ರೈಲ್ವೇಯ ಎಲ್ಲಾ ಸೇವೆಗಳನ್ನೂ ಒಂದೇ ವರ್ಗವಾಗಿ ವಿಲೀನಗೊಳಿಸುವ ಘೋಷಣೆ ಮಾಡಿದ ಎರಡು ವರ್ಷಗಳ ಬಳಿಕ, ಇದೇ ವಿಚಾರವಾಗಿ ರೈಲ್ವೇ ಸಚಿವಾಲಯವು ಭಾರತೀಯ ರೈಲ್ವೇ ನಿರ್ವಹಣಾ ಸೇವೆಗೆ (ಐಆರ್‌ಎಂಎಸ್) ಗ್ರೂಪ್ ’ಎ’ ಕೇಂದ್ರ ಸೇವೆಗಳ ಅಡಿ ನೋಟಿಫಿಕೇಶನ್ ಹೊರಡಿಸಿದೆ.
ಈ ಮೂಲಕ ಇಲಾಖೆಯಲ್ಲಿ ಅಧಿಕಾರಶಾಹಿ ವ್ಯವಸ್ಥೆಯಲ್ಲಿರುವ ಲೋಪಗಳನ್ನು ಕಡಿಮೆ ಮಾಡಿ ತ್ವರಿತ ನಿರ್ಣಯ ತೆಗೆದುಕೊಳ್ಳುವಿಕೆಗೆ ಪ್ರೋತ್ಸಾಹ ನೀಡುವ ಉದ್ದೇಶ ಹೊಂದಲಾಗಿದೆ.
ರೈಲ್ವೇ ಅಧಿಕಾರಿಗಳನ್ನು ಒಂದೇ ಕೇಡರ್‌ನಲ್ಲಿ ನೇಮಕ ಮಾಡುವ ಸಂಬಂಧ ಡಿಸೆಂಬರ್ 2019ರಲ್ಲಿ ಕೇಂದ್ರ ಹೆಜ್ಜೆ ಇಟ್ಟ ಕಾರಣ, ಎರಡು ವರ್ಷಗಳ ಬಳಿಕ ಅಧಿಕಾರಿಗಳ ಹೊಸ ನೇಮಕಾತಿ ನಡೆಯಲಿದೆ.
BIG NEWS: ಹಿಜಾಬ್ ವಿವಾದ; ತುರ್ತು ವಿಚಾರಣೆಗೆ ಮತ್ತೆ ನಿರಾಕರಿಸಿದ ಸುಪ್ರೀಂ ಕೋರ್ಟ್; ಕಿವಿಮಾತು ಹೇಳಿದ ನ್ಯಾಯಾಲಯ
ಬಹು ಕೇಡರ್‌ಗಳ ಅಧಿಕಾರಿಗಳ ನಡುವೆ ಅಂತರ್-ಇಲಾಖಾ ಶೀತಲ ಸಮರಗಳು ಸಾಮಾನ್ಯವಾಗಿದ್ದ ಕಾರಣ ನಿರ್ಣಯ ತೆಗೆದುಕೊಳ್ಳುವುದರ ಮೇಲೆ ನಕಾರಾತ್ಮಕ ಪರಿಣಾಮ ಆಗುತ್ತಿತ್ತು. ಈಗ ಈ ಎಲ್ಲಾ ಸೇವೆಗಳನ್ನು ಒಂದೇ ನಿರ್ವಹಣೆಯಡಿ ತರುವ ಮೂಲಕ ಇಂಥ ವಕ್ರಗಳನ್ನೆಲ್ಲಾ ಕಿತ್ತೊಗೆಯುವ ಕ್ರಮಕ್ಕೆ ಕೇಂದ್ರ ಮುಂದಾಗಿದ್ದು, ಇದೊಂದು ಮಹತ್ವದ ಸುಧಾರಣೆಯಾಗಿದೆ ಎನ್ನಲಾಗಿದೆ.
ಏಕೀಕೃತ ಕೇಡರ್‌ನ ಹೊಸ ವ್ಯವಸ್ಥೆಯ ಆರಂಭಿಕ ಹಂತದಲ್ಲಿ ರೈಲ್ವೇ 150 ಅಧಿಕಾರಿಗಳ ನೇಮಕ ಮಾಡಿಕೊಳ್ಳಲಿದೆ ಎನ್ನಲಾಗಿದೆ.