ಮುಂಬೈ: ಸೋದರಿ ಮೇಲೆಯೇ ನಿರಂತರ ಆರು ವರ್ಷ ಅತ್ಯಾಚಾರವೆಸಗಿದ ಇಬ್ಬರಿಗೆ ಮುಂಬೈನ ಡಿಂಡೋಶಿ ಸೆಷನ್ಸ್ ಕೋರ್ಟ್ 10 ವರ್ಷಗಳ ಕಠಿಣ ಕಾರಾಗೃಹ ಶಿಕ್ಷೆ ವಿಧಿಸಿ ತೀರ್ಪು ನೀಡಿದೆ.
ಕಾಮುಕ ಸಹೋದರರಿಗೆ ಈಗ 31 ಮತ್ತು 28 ವರ್ಷ ವಯಸ್ಸಾಗಿದೆ. ಅವರ ಸೋದರಿಗೆ 11 ವರ್ಷದ ಸಂದರ್ಭದಲ್ಲಿ ಇವರಿಬ್ಬರೂ ಲೈಂಗಿಕ ದೌರ್ಜನ್ಯವೆಸಗಿದ್ದಾರೆ. ನಿರಂತರ ಆರು ವರ್ಷ ತಂಗಿಯನ್ನು ಬೆದರಿಸಿ ಅತ್ಯಾಚಾರ ಎಸಗಿದ್ದರು. ಸಂತ್ರಸ್ತೆ ತಂದೆ ಮದ್ಯವ್ಯಸನಿಯಾಗಿದ್ದು, ಮನೆಯ ಆಗುಹೋಗುಗಳ ಬಗ್ಗೆ ತಲೆಕೆಡಿಸಿಕೊಂಡಿರಲಿಲ್ಲ.
ತಾಯಿ, ಅಜ್ಜಿಯ ಬಳಿ ಅಳಲು ತೋಡಿಕೊಂಡರೂ ಅವರು ಬಾಲಕಿ ಮಾತು ನಂಬಿರಲಿಲ್ಲ. ಇದರಿಂದಾಗಿ ಆಕೆಯ ಸಹೋದರರು ನಿರಂತರ ಅತ್ಯಾಚಾರ ಎಸಗಿದ್ದಾರೆ. 2016 ರಲ್ಲಿ ಬಾಲಕಿಗೆ 16 ವರ್ಷವಾದಾಗ ಪೊಲೀಸರ ಮೊರೆ ಹೋಗಿದ್ದಳು. ಕಳೆದ ವರ್ಷ ನ್ಯಾಯಾಲಯದಿಂದ ಪ್ರಕರಣದ ಸಾಕ್ಷ್ಯ ವಿಚಾರಣೆ ಪೂರ್ಣಗೊಳಿಸಲಾಗಿದ್ದು, ಸಂತ್ರಸ್ತೆಗೆ ಈಗ 18 ವರ್ಷವಾಗಿದೆ. ವಿಚಾರಣೆ ನಡೆಸಿದ ದಿಂಡೋಷಿ ಸೆಷನ್ಸ್ ಕೋರ್ಟ್ ಕಾಮುಕ ಸೋದರರಿಗೆ 10 ವರ್ಷ ಕಠಿಣ ಕಾರಾಗೃಹ ಶಿಕ್ಷೆ ವಿಧಿಸಿ ತೀರ್ಪು ನೀಡಿದೆ.