ಸಿಲ್ಚಾರ್: ಅಸ್ಸಾಂನ ಗುವಾಹಟಿಯ ನರೇಂಗಿ ರೈಲು ನಿಲ್ದಾಣದ ಬಳಿ ಶನಿವಾರ ವೇಗವಾಗಿ ಬಂದ ರೈಲು ಡಿಕ್ಕಿ ಹೊಡೆದು ಇಬ್ಬರು ಕಾರ್ಮಿಕರು ಸಾವನ್ನಪ್ಪಿದ್ದು, ಮೂವರು ಗಾಯಗೊಂಡಿದ್ದಾರೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ.
ಕಾರ್ಮಿಕರ ಗುಂಪೊಂದು ಹಳಿ ದಾಟುತ್ತಿದ್ದ ವೇಳೆ ಲೋಕಲ್ ರೈಲು ಡಿಕ್ಕಿ ಹೊಡೆದಿದೆ. ರೈಲ್ವೇ ಪೊಲೀಸರ(ಜಿಆರ್ಪಿ) ತಂಡವು ತಕ್ಷಣ ಸ್ಥಳಕ್ಕೆ ಆಗಮಿಸಿ ಮೃತದೇಹಗಳನ್ನು ಹೊರತೆಗೆದಿದೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ.
ಮೃತದೇಹಗಳನ್ನು ಮರಣೋತ್ತರ ಪರೀಕ್ಷೆಗಾಗಿ ಗೌಹಾಟಿ ವೈದ್ಯಕೀಯ ಕಾಲೇಜು ಮತ್ತು ಆಸ್ಪತ್ರೆಗೆ(ಜಿಎಂಸಿಹೆಚ್) ಕಳುಹಿಸಲಾಗಿದೆ. ಗಾಯಾಳುಗಳನ್ನೂ ಜಿಎಂಸಿಎಚ್ಗೆ ದಾಖಲಿಸಲಾಗಿದೆ. ಪ್ರಾಥಮಿಕ ಮಾಹಿತಿಗಳ ಪ್ರಕಾರ, ಕಾರ್ಮಿಕರು ರೈಲು ಹೋಗುತ್ತಿರುವುದನ್ನು ಗಮನಿಸದೆ ಹಳಿಗಳನ್ನು ದಾಟುತ್ತಿದ್ದರು. ಮೃತರನ್ನು ಶಾಹಿನೂರ್ ಇಸ್ಲಾಂ ಮತ್ತು ಹಫೀಜುಲ್ ರೆಹಮಾನ್ ಎಂದು ಗುರುತಿಸಲಾಗಿದ್ದು, ಇಬ್ಬರೂ ಗುವಾಹಟಿಯ ನರೇಂಗಿ ರೈಲು ನಿಲ್ದಾಣದ ಬಳಿಯ ಬಿರ್ಕುಚಿ ಪ್ರದೇಶದ ನಿವಾಸಿಗಳು ಎಂದು ಹೇಳಲಾಗಿದೆ.