ಅತಿಸಣ್ಣ ಉದ್ದಿಮೆಗಳನ್ನು ಆರಂಭಿಸಲು ಸಾಲ ನೀಡಲಾಗುವ ಪ್ರಧಾನಮಂತ್ರಿ ಮುದ್ರಾ ಯೋಜನೆ ಹೆಸರಲ್ಲಿ ನಕಲಿ ವೆಬ್ಸೈಟ್ ಆರಂಭಿಸಿ, ಸುಮಾರು 1500 ಜನರಿಗೆ ವಂಚಿಸಿದ್ದ ಖದೀಮರ ತಂಡವನ್ನು ದೆಹಲಿ ಪೊಲೀಸರು ಬಂಧಿಸಿದ್ದಾರೆ.
ಸುಮಾರು 60 ಜನರಿಂದ 10 ಲಕ್ಷ ರೂ.ಗೂ ಹೆಚ್ಚು ಹಣ ಪಡೆದಿರುವ ಆರೋಪಿಗಳು ಬೋಗಸ್ ವೆಬ್ಸೈಟ್ ಮಾಡಿಕೊಂಡು ವಂಚನೆಗೆ ಇಳಿದಿದ್ದರು. ಪಿಎಂಎಂವೈ ಯೋಜನೆಯ ನಕಲಿ ಪ್ರಮಾಣಪತ್ರಗಳನ್ನು ಕೂಡ ನೀಡುತ್ತಿದ್ದ ಈ ಕಳ್ಳರ ಗ್ಯಾಂಗ್, ಘಾಜಿಯಾಬಾದ್ನಲ್ಲಿ ಮುದ್ರಾ ಯೋಜನೆ ಹೆಸರಲ್ಲಿ ನಕಲಿ ಕಚೇರಿಯೊಂದನ್ನು ಕೂಡ ತೆರೆದಿತ್ತು ಎನ್ನುವುದು ಬೆಳಕಿಗೆ ಬಂದಿದೆ.
BIG BREAKING: ಒಂದೇ ದಿನದಲ್ಲಿ ಮತ್ತೆ 42,766 ಜನರಲ್ಲಿ ಕೋವಿಡ್ ಪಾಸಿಟಿವ್; ದಿನದಿಂದ ದಿನಕ್ಕೆ ಹೆಚ್ಚುತ್ತಿದೆ 3ನೇ ಅಲೆ ಆತಂಕ
ಆರೋಪಿಗಳನ್ನು ಇಂದರ್ಜೀತ್ ಪಾಂಡೆ ಹಾಗೂ ಅಮಿತ್ ಕುಮಾರ್ ಎಂದು ಗುರುತಿಸಲಾಗಿದೆ. ಎರಡು ತಿಂಗಳಲ್ಲಿ ಇವರು 10 ಲಕ್ಷ ರೂ. ವಂಚನೆ ಮಾಡಿದ್ದಾರೆ. ಗ್ಯಾಂಗ್ ಬಳಸುತ್ತಿದ್ದ ಲ್ಯಾಪ್ಟಾಪ್ಗಳು, ಸ್ಮಾರ್ಟ್ ಫೋನ್ಗಳು, ರಿಜಿಸ್ಟರ್ಗಳನ್ನು ವಶಕ್ಕೆ ಪಡೆಯಲಾಗಿದೆ. ತನಿಖಾ ತಂಡವು ವಿಚಾರಣೆ ನಡೆಸಿ, ಇನ್ನೂ ಹಲವು ಕಡೆಗಳಲ್ಲಿ ಶೋಧಕಾರ್ಯ ನಡೆಸುತ್ತಿದೆ ಎಂದು ದೆಹಲಿ ಅಪರಾಧ ವಿಭಾಗದ ಜಂಟಿ ಪೊಲೀಸ್ ಆಯುಕ್ತ ಅಲೋಕ್ ಕುಮಾರ್ ತಿಳಿಸಿದ್ದಾರೆ.
2015ರಲ್ಲಿ ಮುದ್ರಾ ಯೋಜನೆಗೆ ಪ್ರಧಾನಿ ಮೋದಿ ಅವರು ಚಾಲನೆ ನೀಡಿದರು. ಕೃಷಿಯೇತರ ಆದಾಯ ಯೋಜನೆಯುಳ್ಳ ದೇಶದ ಪ್ರಜೆಗಳು ಇದರ ಲಾಭ ಪಡೆಯಬಹುದಾಗಿದೆ. ಸುಮಾರು 10 ಲಕ್ಷ ರೂ.ಗಳವರೆಗೆ ಈ ಯೋಜನೆ ಅಡಿಯಲ್ಲ ಸಾಲ ದೊರೆಯುತ್ತದೆ.