ಒಕ್ಲಹೋಮಾದ ತುಲ್ಸಾದಲ್ಲಿ ಎರಡು ಸಾಕು ನಾಯಿಗಳು ಮತ್ತು ಬೆಕ್ಕು ಅದೃಷ್ಟವಶಾತ್ ಪಾರಾಗಿವೆ. ಇವುಗಳಿದ್ದ ಲಿವಿಂಗ್ ರೂಮ್‌ನಲ್ಲಿ ಲಿಥಿಯಂ ಬ್ಯಾಟರಿಗೆ ಬೆಂಕಿ ಹತ್ತಿಕೊಂಡಿತ್ತು. ಬೆಂಕಿ ಕಾಣಿಸಿಕೊಳ್ತಿದ್ದಂತೆ ನಾಯಿಗಳು ದಿಕ್ಕಾಪಾಲಾಗಿ ಓಡಿವೆ. ಇದ್ರ ವಿಡಿಯೋ ಸಾಮಾಜಿಕ ಜಾಲತಾಣದಲ್ಲಿ ಪೋಸ್ಟ್ ಆಗಿದೆ.
ಘಟನೆಯನ್ನು ವಿವರಿಸುವ ಸುದೀರ್ಘ ಪೋಸ್ಟ್ ಜೊತೆ ವೀಡಿಯೊವನ್ನು ಹಂಚಿಕೊಳ್ಳಲಾಗಿದೆ. ಒಕ್ಲಹೋಮಾದ ತುಲ್ಸಾದಲ್ಲಿ, ಪೋರ್ಟಬಲ್ ಲಿಥಿಯಂ-ಐಯಾನ್ ಬ್ಯಾಟರಿಯನ್ನು ನಾಯಿ ಅಗೆಯುತ್ತಿದೆ. ಇದಾದ ಕೆಲವೇ ಕ್ಷಣಗಳಲ್ಲಿ ಬೆಂಕಿ ಕಾಣಿಸಿಕೊಂಡಿದೆ. ಲಿಥಿಯಂ-ಐಯಾನ್ ಬ್ಯಾಟರಿಗಳ ಅಪಾಯಗಳ ಬಗ್ಗೆ ಜನರಿಗೆ ಎಚ್ಚರಿಕೆ ನೀಡಲು ಈ ಕೆಳಗಿನ ವೀಡಿಯೊವನ್ನು ಹಾಕಲಾಗಿದೆ ಎಂದು ಪೋಸ್ಟ್ ನಲ್ಲಿ ಬರೆಯಲಾಗಿದೆ.
ಲಿಥಿಯಂ-ಐಯಾನ್ ಬ್ಯಾಟರಿಗಳು ಕಾಂಪ್ಯಾಕ್ಟ್ ಜಾಗದಲ್ಲಿ ಗಮನಾರ್ಹ ಪ್ರಮಾಣದ ಶಕ್ತಿಯನ್ನು ಸಂಗ್ರಹಿಸುತ್ತವೆ ಎಂದು ಅಗ್ನಿಶಾಮಕ ಇಲಾಖೆ ತಿಳಿಸಿದೆ. ಈ ಶಕ್ತಿಯು ಅನಿಯಂತ್ರಿತವಾಗಿ ಬಿಡುಗಡೆಯಾದಾಗ, ಅದು ಶಾಖವನ್ನು ಉತ್ಪಾದಿಸುತ್ತದೆ, ಸುಡುವ ಮತ್ತು ವಿಷಕಾರಿ ಅನಿಲಗಳನ್ನು ಉತ್ಪಾದಿಸುತ್ತದೆ ಮತ್ತು ಸ್ಫೋಟಗಳಿಗೆ ಕಾರಣವಾಗಬಹುದು.
ಲಿಥಿಯಂ-ಐಯಾನ್ ಬ್ಯಾಟರಿಗಳನ್ನು ಮೊಬೈಲ್ ಫೋನ್ ಮತ್ತು ಟ್ಯಾಬ್ಲೆಟ್‌ಗಳಲ್ಲಿ ಸಾಮಾನ್ಯವಾಗಿ ಬಳಸಲಾಗುತ್ತದೆ. ಮೊಬೈಲ್ ಸ್ಪೋಟದ ಅನೇಕ ಸುದ್ದಿಗಳು ಬರ್ತಿರುತ್ತವೆ. ಮಕ್ಕಳು ಹಾಗೂ ಪ್ರಾಣಿಗಳಿಂದ ಇವುಗಳನ್ನು ದೂರ ಇಡುವಂತೆ ಸಲಹೆ ನೀಡಲಾಗುತ್ತದೆ.