ಹಠಾತ್ ಹೃದಯಾಘಾತದಿಂದ ಅಪ್ರಾಪ್ತ ಸಾವನ್ನಪ್ಪಿದ ಘಟನೆಯು ರಾಜಾಕೋಟ್ ಹಾಗೂ ಗಿರ್ ಸೋಮನಾಥ್ ಜಿಲ್ಲೆಗಳಲ್ಲಿ ಸಂಭವಿಸಿದೆ. ರಾಜ್ಕೋಟ್ ನಗರದ ಹೊರವಲಯದಲ್ಲಿರುವ ರಿಬ್ಡಾ ಗ್ರಾಮದ ಎಸ್ಜಿವಿಪಿ ಗುರುಕುಲದ ವಿದ್ಯಾರ್ಥಿ ಹದಿನೈದು ವರ್ಷದ ದೇವಾಂಶ್ ಭಯಾನಿ ಗುರುಪೂರ್ಣಿಮೆಯ ಅಂಗವಾಗಿ ಆಯೋಜಿಸಲಾಗಿದ್ದ ಕಾರ್ಯಕ್ರಮದ ತಯಾರಿ ನಡೆಸುತ್ತಿದ್ದ ವೇಳೆ ವೇದಿಕೆಯಲ್ಲಿ ಕುಸಿದು ಬಿದ್ದಿದ್ದಾರೆ. ಧೋರಜಿ ಪಟ್ಟಣ ಮೂಲದ ಭಯಾಜಿ ಈ ಕಾರ್ಯಕ್ರಮದ ನಿರೂಪಣೆ ಮಾಡುವ ತಯಾರಿಯಲ್ಲಿ ಇದ್ದ ವೇಳೆ ಈ ದುರ್ಘಟನೆ ಸಂಭವಿಸಿದೆ.
ಕೂಡಲೇ ಭಯಾಜಿಯನ್ನು ಆಸ್ಪತ್ರೆಗೆ ದಾಖಲಿಸಲಾಯ್ತಾದರೂ ಅವರು ಮೃತಪಟ್ಟಿದ್ದಾರೆ ಎಂದು ವೈದ್ಯರು ಘೋಷಣೆ ಮಾಡಿದ್ದಾರೆ. ಮರಣೋತ್ತರ ಪರೀಕ್ಷೆಯ ಸಂದರ್ಭದಲ್ಲಿ ಭಯಾಜಿ ಹೈಪರ್ಟ್ರೋಫಿಕ್ ಅಬ್ಸ್ಟ್ರಕ್ಟಿವ್ ಕಾರ್ಡಿಯೊಮಿಯೋಪತಿ ಬಳಲುತ್ತಿದ್ದರು ಎನ್ನಲಾಗಿದೆ. ಸೋಶಿಯಲ್ ಮೀಡಿಯಾದಲ್ಲಿ ವೈರಲ್ ಆಗಿರುವ ವಿಡಿಯೋದಲ್ಲಿ ವೇದಿಕೆಯನ್ನು ಸರಿ ಮಾಡುತ್ತಿದ್ದ ಸಂದರ್ಭದಲ್ಲಿ ಕುಸಿದು ಬಿದ್ದಿದ್ದಾರೆ.
ಭಯಾನಿ ಮೃತದೇಹದ ಮರಣೋತ್ತರ ಪರೀಕ್ಷೆ ನಡೆಸಿದ ವೈದ್ಯರು, ಮೃತರು ಹೃದಯ ಸಂಬಂಧಿ ಅಸಹಜತೆಯಿಂದ ಬಳಲುತ್ತಿದ್ದರು ಎಂದು ಹೇಳಿದ್ದಾರೆ. ಮೃತಪಟ್ಟ ಭಯಾನಿ ಹೆಚ್ಒಟಿಸಿಯಿಂದ ಬಳಲುತ್ತಿದ್ದರು ಎಂಬುದು ಮರಣೋತ್ತರ ಪರೀಕ್ಷೆಯಲ್ಲಿ ತಿಳಿದು ಬಂದಿದೆ, ಈ ಕಾಯಿಲೆ ಇರುವವವರ ರಕ್ತನಾಳಗಳು ದಪ್ಪಗಾಗುತ್ತದೆ. ಇದರಿಂದ ರಕ್ತದ ಹರಿವು ಕಡಿಮೆಯಾಗುತ್ತದೆ ಎಂದು ರಾಜ್ಕೋಟ್ ಸಿವಿಲ್ ಆಸ್ಪತ್ರೆ ವೈದ್ಯರು ಹೇಳಿದ್ದಾರೆ.