alex Certify ಸಿಸಿ ಟಿವಿಯಲ್ಲಿ ಸೆರೆಯಾಯ್ತು ಹಾಡಹಗಲೇ ನಡೆದ ದರೋಡೆ ಕೃತ್ಯ | Kannada Dunia | Kannada News | Karnataka News | India News
ಕನ್ನಡ ದುನಿಯಾ
    Dailyhunt JioNews

Kannada Duniya

ಸಿಸಿ ಟಿವಿಯಲ್ಲಿ ಸೆರೆಯಾಯ್ತು ಹಾಡಹಗಲೇ ನಡೆದ ದರೋಡೆ ಕೃತ್ಯ

ಬೈಕ್ ಮೇಲೆ ಬಂದ ಖದೀಮರು, ಎಲ್ಲರ ಮುಂದೆಯೇ ಮಹಿಳೆಯ ಬಳಿ ಇದ್ದ 42,500 ರೂಪಾಯಿ ಎಗರಿಸಿಕೊಂಡು ಹೋಗಿದ್ದಾರೆ.

ಇದು ಲುಧಿಯಾನಾದ ಮಾಚಿವಾಡಾ ಎಂಬಲ್ಲಿ ನಡೆದ ಘಟನೆ. ನಿಶುರಾಣಿ ಎಂಬಾಕೆ ಬ್ಯಾಂಕ್ ಉದ್ಯೋಗಿ. ಕಚೇರಿಯಲ್ಲಿ ಜನ ಕಡಿಮೆ ಇದ್ದ ಸಮಯದಲ್ಲಿ ಬಂದ ಇಬ್ಬರು ಲೂಟಿಕೋರರು, ಎಟಿಎಂನಿಂದ ಹಣ ಡ್ರಾ ಮಾಡಲು ಸಹಾಯ ಕೇಳಿದ್ದಾರೆ. ಜೊತೆಗೆ ತಾಯಿಗೆ ಅನಾರೋಗ್ಯ ತುರ್ತಾಗಿ ಹಣ ಬೇಕು ಎಂದು ಹೇಳಿದ್ದರಿಂದ, ನಿಶಾರಾಣಿಯವರು ಸಹಾಯ ಮಾಡುವುದಕ್ಕೆ ಮುಂದಾಗಿದ್ದಾರೆ.

ಈ ಕಳ್ಳರು ನಿಶಾರಾಣಿ ಕ್ಯಾಬಿನ್‌ ನಿಂದ ಹೊರಗೆ ಬರೋದನ್ನೇ ಕಾದು, ಕೊನೆಗೆ ಅವರ ದುಪಟ್ಟಾದಿಂದ ಕುತ್ತಿಗೆ ಪಟ್ಟಿಯನ್ನ ಹಿಡಿದು ಒತ್ತಿದ್ದಾರೆ. ಆ ಸಮಯದಲ್ಲಿ ಅವರು ಮಿಸುಕಾಡೋಕೂ ಆಗದೇ ಒದ್ದಾಡಿದ್ದಾರೆ. ಅಲ್ಲಿ ಸಹಾಯಕ್ಕೂ ಯಾರೂ ಇರಲಿಲ್ಲ. ಕೊನೆಗೆ ಈ ಕಳ್ಳರು ಅದೇ ಕ್ಯಾಬಿನ್ ಒಳಗೆ ಇದ್ದ 42,500 ನಗದು ಹಾಗೂ ಮೊಬೈಲ್ ಫೋನ್ ತೆಗೆದುಕೊಂಡು ಎಸ್ಕೇಪ್ ಆಗಿದ್ದಾರೆ. ಪೊಲೀಸರು ಘಟನೆಯನ್ನ ದಾಖಲಿಸಿಕೊಂಡು ತನಿಖೆ ನಡೆಸುತ್ತಿದ್ದಾರೆ.

Opinion Poll

  • ʼಮುಡಾʼ ಹಗರಣದಲ್ಲಿ ರಾಜೀನಾಮೆ ನೀಡ್ತಾರಾ ಸಿಎಂ ಸಿದ್ದರಾಮಯ್ಯ ?

    View Results

    Loading ... Loading ...