ಕೊಲೆ ಆರೋಪದಡಿ ಜೈಲು ಸೇರಿದ್ದ ಮಹಿಳೆ ಮತ್ತು ಪುರುಷನ ನಡುವೆ ಅಲ್ಲೇ ಪ್ರೀತಿ ಬೆಳೆದಿದ್ದು, ಪೆರೋಲ್ ಮೇಲೆ ಹೊರ ಬಂದು ಮದುವೆಯಾಗಿದ್ದಾರೆ.
ಬಂಗಾಳದ ಜೈಲಿನಲ್ಲಿ ಭೇಟಿಯಾಗಿದ್ದ ಅವರ ನಡುವೆ ಪ್ರೀತಿ ಬೆಳೆದಿತ್ತು. ಅಬ್ದುಲ್ ಹಸೀಮ್ ಅಸ್ಸಾಂನವರು ಮತ್ತು ಶಹನಾರಾ ಖಾತುನ್ ಪಶ್ಚಿಮ ಬಂಗಾಳದವರು. ಪ್ರತ್ಯೇಕ ಕೊಲೆ ಪ್ರಕರಣಗಳಲ್ಲಿ ಶಿಕ್ಷೆಗೊಳಗಾದ ಇಬ್ಬರು ಆರೋಪಿಗಳು ಪಶ್ಚಿಮ ಬಂಗಾಳದ ಬರ್ಧಮಾನ್ ಸೆಂಟ್ರಲ್ ಕರೆಕ್ಷನಲ್ ಹೋಮ್‌ನಲ್ಲಿದ್ದು, ಮೊದಲಿಗೆ ಹಾಸಿಮ್ ಮತ್ತು ಖಾತುನ್ ಪರಸ್ಪರ ತಿಳಿದಿರಲಿಲ್ಲ.
ಹಾಸಿಮ್‌ಗೆ 8 ವರ್ಷ ಮತ್ತು ಶಹನಾರಾಗೆ 6 ವರ್ಷ ಶಿಕ್ಷೆ ವಿಧಿಸಲಾಯಿತು. ಇಬ್ಬರನ್ನೂ ಒಂದೇ ಸುಧಾರಣಾ ಗೃಹದಲ್ಲಿ ಇರಿಸಲಾಗಿತ್ತು. ಪೂರ್ವ ಬರ್ಧಮಾನ್ ಜಿಲ್ಲೆಯ ಬರ್ಧಮಾನ್ ಜಿಲ್ಲಾ ಕಾರಾಗೃಹದಲ್ಲಿ ಅಬ್ದುಲ್ ಹಸೀಮ್ ಮತ್ತು ಶಹನಾರಾ ಖಾತುನ್ ಅವರ ಪ್ರೇಮಕಥೆ ಪ್ರಾರಂಭವಾಯಿತು.
ಜೈಲಿನಲ್ಲಿ ಇಬ್ಬರಿಗೂ ಪರಿಚಯವಾಯಿತು. ನಂತರ ಅವರ ಪರಿಚಯ ಸ್ನೇಹಕ್ಕೆ ತಿರುಗಿ ಸ್ನೇಹ ಪ್ರೀತಿಗೆ ತಿರುಗಿತ್ತು. ತಮ್ಮ ಸಂಬಂಧದ ಬಗ್ಗೆ ಆಯಾ ಕುಟುಂಬಗಳಿಗೆ ತಿಳಿಸಿದ ನಂತರ ಅವರು ಮದುವೆಯಾಗಲು ನಿರ್ಧರಿಸಿದರು.
ಬುಧವಾರ, ಅಬ್ದುಲ್ ಹಾಸಿಮ್ ಮತ್ತು ಶಹನಾರಾ ಖಾತುನ್ ಅವರನ್ನು ಐದು ದಿನಗಳ ಪೆರೋಲ್‌ನಲ್ಲಿ ಬಿಡುಗಡೆ ಮಾಡಲಾಯಿತು ಮತ್ತು ಅವರು ಪೂರ್ವ ಬರ್ಧಮಾನ್‌ನ ಮಾಂಟೇಶ್ವರ ಬ್ಲಾಕ್‌ನ ಕುಸುಮ್‌ಗ್ರಾಮ್‌ನಲ್ಲಿ ಮುಸ್ಲಿಂ ಕಾಯಿದೆಯ ಪ್ರಕಾರ ವಿವಾಹವಾದರು. ದಂಪತಿಗಳು ತಮ್ಮ ಪೆರೋಲ್ ಮುಗಿದ ನಂತರ ಅವರು ಜೈಲಿಗೆ ಮರಳಬೇಕಿದೆ.