
ಫಿಟ್ನೆಸ್ ಗೂ ನಿಮ್ಮ ಲುಕ್ಸ್ ಗೂ ನೇರವಾದ ಸಂಬಂಧವಿದೆ. ತುಂಬಾನೇ ಆರೋಗ್ಯ ಪ್ರಜ್ಞೆ ಇರುವವರಲ್ಲಿ ವಯಸ್ಸಾದ ಮೇಲೂ ತ್ವಚೆ ಸುಕ್ಕುಗಟ್ಟದೆ ಹೊಳೆಯುತ್ತದೆ. ಇಂತಹ ಅಚ್ಚರಿಯೊಂದು ಕ್ಯಾಲಿಫೋರ್ನಿಯಾದಲ್ಲಿ ಬೆಳಕಿಗೆ ಬಂದಿದೆ.
ಯಂಗ್ & ಎನರ್ಜೆಟಿಕ್ ಆಗಿ ಕಾಣ್ತಿರೋ ಈ ಮಹಿಳೆಯ ವಯಸ್ಸನ್ನು ಯಾರೂ ಊಹಿಸಲು ಸಾಧ್ಯವಿಲ್ಲ. ಈಕೆಯ ಹೆಸರು ಅಂಬರ್ ಲ್ಯಾಂಕಾಸ್ಟರ್. ಈ ಮಹಿಳೆ Instagram ನಲ್ಲಿ 3,98,000 ಫಾಲೋವರ್ ಗಳನ್ನು ಸಂಪಾದಿಸಿದ್ದಾಳೆ. ಸೌಂದರ್ಯ, ಫ್ಯಾಷನ್ ಮತ್ತು ಜೀವನಶೈಲಿಗೆ ಸಂಬಂಧಿಸಿದ ವಿಷಯವನ್ನು ಪೋಸ್ಟ್ ಮಾಡುತ್ತಲೇ ಇರುತ್ತಾಳೆ.
ಇತ್ತೀಚೆಗೆ ಲ್ಯಾಂಕಾಸ್ಟರ್ ತನ್ನ ನಿಖರವಾದ ವಯಸ್ಸನ್ನು ಬಹಿರಂಗಪಡಿಸಿದ್ದಾಳೆ. ಇದಕ್ಕೂ ಮೊದಲು ಅವಳಿಗೆ ವಯಸ್ಸು 25 ಇರಬಹುದು ಅಂತಾನೇ ಎಲ್ಲರೂ ಅಂದುಕೊಂಡಿದ್ದರು. ಮೊದಲು ಈಕೆ ಟಿಕ್ ಟಾಕ್ ಮೂಲಕ ಫೇಮಸ್ ಆಗಿದ್ದಳು. ಟಿಕ್ ಟಾಕ್ ನಲ್ಲಿ ತಮಾಷೆಯ ವಿಡಿಯೋಗಳನ್ನು ಮಾಡಿ ಹರಿಬಿಡುತ್ತಿದ್ಲು.
ಲ್ಯಾಂಕಾಸ್ಟರ್ ಇತ್ತೀಚಿಗೆ ತನ್ನ ನೈಜ ವಯಸ್ಸನ್ನು ಬಹಿರಂಗಪಡಿಸಿದಾಗ ಆಕೆಯ ಫಾಲೋವರ್ ಗಳು ಬೆರಗಾಗಿದ್ದಾರೆ. ಅವಳಿಗೆ ಅಷ್ಟು ವಯಸ್ಸಾಗಿರಲು ಸಾಧ್ಯವೇ ಇಲ್ಲ ಎನ್ನುತ್ತಿದ್ದಾರೆ. ಈಕೆ ಜನಿಸಿದ್ದು 1980ರಲ್ಲಿ, ಅದರಂತೆ ಲ್ಯಾಂಕಾಸ್ಟರ್ ಗೆ 40 ವರ್ಷ ದಾಟಿದೆ. ಈಕೆ ಒಂದು ಮಗುವಿನ ತಾಯಿ ಕೂಡ. ಆದ್ರೆ ಅವಳ ಅನುಯಾಯಿಗಳು ಇದನ್ನು ನಂಬಲು ಸಿದ್ಧರಿಲ್ಲ, ನಿಮ್ಮ ವಯಸ್ಸು 25ನ್ನು ದಾಟಿಲ್ಲ ಎನ್ನುತ್ತಿದ್ದಾರೆ.
https://www.instagram.com/amberlancaster/?utm_source=ig_embed&ig_rid=f25b25f0-860d-4380-890a-3f183ef3cf71