ಮಹಾರಾಷ್ಟ್ರದ ಬೀಡ್ ಜಿಲ್ಲೆಯ ಮಜಲ್‌ಗಾಂವ್‌ನಲ್ಲಿ ಕಳೆದ ಮೂರು ತಿಂಗಳಿನಿಂದ ಕೈಗೆ ಸಿಕ್ಕ ನಾಯಿ ಮರಿಗಳ ಮಾರಣಹೋಮ ನಡೆಸುತ್ತಿದ್ದ ಕೋತಿಗಳು ಗ್ರಾಮಸ್ಥರಲ್ಲಿ ಆತಂಕ ಮೂಡಿಸಿದ್ದವು. ಮಜಲ್‌ಗಾಂವ್‌ನ ಲಾವೂಲ್ ಎಂಬ ಊರಿನಲ್ಲಿ ಇದ್ದ ಬದ್ದ ನಾಯಿಮರಿಗಳನ್ನೆಲ್ಲಾ ಮರಗಳ ಮೇಲೆ ಹೊತ್ತೊಯ್ದು ಕೆಳಗೆ ಬೀಳಿಸಿ ಸಾಯಿಸಿಬಿಟ್ಟಿದ್ದವು ಕೋತಿಗಳು.
ನಾಯಿಗಳನ್ನು ಕೊಲ್ಲುತ್ತಿದ್ದ ಎರಡು ಕೋತಿಗಳನ್ನು ನಾಗ್ಪುರ ವಿಭಾಗದ ಅರಣ್ಯ ಇಲಾಖೆ ಸಿಬ್ಬಂದಿ ಹಿಡಿದು ಕಾಡಿಗೆ ಬಿಟ್ಟಿರುವುದಾಗಿ ಬೀಡ್ ಅರಣ್ಯಾಧಿಕಾರಿ ಸಚಿನ್ ಕಾಂಡ್ ತಿಳಿಸಿದ್ದಾರೆ. ಬೀಡ್‌ನಿಂದ ನಾಗ್ಪುರಕ್ಕ ಈ ಕೋತಿಗಳನ್ನು ಕರೆದೊಯ್ದು, ಬಳಿಕ ಕಾಡಿಗೆ ಬಿಡಲಾಗಿದೆ ಎಂದು ತಿಳಿಸಲಾಗಿದೆ.
ನಾಯಿಗಳ ಗುಂಪೊಂದು ತನ್ನ ಗುಂಪಿನ ವಯಸ್ಕ ಕೋತಿಯೊಂದನ್ನು ಕೊಂದ ಸಿಟ್ಟಿನಲ್ಲಿರುವ ವಾನರ ಪಡೆ ನಾಯಿ ಮರಿಗಳನ್ನು ಕೊಲ್ಲುವ ಮೂಲಕ ತಮ್ಮ ಪ್ರತೀಕಾರ ತೀರಿಸಿಕೊಂಡಿವೆ. ಕಳೆದ ಒಂದು ತಿಂಗಳಲ್ಲಿ 250ರಷ್ಟು ನಾಯಿ ಮರಿಗಳನ್ನು ಎತ್ತರಕ್ಕೆ ಕೊಂಡೊಯ್ದು ಅವುಗಳನ್ನು ಬೀಳಿಸಿ ಸಾಯಿಸಿವೆ ಎಂದು ಹೇಳಲಾಗುತ್ತಿದೆ.
ಬ್ರಿಟನ್ ನಲ್ಲಿ ತೀವ್ರವಾಗಿ ಹಬ್ಬುತ್ತಿರುವ ಓಮಿಕ್ರಾನ್ ಸೋಂಕು…! ಹೆಚ್ಚಿದ ಆತಂಕ
ಜಿಲ್ಲೆಯ ಮಜಲ್ಗಾಂವ್‌ನಲ್ಲಿ ಘಟಿಸಿದ ಈ ವಿಚಿತ್ರ ಘಟನೆಯಲ್ಲಿ, ಮಂಗಗಳ ಗುಂಪಿನ ಕಣ್ಣಿಗೆ ನಾಯಿಮರಿಗಳು ಬೀಳುತ್ತಲೇ ಅವುಗಳನ್ನು ಎತ್ತಿಕೊಂಡು ಓಡಿ ಹೋಗುತ್ತಿವೆ. ಇಲ್ಲಿಂದ 10 ಕಿಮೀ ದೂರದಲ್ಲಿರುವ ಊರೊಂದರಲ್ಲಿ ಒಂದೇ ಒಂದು ನಾಯಿ ಮರಿ ಇಂದು ಉಳಿದಿಲ್ಲ. ಕೋತಿಗಳನ್ನು ಸೆರೆ ಹಿಡಿಯಲು ಗ್ರಾಮಸ್ಥರು ಅರಣ್ಯ ಇಲಾಖೆ ಸಿಬ್ಬಂದಿಗೆ ಕೇಳಿಕೊಂಡರೂ ಅವರಿಂದ ಒಂದೇ ಒಂದು ಕೋತಿಯನ್ನೂ ಇದುವರೆಗೂ ಹಿಡಿಯಲು ಆಗಿರಲಿಲ್ಲ.
ಕೋತಿ ಮರಿಯೊಂದನ್ನು ನಾಯಿಗಳು ಸೇರಿಕೊಂಡು ಕೊಂದ ಬಳಿಕ ನಾಯಿಗಳ ಮೇಲೆ ಭಾರೀ ಸಿಟ್ಟಿಗೆದ್ದಿರುವ ಕೋತಿಗಳು ನಾಯಿ ಮರಿಗಳನ್ನು ಮರಗಳ ಮೇಲಿಂದ ಎಸೆಯುವ ಮೂಲಕ ಅವುಗಳನ್ನು ಕೊಲ್ಲುತ್ತಿವೆ ಎಂದು ಗ್ರಾಮಸ್ಥರು ತಿಳಿಸುತ್ತಾರೆ.