5.5 ಲಕ್ಷ ರೂಪಾಯಿಗೆ ಶುರುವಾದ ವಿವಾದವು ಕೊಲೆಯಲ್ಲಿ ಅಂತ್ಯವಾದ ಘಟನೆಯು ಹರಿಯಾಣದ ಪಂಚಕುಲ ಕೊಲ್ಲೆಯ ಮೋರ್ನಿ ರಸ್ತೆಯಲ್ಲಿ ನಡೆದಿದೆ. ವ್ಯಕ್ತಿಯನ್ನು ಕೊಲೆ ಮಾಡಿದ ಆರೋಪಿಗಳು ಆತನ ಮೃತದೇಹವನ್ನು ಕಂದಕಕ್ಕೆ ಎಸೆದಿದ್ದಾರೆ. ಮೃತ ವ್ಯಕ್ತಿಯನ್ನು ಸೈದಾಪುರ ಗ್ರಾಮದ 34 ವರ್ಷದ ರಾಜೀವ್ ಸೈನಿ ಎಂದು ಗುರುತಿಸಲಾಗಿದೆ.
ಪೊಲೀಸರು ರಾಜೀವ್ ಸೈನಿ ಮೃತದೇಹವನ್ನು ಸೆಕ್ಟರ್ 6ರ ಸಾರ್ವಜನಿಕ ಆಸ್ಪತ್ರೆಯ ಶವಾಗಾರದಲ್ಲಿ ಇರಿಸಲಾಗಿದೆ. ಕೊಲೆ ಆರೋಪಿಗಳಾದ ಗುರುವಿಂದರ್ ಹಾಗೂ ಜಸ್ಪಾಲ್ರನ್ನು ಬಂಧಿಸಲಾಗಿದೆ.
ಪ್ರಕರಣದ ವಿಚಾರವಾಗಿ ಮಾತನಾಡಿದ ಎಎಸ್ಐ ಪ್ರದೀಪ್ ಕುಮಾರ್, ಸೋಮವಾರ ರಾತ್ರಿ ನಮ್ಮ ತಂಡದೊಂದಿಗೆ ಗಸ್ತು ತಿರುಗುತ್ತಿದ್ದ ವೇಳೆ ನಾಡಾ ಸಾಹಿಬ್ನಿಂದ ಮೋರ್ನಿ ರಸ್ತೆಗೆ ಚಲಿಸುತ್ತಿದ್ದ ಕಾರನ್ನು ನೋಡಿದೆವು. ಕಾರಿನೊಳಗೆ ಇಬ್ಬರು ವ್ಯಕ್ತಿಗಳಿದ್ದರು. ಇವರಿಬ್ಬರು ತಾವು ಈ ಸ್ಥಳವನ್ನು ನೋಡಲು ಬಂದಿದ್ದಾಗಿ ಹೇಳಿದ್ದಾರೆ. ಕಾರಿನ ಫೋಟೋವನ್ನು ತೆಗೆಯಲು ಹೋಮ್ಗಾರ್ಡ್ ಮುಂದಾದಾಗ ಆರೋಪಿಗಳು ಅವರ ಮೇಲೆಯೇ ಕಾರನ್ನು ಹತ್ತಿಸಲು ಯತ್ನಿಸಿದ್ದರು ಎಂದು ಹೇಳಿದ್ದಾರೆ.
ಸ್ಥಳೀಯ ಪೊಲೀಸರು ನೀಡಿರುವ ಮಾಹಿತಿಯ ಪ್ರಕಾರ, ಅಪರಾಧ ಸ್ಥಳದಿಂದ ಆರೋಪಿಗಳು ತಪ್ಪಿಸಿಕೊಳ್ಳಲು ಯತ್ನಿಸಿದಾಗ ಕಾರು ನಿಯಂತ್ರಣ ತಪ್ಪಿ ಕಂದಕಕ್ಕೆ ಬೀಳಲು ಮುಂದಾಗಿತ್ತು. ಇದನ್ನು ತಪ್ಪಿಸಲು ಚಾಲಕ ಕಾರನ್ನು ಬೇರೆ ಕಡೆ ತಿರುಗಿಸಿದನು. ಈ ವೇಳೆ ಕಾರು ಗೋಡೆಗೆ ಅಪ್ಪಳಿಸಿದ್ದು, ಕೊಲೆಗಾರರು ಸ್ಥಳದಿಂದ ಪರಾರಿಯಾಗಿದ್ದಾರೆ.
ಮೃತ ರಾಜೀವ್ ತಾಯಿ ನೀಡಿರುವ ಮಾಹಿತಿಯ ಪ್ರಕಾರ, ನನ್ನ ಪುತ್ರ ಫ್ಯಾಕ್ಟರಿಯೊಂದರಲ್ಲಿ ಕೆಲಸ ಮಾಡುತ್ತಿದ್ದ. ಆದರೆ ಕೊರೊನಾ ಕಾರಣದಿಂದಾಗಿ ಕಾರ್ಖಾನೆ ಬಂದ್ ಆಗಿತ್ತು. ಕೆಲಸವನ್ನು ಅರಿಸಿ ಕೆನಡಾಗೆ ಹೋಗಲು ರಾಜೀವ್ ಪ್ಲಾನ್ ಮಾಡಿದ್ದ ಎಂದು ಹೇಳಿದ್ದಾರೆ.