ಎಲ್ಲೆಡೆ ಭೀತಿ ಮೂಡಿಸುತ್ತಿರುವ ಒಮಿಕ್ರಾನ್ ಅವತಾರಿ ಕೋವಿಡ್ ವ್ಯಾಪಿಸದಂತೆ ಜಗತ್ತಿನಾದ್ಯಂತ ಸರ್ಕಾರಗಳು ಕಟ್ಟೆಚ್ಚರ ವಹಿಸಿವೆ. ಇದರ ನಡುವೆಯೂ ಜನರಲ್ಲಿ ಈ ಸೋಂಕಿನ ಬಗ್ಗೆ ಅರಿವಿನ ಕೊರತೆಯಿಂದ ಆಗಾಗ ಒಂದಷ್ಟು ಎಡವಟ್ಟುಗಳು ಆಗುತ್ತಿರುವುದು ವಿಷಾದನೀಯ.
ಸಿಂಗಪುರ ಅಂತಾರಾಷ್ಟ್ರೀಯ ವಿಮಾನ ನಿಲ್ದಾಣದ ಪ್ರಯಾಣಿಕ ಸೇವಾ ಸಿಬ್ಬಂದಿಯಲ್ಲಿ ಒಬ್ಬರಿಗೆ ಬೂಸ್ಟರ್ ಡೋಸ್ ಪಡೆದಿದ್ದರೂ ಸಹ ಒಮಿಕ್ರಾನ್ ಪತ್ತೆಯಲ್ಲಿ ಪಾಸಿಟಿವ್ ಕಂಡುಬಂದಿದ್ದಾರೆ.
ಚಾಂಗಿ ವಿಮಾನ ನಿಲ್ದಾಣದಲ್ಲಿ ಟರ್ಮಿನಲ್ 1 ಮತ್ತು 3ರಲ್ಲಿ ಕೆಲಸ ಮಾಡುವ 24 ವರ್ಷದ ಯುವತಿಯೊಬ್ಬರು ತಮ್ಮ ಕೆಲಸದ ವೇಳೆ ಒಮಿಕ್ರಾನ್ ಸೋಂಕಿತ ಪ್ರಯಾಣಿಕರೊಬ್ಬರ ತಪಾಸಣೆ ನಡೆಸಿದಾಗ ಅವರಿಗೆ ಈ ಸೋಂಕು ಅಲ್ಲಿಂದ ಬಂದಿರಬಹುದು ಎಂದು ಸಿಂಗಪುರದ ಆರೋಗ್ಯ ಸಚಿವಾಲಯ ತಿಳಿಸಿದೆ.
BIG NEWS: ಕಲಾಪ ಮೊಟಕುಗೊಳಿಸುವ ಪ್ರಶ್ನೆಯೇ ಇಲ್ಲ; ಅಧಿವೇಶನಕ್ಕೆ 2 ಡೋಸ್ ಲಸಿಕೆ ಕಡ್ಡಾಯ ಎಂದ ಸಚಿವ ಆರ್. ಅಶೋಕ್
ಇದೇ ವೇಳೆ, ಜರ್ಮನಿಯಿಂದ ಸಿಂಗಪುರ ಏರ್‌ಲೈನ್ ವಿಮಾನ ಎಸ್‌ಕ್ಯೂ325ನಲ್ಲಿ ಆಗಮಿಸಿದ್ದ 46 ವರ್ಷದ ಮಹಿಳೆಯೊಬ್ಬರು ಸಹ ಪ್ರಾಥಮಿಕವಾಗಿ ಒಮಿಕ್ರಾನ್ ಪಾಸಿಟಿವ್ ಎಂದು ಕಂಡುಬಂದಿದ್ದಾರೆ.
ಫ್ರಾನ್ಸ್‌ನಲ್ಲಿ ವಿಮಾನವೇರುವ ಮುನ್ನ ನೆಗೆಟಿವ್ ಎಂದು ಪರೀಕ್ಷೆಯಲ್ಲಿ ಕಂಡುಬಂದ ಈ ಮಹಿಳೆ ಸಿಂಗಪುರದಲ್ಲಿ ಇಳಿಯುತ್ತಲೇ ಮಾಡಿದ ಪಿಸಿಆರ್ ಪರೀಕ್ಷೆಯಲ್ಲೂ ನೆಗೆಟಿವ್ ಕಂಡುಬಂದಿದ್ದರು. ಆದರೆ ಬುಧವಾರದಂದು ನೆಗಡಿ ಬಂದ ಬಳಿಕ ಮಾಡಿದ ಪರೀಕ್ಷೆಯಲ್ಲಿ ಪಾಸಿಟಿವ್ ಆಗಿಬಿಟ್ಟಿದ್ದಾರೆ.
ಸಿಂಗಪುರದಲ್ಲಿ ಸಾಂಕ್ರಮಿಕ ಆರಂಭಗೊಂಡಾಗಿನಿಂದ ಈವರೆಗೆ 2,71,979ರಷ್ಟು ಕೋವಿಡ್ ಕೇಸುಗಳು ಪತ್ತೆಯಾಗಿದ್ದು, 779 ಮಂದಿ ಮೃತಪಟ್ಟಿದ್ದಾರೆ.