alex Certify 20ನೇ ವಯಸ್ಸಿಗೆ ಇಷ್ಟೆಲ್ಲಾ ಆಸ್ತಿ ಗಳಿಸಿದ್ದಳು ಆತ್ಮಹತ್ಯೆಗೆ ಶರಣಾಗಿರೋ ನಟಿ ತುನೀಶಾ ಶರ್ಮಾ…! | Kannada Dunia | Kannada News | Karnataka News | India News
ಕನ್ನಡ ದುನಿಯಾ
    Dailyhunt JioNews

Kannada Duniya

20ನೇ ವಯಸ್ಸಿಗೆ ಇಷ್ಟೆಲ್ಲಾ ಆಸ್ತಿ ಗಳಿಸಿದ್ದಳು ಆತ್ಮಹತ್ಯೆಗೆ ಶರಣಾಗಿರೋ ನಟಿ ತುನೀಶಾ ಶರ್ಮಾ…!

ಕಿರುತೆರೆ ನಟಿ ತುನೀಶಾ ಶರ್ಮಾ ಸಾವಿನ ಪ್ರಕರಣದ ತನಿಖೆ ಮತ್ತಷ್ಟು ಚುರುಕಾಗಿದೆ. ಘಟನೆಗೆ ಸಂಬಂಧಿಸಿದಂತೆ ಹೊಸ ಹೊಸ ಸಂಗತಿಗಳು ಬೆಳಕಿಗೆ ಬರುತ್ತಿವೆ.

ಕೇವಲ 20ನೇ ವಯಸ್ಸಿನಲ್ಲಿ ತುನೀಶಾ ಆತ್ಮಹತ್ಯೆಗೆ ಶರಣಾಗಿರೋ ಸುದ್ದಿ ಇಡೀ ದೇಶವನ್ನೇ ಬೆಚ್ಚಿಬೀಳಿಸಿದೆ. ಡಿಸೆಂಬರ್ 24ರಂದು ಅಲಿ ಬಾಬಾ: ದಾಸ್ತಾನ್-ಎ-ಕಾಬೂಲ್‌ನ ಸೆಟ್‌ನಲ್ಲಿ ತುನೀಶಾ ಶವವಾಗಿ ಪತ್ತೆಯಾಗಿದ್ದಳು.

ತುನೀಶಾ ಶರ್ಮಾ, ಕುಟುಂಬದಲ್ಲಿ ದುಡಿಮೆ ಮಾಡ್ತಿದ್ದ ಏಕೈಕ ವ್ಯಕ್ತಿಯಾಗಿದ್ದಳು. ಮಗಳನ್ನು ಕಳೆದುಕೊಂಡಿರೋ ತುನೀಶಾ ತಾಯಿಯೀಗ ಒಬ್ಬಂಟಿಯಾಗಿದ್ದಾರೆ. ಇಷ್ಟು ಚಿಕ್ಕ ವಯಸ್ಸಿನಲ್ಲೇ ತುನೀಶಾ 15 ಕೋಟಿ ಮೌಲ್ಯದ ಆಸ್ತಿ ಸಂಪಾದಿಸಿದ್ದಳು. ಚಿತ್ರಜಗತ್ತಿನಲ್ಲಿ ಸಾಕಷ್ಟು ಹೆಸರು ಮಾಡಿದ್ದಳು. ತುನೀಶಾ ಹೆಸರಿನಲ್ಲಿ ಮುಂಬೈನಲ್ಲಿ ಐಷಾರಾಮಿ ಅಪಾರ್ಟ್ಮೆಂಟ್‌ ಕೂಡ ಇದೆ.

ತುನೀಶಾ ಶರ್ಮಾ ತಂದೆ ಈ ಹಿಂದೆಯೇ ಮೃತಪಟ್ಟಿದ್ದಾರೆ, ತಾಯಿ ಮಾತ್ರ ಜೊತೆಗಿದ್ದರು. ತುನೀಶಾ ತಾಯಿ ವನಿತಾಗೆ 15 ಕೋಟಿ ಮೌಲ್ಯದ ಆಸ್ತಿ ಲಭ್ಯವಾಗಲಿದೆ. ತುನೀಶಾ ಸಂಪಾದನೆಯಿಂದಲೇ ಅವರ ಬದುಕು ಸಾಗುತ್ತಿತ್ತು. ಮಗಳ ದಿಢೀರ್‌ ಸಾವಿನಿಂದಾಗಿ ಮನೆಯ ಆಧಾರಸ್ಥಂಬವೇ ಕುಸಿದಂತಾಗಿದೆ.

Opinion Poll

  • ʼಮುಡಾʼ ಹಗರಣದಲ್ಲಿ ರಾಜೀನಾಮೆ ನೀಡ್ತಾರಾ ಸಿಎಂ ಸಿದ್ದರಾಮಯ್ಯ ?

    View Results

    Loading ... Loading ...