ಇನ್ಮುಂದೆ ಸೋಷಿಯಲ್ ಮೀಡಿಯಾಗಳಲ್ಲಿ ಮೆಸೇಜ್ ಮಾಡುವಾಗ ಹುಷಾರ್. ವಾಟ್ಸಾಪ್, ಫೇಸ್ ಬುಕ್ ನಲ್ಲಿ ಹಾರ್ಟ್ ಸಿಂಬಲ್ ಕಳುಹಿಸಿದ್ರೆ ಜೈಲು ಶಿಕ್ಷೆ ಕಟ್ಟಿಟ್ಟಬುತ್ತಿ.
ಇಂತದ್ದೊಂದು ಕಠಿಣ ಕಾನೂನು ಜಾರಿಗೆ ಬಂದಿದೆ. ಆದ್ರೆ ನಮ್ಮ ದೇಶದಲ್ಲಿ ಅಲ್ಲ, ಕುವೈತ್ ಹಾಗೂ ಸೌದಿ ಅರೇಬಿಯಾದಲ್ಲಿ ಹುಡುಗಿಯರಿಗೆ ಹಾರ್ಟ್ ಸಿಂಬಲ್ ಕಳುಹಿಸಿದರೆ 2ರಿಂದ 5 ವರ್ಷದವರೆಗೂ ಜೈಲು ಶಿಕ್ಷೆ ಅನುಭವಿಸಬೇಕಾಗುತ್ತದೆ.
ಕುವೈತ್ ಹಾಗೂ ಸೌದಿ ಅರೇಬಿಯಾ ಸರ್ಕಾರ ಕಠಿಣ ಕಾನೂನುಗಳನ್ನು ಜಾರಿಗೆ ತಂದಿದ್ದು, ಯಾರಾದರೂ ಹೆಣ್ಣುಮಕ್ಕಳಿಗೆ ಹಾರ್ಟ್ ಸಿಂಬಲ್ ಎಮೋಜಿಗಳನ್ನು ಕಳುಹಿಸಿದರೆ ಅದನ್ನು ಅಪರಾಧ ಎಂದು ಪರಿಗಣಿಸಲಾಗುತ್ತದೆ. ಕುವೈತ್ ನಲ್ಲಿ ಹೃದಯದ ಎಮೋಜಿಗಳನ್ನು ಕಳುಹಿಸಿದರೆ 2 ವರ್ಷ ಜೈಲುಶಿಕ್ಷೆ 2000 ಕುವೈತ್ ದಿನಾರ್ ಗಳ ದಂಡ ವಿಧಿಸಲಾಗುತ್ತದೆ.
ಸೌದಿ ಅರೇಬಿಯಾದಲ್ಲಿ ಹಾರ್ಟ್ ಸಿಂಬಲ್ ಮೆಸೆಜ್ ಕಳುಹಿಸಿದರೆ ಅಂತವರಿಗೆ 2ರಿಂದ 5 ವರ್ಷದವರೆಗೂ ಜೈಲು ಶಿಕ್ಷೆ ನೀಡಲಾಗುತ್ತದೆ. ಜೊತೆಗೆ 1 ಲಕ್ಷ ಸೌದಿ ರಿಯಾಲ್ ಗಳನ್ನು ದಂಡವಾಗಿ ಕಟ್ಟಬೇಕಾಗುತ್ತದೆ.
ಆನ್ ಲೈನ್ ಚಾಟಿಂಗ್ ವೇಳೆ ಯಾರಾದರೂ ಹಾರ್ಟ್ ಎಮೋಜಿಗಳನ್ನು ಕಳುಹಿಸಿದರೆ ಅವರ ವಿರುದ್ಧ ಹುಡುಗಿಯರು ದೂರು ನೀಡಿದರೆ ಕಠಿಣ ಶಿಕ್ಷೆ ಗ್ಯಾರಂಟಿ. ಒಂದು ವೇಳೆ ಇದೇ ರೀತಿ ಅಪರಾಧವನ್ನು ಆರೋಪಿ ಮುಂದುವರೆಸಿದರೆ 5 ವರ್ಷ ಜೈಲು ಶಿಕ್ಷೆ ಹಾಗೂ 3 ಲಕ್ಷ ಸೌದಿ ರಿಯಾಲ್ ಗಳ ದಂಡ ಕಟ್ಟಬೇಕಾಗುತ್ತದೆ ಎಂದು ಸೌದಿ ಅರೇಬಿಯಾದ ವಂಚನೆಯ ವಿರೋಧಿ ಸಂಘದ ಸದಸ್ಯರೊಬ್ಬರು ಮಾಹಿತಿ ನೀಡಿದ್ದಾರೆ.