ಜಾಗದ ಟ್ರಾಕಿಂಗ್ ಮಾಡುತ್ತದೆ ಎಂಬುದು ಗೊತ್ತಿರುವ ಸಂಗತಿ.
ಎರಡು ಜಾಗಗಳ ನಡುವಿನ ಅಂತರ, ಹಿಡಿಯಬೇಕಾದ ಮಾರ್ಗ, ಸಂಚಾರ ದಟ್ಟಣೆಯ ಪರಿಸ್ಥಿತಿಗಳನ್ನೆಲ್ಲಾ ತಿಳಿಸುವ ಗೂಗಲ್ ಮ್ಯಾಪ್ಸ್, ರಿಯಲ್-ಟೈಮ್ ನಲ್ಲಿ ಕಾರುಗಳು, ಬೈಕುಗಳು, ಬೆಳಕಿನ ದೀಪಗಳು, ಸಂಚಾರಿ ಸಿಗ್ನಲ್ಗಳನ್ನು ಅನೇಕ ಸ್ಥಳಗಳಿಂದ 360-ಡಿಗ್ರಿ ಕ್ಯಾಮೆರಾಗಳಲ್ಲಿ ಸೆರೆ ಹಿಡಿದು ತೋರುತ್ತವೆ.
ಇದೀಗ ಈ ಅಪ್ಲಿಕೇಶನ್ ಸಹಾಯದಿಂದ 20 ವರ್ಷಗಳಷ್ಟು ಹಳೆಯ ಮಿಸ್ಸಿಂಗ್ ಕೇಸ್ ಒಂದನ್ನು ಬಗೆಹರಿಸಲು ಫ್ಲಾರಿಡಾ ಪೊಲೀಸರು ಸಫಲರಾಗಿದ್ದಾರೆ.
ಗೂಗಲ್ ಮ್ಯಾಪ್ಸ್ ನಂಬಿ ಮತ್ತೊಂದು ಹುಡುಗಿ ಮದುವೆಯಾಗಲಿದ್ದ ವರ….!
1997ರ ನವೆಂಬರ್ 8ರಂದು ನಾಪತ್ತೆಯಾಗಿದ್ದ ವಿಲಿಯಮ್ ಮಾಲ್ಡ್ರನ್ನು ಪತ್ತೆ ಮಾಡಲು ಅವರ ಪ್ರದೇಶದ ಪೊಲೀಸರು ಭಾರೀ ಶ್ರಮ ಪಟ್ಟಿದ್ದಾರೆ. ಇದಾದ 22 ವರ್ಷಗಳ ಬಳಿಕ, 2019ರಲ್ಲಿ, ಗೃಹ ಅಭಿವೃದ್ಧಿ ಸಂಸ್ಥೆಯೊಂದರ ಮ್ಯಾನೇಜರ್ ಒಬ್ಬರು, ಗೂಗಲ್ ಮ್ಯಾಪ್ಸ್ನಲ್ಲಿ ಕೊಳವೊಂದರಲ್ಲಿ ಮುಳುಗಿದ ಕಾರೊಂದನ್ನು ಕಂಡಿದ್ದಾಗಿ ಪೊಲೀಸರಿಗೆ ತಿಳಿಸಿದ್ದಾರೆ. ಇಲ್ಲಿನ ವೆಲ್ಲಿಂಗ್ಟನ್ನ ಕೊಳದಿಂದ ಆ ಕಾರನ್ನು ಮೇಲೆತ್ತಿದ ವೇಳೆ ಒಳಗೊಂದು ದೇಹ ಪತ್ತೆಯಾಗಿದೆ.
ಬಹಳ ದಿನಗಳ ಕಾಲ ಈ ಕಾರು ಮುಳುಗಿದ ಸ್ಥಿತಿಯಲ್ಲಿತ್ತು ಎಂದು ಅಧಿಕಾರಿಗಳು ತಿಳಿಸಿದ್ದಾರೆ. ಪತ್ತೆಯಾದ ದೇಹದ ಗುರುತು ಪತ್ತೆ ಮಾಡಲು ತಜ್ಞರಿಗೆ ನೀಡಲಾಗಿತ್ತು.
ಕೊಳದಲ್ಲಿ ಸಿಕ್ಕ ದೇಹವು ಮಾಲ್ಡ್ರದ್ದೇ ಆಗಿದೆ ಎಂದು ಫ್ಲಾರಿಡಾದ ಪಾಮ್ ಬೀಚ್ ಕೌಂಟಿ ಪೊಲೀಸರು ತಿಳಿಸಿದ್ದಾರೆ. 2019ರವರೆಗೂ ಈತನ ಬಗ್ಗೆ ಯಾರಿಗೂ ಸುಳಿವು ಸಿಕ್ಕಿರಲಿಲ್ಲ. ಏಕೆಂದರೆ ಆತನ ಕಾರು ಮುಳುಗಿದ ಸ್ಥಿತಿಯಲ್ಲಿ ಕಂಡ ಜಾಗವನ್ನು ಕಟ್ಟಡ ನಿರ್ಮಾಣಕ್ಕಾಗಿ ಬಳಸಲಾಗುತ್ತಿದೆ.
ನವೆಂಬರ್ 7, 1997ರಂದು ನೈಟ್ ಕ್ಲಬ್ ಒಂದಕ್ಕೆ ಹೋಗಿದ್ದ ಮಾಲ್ಡ್ ಇದಾದ ಬಳಿಕ ಯಾರ ಕಣ್ಣಿಗೂ ಬಿದ್ದಿರಲಿಲ್ಲ.