alex Certify ಆಂಧ್ರ ಸಿಎಂ ಜಗನ್​​ ರೆಡ್ಡಿ ಚಿಕ್ಕಪ್ಪನ ಹಂತಕರು ಸಿಬಿಐ ಬಲೆಗೆ…..! | Kannada Dunia | Kannada News | Karnataka News | India News
ಕನ್ನಡ ದುನಿಯಾ
    Dailyhunt JioNews

Kannada Duniya

ಆಂಧ್ರ ಸಿಎಂ ಜಗನ್​​ ರೆಡ್ಡಿ ಚಿಕ್ಕಪ್ಪನ ಹಂತಕರು ಸಿಬಿಐ ಬಲೆಗೆ…..!

ಆಂಧ್ರ ಪ್ರದೇಶ ಮಾಜಿ ಸಿಎಂ ವೈಎಸ್​ ರಾಜಶೇಖರ ರೆಡ್ಡಿ ಸಹೋದರ ವೈಎಸ್​ ವಿವೇಕಾನಂದ ರೆಡ್ಡಿ ಕೊಲೆಯಾದ ಬರೋಬ್ಬರಿ 2ವರ್ಷಗಳ ಬಳಿಕ ಪ್ರಕರಣದ ಪ್ರಮುಖ ಆರೋಪಿಯನ್ನು ಸೆರೆ ಹಿಡಿಯುವಲ್ಲಿ ಸಿಬಿಐ ಅಧಿಕಾರಿಗಳು ಯಶಸ್ವಿಯಾಗಿದ್ದಾರೆ.

ಸುನೀಲ್​ ಯಾದವ್​ ಎಂಬಾತ ವಿವೇಕಾನಂದ ಕೊಲೆಯ ಪ್ರಮುಖ ಆರೋಪಿಯಾಗಿದ್ದು ಈತನನ್ನು ಸಿಬಿಐ ಪೊಲೀಸರು ಗೋವಾದಲ್ಲಿ ಸೆರೆಹಿಡಿದಿದ್ದಾರೆ. ಸುನೀಲ್ ಬಂಧನ ಹಾಗೂ ನ್ಯಾಯಾಲಯಕ್ಕೆ ಹಾಜರು ಪಡಿಸುವ ಪ್ರಕ್ರಿಯೆಗಳು ಮುಂದುವರಿದಿದೆ.

ಸಿಬಿಐ ಮೂಲಗಳು ನೀಡಿರುವ ಮಾಹಿತಿಯ ಪ್ರಕಾರ ಸುನೀಲ್​ ಯಾದವ್​ನೇ ಈ ಕೊಲೆಯ ಮುಖ್ಯ ಆರೋಪಿ ಎಂಬ ಮಾತಿಗೆ ಪುಷ್ಠಿ ನೀಡಬಲ್ಲ ಅನೇಕ ಪುರಾವೆಗಳು ಸಿಬಿಐಗೆ ಸಿಕ್ಕಿದೆ. ಕುಟುಂಬಸ್ಥರ ಜೊತೆ ಗೋವಾಗೆ ಪಲಾಯನ ಮಾಡುವ ಮೊದಲೇ ಸಿಬಿಐ ಈ ಕೊಲೆ ಸಂಬಂಧ ವಿಚಾರಣೆ ನಡೆಸಿತ್ತು. ಇದೀಗ ಸಾಕ್ಷ್ಯ ದೊರೆತ ಹಿನ್ನೆಲೆ ಸುನೀಲ್​ರನ್ನು ಬಂಧಿಸಲಾಗಿದೆ.

ಮಾಜಿ ಸಚಿವ ವೈಎಸ್​ ವಿವೇಕಾನಂದ ರೆಡ್ಡಿ ಅವರ ಮೃತದೇಹ 2019ರ ಮಾರ್ಚ್ 15ರಂದು ಆಂಧ್ರ ಪ್ರದೇಶದ ಕಡಪ ಜಿಲ್ಲೆಯಲ್ಲಿ ಪತ್ತೆಯಾಗಿತ್ತು. ಈ ಸಮಯದಲ್ಲಿ ಅವರು ಮನೆಯಲ್ಲಿ ಒಂಟಿಯಾಗಿದ್ದರು. ಇದಾದ ಬಳಿಕ ವಿವೇಕಾನಂದರೆಡ್ಡಿ ಕುಟುಂಬಸ್ಥರು ಇದು ಅಸಹಜ ಸಾವು ಎಂದು ಶಂಕಿಸಿದ್ದರು.
ಪ್ರಸ್ತುತ ಆಂಧ್ರ ಪ್ರದೇಶದ ಮುಖ್ಯಮಂತ್ರಿಯಾಗಿರುವ ಜಗನ್​ ಮೋಹನ ರೆಡ್ಡಿಗೆ ವಿವೇಕಾನಂದ ರೆಡ್ಡಿ ಸಂಬಂಧದಲ್ಲಿ ಚಿಕ್ಕಪ್ಪ ಆಗಬೇಕು. ಇವರು ಚಿಕ್ಕಪ್ಪನ ಕೊಲೆ ಪ್ರಕರಣವನ್ನು ಸಿಬಿಐ ತನಿಖೆಗೆ ನೀಡುವಂತೆ ಒತ್ತಾಯಿಸಿದ್ದರು. ಆಂಧ್ರ ಹೈಕೋರ್ಟ್ ಈ ಪ್ರಕರಣವನ್ನು ಸಿಬಿಐ ತನಿಖೆಗೆ ಒಪ್ಪಿಸಿತ್ತು. ಸಿಬಿಐ ಈ ತನಿಖೆಯನ್ನು ಕೈಗೆತ್ತಿಕೊಳ್ಳುವ ಮುನ್ನ 3 ಎಸ್​ಐಟಿ ತಂಡ ಈ ಪ್ರಕರಣದ ತನಿಖೆ ನಡೆಸಿತ್ತು.

Opinion Poll

  • ʼಮುಡಾʼ ಹಗರಣದಲ್ಲಿ ರಾಜೀನಾಮೆ ನೀಡ್ತಾರಾ ಸಿಎಂ ಸಿದ್ದರಾಮಯ್ಯ ?

    View Results

    Loading ... Loading ...