
ಪ್ರೀತಿ ಕುರುಡು ಎಂಬ ಮಾತಿದೆ. ಹಾಗೆಯೇ ಪ್ರೀತಿ ಕೆಲವೊಮ್ಮೆ ಮೂರ್ಖತನವನ್ನು ಮೀರಿಸುತ್ತದೆ, ಅಸಾಧ್ಯವಾದ ಬಹಳಷ್ಟು ಕೆಲಸಗಳನ್ನು ಮಾಡಿಸುತ್ತದೆ.
ಪ್ರೀತಿ ಒಂದು ಸುಂದರ ಭಾವನೆ ಆದರೂ ಸಹ ನಿಸ್ಸಂದೇಹವಾಗಿ ದುಡುಕಿನ ಮತ್ತು ಹಠಾತ್ ನಿರ್ಧಾರಗಳನ್ನು ತೆಗೆದುಕೊಳ್ಳಲು ಕಾರಣವಾಗಬಹುದು.
ಇಷ್ಟೊಂದು ಪೀಠಿಕೆ ಏಕೆಂದರೆ ಮಹಾರಾಷ್ಟ್ರದ ಪೈಥಾನ್ ಜಿಲ್ಲೆಯ ಘಟನೆಯೊಂದರಲ್ಲಿ 17 ವರ್ಷದ ಇಬ್ಬರು ಹುಡುಗಿಯರು ಸಾರ್ವಜನಿಕವಾಗಿ ಹುಡುಗನ ವಿಚಾರದಲ್ಲಿ ಜಗಳವಾಡಿದ್ದಾರೆ.
ಬುಧವಾರ ಬೆಳಗ್ಗೆ ಪೈಥಾನ್ ನ ಜನನಿಬಿಡ ಬಸ್ ನಿಲ್ದಾಣದಲ್ಲಿ ಈ ಘಟನೆ ನಡೆದಿದೆ. ಒಬ್ಬ ಹುಡುಗಿ ಹುಡುಗನ ಜೊತೆ ಬಸ್ ಸ್ಟ್ಯಾಂಡ್ ಗೆ ಬಂದಿದ್ದಳು. ಈ ವಿಷಯ ತಿಳಿದ ಮತ್ತೊಬ್ಬ ಹುಡುಗಿ ಕೂಡ ಸ್ಥಳಕ್ಕಾಗಮಿಸಿದ್ದಾಳೆ. ಈ ವೇಳೆ ಆ ಹುಡುಗಿಯರ ನಡುವೆ ತೀವ್ರ ವಾಗ್ವಾದ ನಡೆದಿದ್ದು, ಅದು ಜಗಳಕ್ಕೆ ತಿರುಗಿದೆ.
ಹುಡುಗಿಯರು ಹೊಡೆದಾಡಿಕೊಂಡಾಗ ಆ ಹುಡುಗ ಸ್ಥಳದಿಂದ ತಪ್ಪಿಸಿಕೊಂಡಿದ್ದು, ಆ ಹುಡುಗಿಯರನ್ನು ಪೊಲೀಸ್ ಠಾಣೆಗೆ ಕರೆದೊಯ್ದು ಕೌನ್ಸೆಲಿಂಗ್ ನಂತರ ಬಿಡುಗಡೆ ಮಾಡಲಾಗಿದೆ.