alex Certify ದ್ವಿಚಕ್ರವಾಹನದಲ್ಲಿ ಒಂಟೆ ಹೊತ್ತೊಯ್ದ ಭೂಪ; ವಿಡಿಯೋ ʼವೈರಲ್ʼ | Kannada Dunia | Kannada News | Karnataka News | India News
ಕನ್ನಡ ದುನಿಯಾ
    Dailyhunt JioNews

Kannada Duniya

ದ್ವಿಚಕ್ರವಾಹನದಲ್ಲಿ ಒಂಟೆ ಹೊತ್ತೊಯ್ದ ಭೂಪ; ವಿಡಿಯೋ ʼವೈರಲ್ʼ

ತೀವ್ರತರವಾದ ತಾಪಮಾನಕ್ಕೆ ಹೊಂದಿಕೊಳ್ಳುವ ಒಂಟೆಗಳನ್ನು ಸಾಮಾನ್ಯವಾಗಿ ಸಾರಿಗೆಗಾಗಿ ಬಳಸಲಾಗುತ್ತದೆ. ಹೀಗಾಗಿಯೇ ಮರುಭೂಮಿಗಳಲ್ಲಿ ಇವುಗಳ ಬಳಕೆ ಹೆಚ್ಚು. ಆದರೆ, ಸಾಮಾಜಿಕ ಜಾಲತಾಣಗಳಲ್ಲಿ ಹರಿದಾಡುತ್ತಿರುವ ಹೊಸ ವೀಡಿಯೋದಲ್ಲಿ ಒಂಟೆಯನ್ನು ಮೋಟಾರ್ ಸೈಕಲ್‌ನಲ್ಲಿ ಸಾಗಿಸುತ್ತಿರುವ ಅಪರೂಪದ ದೃಶ್ಯ ಸೆರೆಯಾಗಿದೆ.

ಜಿಸ್ಟ್ ನ್ಯೂಸ್ ಇನ್‌ಸ್ಟಾಗ್ರಾಮ್‌ನಲ್ಲಿ ಹಂಚಿಕೊಂಡ ವೈರಲ್ ವೀಡಿಯೊದಲ್ಲಿ ಇಬ್ಬರು ಪುರುಷರು ತಮ್ಮ ಮೋಟಾರ್‌ಸೈಕಲ್‌ನಲ್ಲಿ ಜನನಿಬಿಡ ರಸ್ತೆಯಲ್ಲಿ ಒಂಟೆಯನ್ನು ಹೊತ್ತೊಯ್ಯುತ್ತಿರುವುದನ್ನು ಕಾಣಬಹುದಾಗಿದೆ. ಸವಾರಿಯ ಸಮಯದಲ್ಲಿ ಒಂಟೆಯ ಪಾದಗಳನ್ನು ಕ್ರೂರವಾಗಿ ಮಡಚಿ ಕಟ್ಟಿದ್ದಾರೆ, ವೀಡಿಯೊದಲ್ಲಿನ ಸೈನ್ ಬೋರ್ಡ್‌ಗಳಲ್ಲಿ ಅರೇಬಿಕ್ ಇದೆ.

ಇಬ್ಬರು ಬೈಕ್‌ನಲ್ಲಿ ಒಂಟೆಯನ್ನು ಹೊತ್ತೊಯ್ಯುತ್ತಿರುವುದು ಕಂಡಿದ್ದು, ವೀಡಿಯೊ ನೆಟ್ಟಿಗರಲ್ಲಿ ಆಘಾತವನ್ನುಂಟು ಮಾಡಿದೆ. ಆದಾಗ್ಯೂ, ಈ ವೀಡಿಯೊವನ್ನು ಯಾವಾಗ ಅಥವಾ ಎಲ್ಲಿ ರೆಕಾರ್ಡ್ ಮಾಡಲಾಗಿದೆ ಎಂಬುದರ ಕುರಿತು ಯಾವುದೇ ಮಾಹಿತಿ ಲಭ್ಯವಿಲ್ಲ.

ಈ ವಿಡಿಯೋಗೆ ಇಂಟರ್ನೆಟ್‌ ಬಳಕೆದಾರರಿಂದ ತೀವ್ರ ಟೀಕೆ ವ್ಯಕ್ತವಾಗಿದ್ದು, ಪ್ರಾಣಿ ಹಿಂಸೆಗಾಗಿ ದೂಷಿಸಿದ್ದಾರೆ. “ಬೈಕ್‌ನಲ್ಲಿ ಕರೆದುಕೊಂಡು ಹೋಗಲು ಬಲವಂತವಾಗಿ ಅದರ ಪಾದಗಳನ್ನು ಮಡಚಿದ್ದಾರೆ ಮತ್ತು ಲಗೇಜ್‌ನಂತೆ ಅಸ್ವಾಭಾವಿಕವಾಗಿ ಗಟ್ಟಿಯಾಗಿ ಕಟ್ಟಿದ್ದಾರೆ” ಎಂದು ಬಳಕೆದಾರರು ಬರೆದಿದ್ದಾರೆ.

 

View this post on Instagram

 

A post shared by Jist (@jist.news)

 

Opinion Poll

  • ʼಮುಡಾʼ ಹಗರಣದಲ್ಲಿ ರಾಜೀನಾಮೆ ನೀಡ್ತಾರಾ ಸಿಎಂ ಸಿದ್ದರಾಮಯ್ಯ ?

    View Results

    Loading ... Loading ...