
ಕಾಬೂಲ್‌ನಿಂದ ಟೇಕಾಫ್ ಆದ ಅಮೆರಿಕನ್ ವಿಮಾನವೊಂದರಿಂದ ಕೆಳಗೆ ಬಿದ್ದ ಮೃತಪಟ್ಟ ಇಬ್ಬರು ಅಫ್ಘನ್ನರ ಪಾಡನ್ನು ಕಂಡು ಮನುಕುಲ ಮುಮ್ಮಲ ಮರುಗಿದೆ. ಈ ಶಾಕಿಂಗ್ ಘಟನೆಯ ವಿಡಿಯೋ ಸಾಮಾಜಿಕ ಜಾಲತಾಣದಲ್ಲೂ ವೈರಲ್ ಆಗಿದೆ.
ತಾಲಿಬಾನ್ ಭೀತಿಯಿಂದ ವಿಮಾನದ ಒಳಗೆ ಕೂರಲು ಜಾಗ ಸಿಗದೇ ಅದರ ಚಕ್ರಕ್ಕೆ ನೇತುಹಾಕಿಕೊಂಡು ಕುಳಿತ ಈ ಇಬ್ಬರು ವ್ಯಕ್ತಿಗಳ ದೇಹಗಳು ವಾಲಿ ಸಲೇಕ್ ಎಂಬ ಭದ್ರತಾ ಸಿಬ್ಬಂದಿಯೊಬ್ಬರ ಮನೆ ಛಾವಣಿ ಮೇಲೆ ಬಿದ್ದಿವೆ.
ತಮ್ಮ ಮನೆಯ ಛಾವಣಿ ಮೇಲೆ ಜೋರಾಗಿ ಟೈರ್ ಸಿಡಿಯುವ ಶಬ್ದ ಬಂದ ಕೂಡಲೇ ಹೋಗಿ ನೋಡಿದಾಗ ಎರಡು ದೇಹಗಳು ರಕ್ತದ ಮಡುವಿನಲ್ಲಿ ಬಿದ್ದಿರುವುದು ವಾಲಿ ಸಲೇಕ್ ಕಣ್ಣಿಗೆ ಬಿದ್ದಿವೆ. ಈ ದೃಶ್ಯವನ್ನು ಕಂಡ ಸಲೇಕ್ ಮಡದಿ ಪ್ರಜ್ಞೆ ತಪ್ಪಿ ಬಿದ್ದಿದ್ದಾರೆ.
ಈ ರಾಶಿ ಮೇಲೆ ಪ್ರಭಾವ ಬೀರಲಿದೆ ಕೊನೆಯ ಚಂದ್ರಗ್ರಹಣ
ಈ ನತದೃಷ್ಟರು 30ರ ಆಸುಪಾಸಿನ ವಯಸ್ಸಿನವರು. ಕಾಬೂಲ್ ವಿಮಾನ ನಿಲ್ದಾಣದಲ್ಲಿ ನೆರೆದಿದ್ದ ಭಯಭೀತ ಸಹಸ್ರಾರು ಮಂದಿಯ ನಡುವೆ ಜೀವ ಉಳಿಸಿಕೊಳ್ಳುವ ಧಾವಂತದಲ್ಲಿ ವಿಮಾನದ ಚಕ್ರಕ್ಕೆ ಅಂಟಿಕೊಂಡ ಈ ಇಬ್ಬರು ವಿಮಾನ ಟೇಕಾಫ್ ಆದ ಕೆಲವೇ ನಿಮಿಷಗಳಲ್ಲಿ, 4ಕಿಮೀ ದೂರದಲ್ಲಿದ್ದ ಈ ಮನೆ ಮೇಲೆ ಬಿದ್ದಿದ್ದಾರೆ. ಬಿದ್ದ ರಭಸಕ್ಕೆ ಇಬ್ಬರ ದೇಹಗಳು ಛಿದ್ರಗೊಂಡಿದ್ದು, ತಲೆಬುರುಡೆ ನಜ್ಜುಗುಜ್ಜಾಗಿ, ಹೊಟ್ಟೆ ಹರಿದುಹೋಗಿದೆ.