ಮೈಸೂರು : ಎರಡು ವರ್ಷಗಳಿಂದ ವಿದ್ಯುತ್ ಬಿಲ್ ಬಾಕಿ ಇಟ್ಟುಕೊಂಡಿದ್ದ ಕಾವೇರಿ ನೀರಾವರಿ ಘಟಕ ಸೇರಿದಂತೆ ನಗರದಲ್ಲಿನ ಸರ್ಕಾರಿ ಕಚೇರಿಗಳ ವಿದ್ಯುತ್ ಸಂಪರ್ಕ ಕಡಿತ ಮಾಡಲಾಗಿದೆ.
ನೀರಾವರಿ ಘಟಕವು 19 ಕೋಟಿ ರೂಪಾಯಿಗೂ ಅಧಿಕ ಮೊತ್ತ ಬಾಕಿ ಉಳಿಸಿಕೊಂಡಿದೆ. ನೀರಾವರಿ ಘಟಕಕ್ಕೆ ಈ ಹಿಂದೆಯೇ ಬಿಲ್ ಬಾಕಿ ಇರುವ ಕುರಿತು ನೊಟೀಸ್ ಕೂಡ ನೀಡಲಾಗಿತ್ತು. ಆದರೂ ಬಿಲ್ ಕಟ್ಟಿರಲಿಲ್ಲ. 2 ವರ್ಷಗಳಲ್ಲಿ ಬಿಲ್ ನ ಮೊತ್ತ 19,34,36,716 ರೂಪಾಯಿ ಆಗಿತ್ತು. ಹೀಗಾಗಿಯೇ ಚೆಸ್ಕಾಂ ಅಧಿಕಾರಿಗಳು ವಿದ್ಯುತ್ ಸಂಪರ್ಕ ಬಂದ್ ಮಾಡಿದ್ದಾರೆ.
ಕೇವಲ ನೀರಾವರಿ ಘಟಕ ಅಲ್ಲದೆ, ನಗರದಲ್ಲಿನ ಹಲವು ಸರ್ಕಾರಿ ಕಚೇರಿಗಳು ಬಿಲ್ ಬಾಕಿ ಉಳಿಸಿಕೊಂಡಿದ್ದವು. ಸುಮಾರು 20ಕ್ಕೂ ಅಧಿಕ ಕಚೇರಿಗಳು ಬಿಲ್ ಬಾಕಿ ಉಳಿಸಿಕೊಂಡಿವೆ. ಹೀಗಾಗಿ ಎಲ್ಲ ಕಚೇರಿಗಳ ವಿದ್ಯುತ್ ಸಂಪರ್ಕವನ್ನು ಕೂಡ ಬಂದ್ ಮಾಡಲಾಗಿತ್ತು. ಹೀಗಾಗಿ ಹಲವಾರು ವರ್ಷಗಳಿಂದ ಸರ್ಕಾರಿ ಕಚೇರಿಯಲ್ಲಿಯೇ ವಿದ್ಯುತ್ ಬಿಲ್ ಬಾಕಿ ಉಳಿಸಿಕೊಂಡಿದ್ದಕ್ಕೆ ಸಾರ್ವಜನಿಕ ವಲಯದಲ್ಲಿ ಆಕ್ರೋಶ ವ್ಯಕ್ತವಾಗುತ್ತಿದೆ.
ಹೀಗಾಗಿ ಸರ್ಕಾರಿ ಕಚೇರಿಗಳೆಲ್ಲವೂ ವಿದ್ಯುತ್ ಇಲ್ಲದೆ ಕಾರ್ಯ ನಿರ್ವಹಿಸಬೇಕಾಗಿ ಬಂದಿತ್ತು. ಸಣ್ಣ ನೀರಾವರಿ, ಮಹಾರಾಣಿ ಕಾಲೇಜು, ಜಿಲ್ಲಾಧಿಕಾರಿ ಕಚೇರಿ, ಮಿನಿ ವಿಧಾನಸೌಧ, ಸಬ್ ರಿಜಿಸ್ಟ್ರಾರ್ ಕಚೇರಿ, ಪಿಡಬ್ಲ್ಯೂಡಿ ಸೇರಿದಂತೆ ಹಲವು ಸರ್ಕಾರಿ ಕಚೇರಿಗಳಲ್ಲಿನ ವಿದ್ಯುತ್ ಸಂಪರ್ಕ್ ಬಂದ್ ಮಾಡಲಾಗಿತ್ತು. ಮೈಸೂರು ಜಿಲ್ಲಾಧಿಕಾರಿ ಕಚೇರಿಯಲ್ಲಿನ 3.50 ಲಕ್ಷ ರೂಪಾಯಿ ವಿದ್ಯುತ್ ಬಿಲ್ ಬಾಕಿ ಉಳಿಸಿಕೊಳ್ಳಲಾಗಿದೆ.